Wednesday 14th, May 2025
canara news

ಕಥೊಲಿಕ್ ಸಭಾ - ಅಲ್ಪ ಸಂಖ್ಯಾಕರ ವಿವಿಧ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮ

Published On : 19 Jun 2018   |  Reported By : Bernard J Costa


ಕುಂದಾಪುರ, ಜೂ.18: ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾಕರ ಅಭಿವ್ರದ್ದಿ ನಿಗಮ, ಹಾಗೆ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾಕರರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕುಂದಾಪುರ ವಲಯ ಕಥೊಲಿಕ್ ಸಭಾ ಸಂತ ಮೇರಿಸ್ ಪಿ.ಯು. ಕಾಲೇಜ್ ಸಭಾಭವನದಲ್ಲಿ ಆಯೋಜಿಸಲ್ಪಟ್ಟಿತು. ಅಲ್ಪ ಸಂಖ್ಯಾಕರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ದ, ಸಿಖ್ ಮತ್ತು ಪಾರ್ಸಿ ಸಮುದಾಯದವರಿಗೆ ಸರಕಾರದಿಂದ ಸಿಗುವ ವಿವಿಧ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿತ್ತು.

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಹ ಸಂಚಾಲಕರಾದ ಸಲ್ಮಾನ್ ಅಲ್ಪಸಂಖ್ಯಾತರಿಗೆ ಸರಕಾರದಿಂದ ಸಿಗುವ ಸೌಲಭ್ಯ, ಶಿಕ್ಷಣಕ್ಕೆ ಸಿಗುವ ಸ್ಕೋಲರ್‍ಶಿಪ್, ಸಾಲಾ, ಉದ್ಯೋಗಿಗಳಿಗೆ ಬೇಕಾಗಿರುವ ಸಾಲ ಸೌಲಭ್ಯ, ಶ್ರಮಿಕ ಸಾಲ ಇನ್ನಿತರ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ಎಸ್.ಎ.ಎಸ್.ಟಿ. ವಿಭಾಗದ ಸಹ ಸಂಚಾಲಕರಾದ ಸಚ್ಚಿನಾಂದ ಆರೋಗ್ಯ ಭಾಗ್ಯ, ಆರೋಗ್ಯ ಕಾರ್ಡಗಳ ಬಗ್ಗೆ, ಸರಕಾರಿ ಆಸ್ಪತ್ರೆಯಲ್ಲಿ ಸಿಗುವ ಉಚಿತ ಚಿಕ್ಸಿತೆಗಳ ಬಗ್ಗೆ ಅರಿವು ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಸಂಘಟನೇಯ ಅಧ್ಯಾತ್ಮಿಕ ನಿರ್ದೇಶರಾದ ವಂ|ಫಾ|ಅನಿಲ್ ಡಿಸೋಜಾ ವಹಿಸಿ ‘ನಮಗೆ ಅಧಿಕಾರಿಗಳು ನಮಗೆ ಸಿಗುವ ಸೌಲಭ್ಯಗಳ ಅರಿವು ಮೂಡಿಸಿದ್ದಾರೆ, ಅದನ್ನು ಕಿವಿಯಲ್ಲಿ ಕೇಳಿ ಬಿಡುವುದಲ್ಲಾ, ಅದರ ಸದುಪಯೋಗವನ್ನು ಪಡೆದುಕೊಳ್ಳಿ ಮತ್ತು ಇಅತರರಿಗೆ ಮಾಹಿತಿ ನೀಡಿರಿ’ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಸಂಘಟನೇಯ ನೂತನ ಸದಸ್ಯತ್ವಗಳ ನೊಂದಣಿ ಅಭಿಯಾನ ಕಾರ್ಯಕ್ರಮದ ಸಂಚಾಲಕರಾದ ವಿಲ್ಸನ್ ಡಿಆಲ್ಮೇಡಾ ಚಾಲನೆಯನ್ನು ನೀಡಿದರು. ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷ ಮೈಕಲ್ ಪಿಂಟೊ ಸ್ವಾಗತಿಸಿದರು, ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಕ್ವಾಡರ್ಸ್, ಜೇಕಬ್ ಡಿಸೋಜಾ, ಲೀನಾ ತಾವ್ರೊ ಮೊದಲಾದವರು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here