Saturday 20th, April 2024
canara news

ಬಿ.ಎಸ್. ಕೆ.ಬಿ. ಎಸೋಸಿಯೇಶನ್ , ಗೋಕುಲ, ಸಾಯನ್ ಚಿಣ್ಣರ ಬೇಸಿಗೆ ಶಿಬಿರ

Published On : 21 Jun 2018   |  Reported By : Rons Bantwal


ಮುಂಬಯಿ, ಜೂ.20: ಬಿ.ಎಸ್. ಕೆ.ಬಿ. ಎಸೋಸಿಯೇಶನ್, ಗೋಕುಲದ ಯುವವಿಭಾಗವು 7 ರಿಂದ 15 ವರ್ಷದ ಮಕ್ಕಳಿಗಾಗಿ ಜೂನ್ 15 ರಿಂದ 3 ದಿನದ ಬೇಸಿಗೆ ಶಿಬಿರವನ್ನು ನೇರೂಲ್ ನಲ್ಲಿರುವ ಹಿರಿಯ ನಾಗರಿಕರ ಆಶ್ರಯಧಾಮ 'ಆಶ್ರಯ' ದಲ್ಲಿ ಆಯೋಜಿಸಿತ್ತು.

ಜೂನ್ 15 ರಂದು ಸಂಜೆ, ಸಂಘದ ಉಪಾಧ್ಯಕ್ಷರಾದ ವಾಮನ್ ಹೊಳ್ಳ, ಕಾರ್ಯದರ್ಶಿ ಅನಂತಪದ್ಮನಾಭ ಪೆÇೀತಿ, ಹಾಗೂ ಪುಟಾಣಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯವರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆಯೊಂದಿಗೆ ಶಿಬಿರಕ್ಕೆ ಸಾಂಪ್ರದಾಯಿಕ ಚಾಲನೆ ನೀಡಿದರು. ಬಾಲಕಲಾವೃಂದದವರಿಂದ ಪ್ರಾರ್ಥನೆ ನೆರವೇರಿತು.

ಮರುದಿನ ಮುಂಜಾನೆ ಮಕ್ಕಳಿಂದ ಶ್ಲೋಕ ಪಠನೆ, ಪ್ರಾರ್ಥನೆಯೊಂದಿಗೆ ಶಿಬಿರದ .ಕಾರ್ಯಾಗಾರ ಪ್ರಾರಂಭವಾಯಿತು. ಶಿಬಿರದಲ್ಲಿ , ಸಹನಾ ಪೆÇೀತಿ- ಭಜನೆ, ಪ್ರಶಾಂತ್ ಹೆರ್ಲೆ - ಆಟೋಟಗಳು, ಪ್ರೇಮಾ ರಾವ್ ಮತ್ತು ಪ್ರಸಾದ್ ನಿಂಜೂರ್ ರವರು ಕನ್ನಡ ಹಾಗೂ ನೀರಜಾ ಭಟ್ ರವರು ಸಂಸ್ಕೃತ ಕಲಿಕೆ, ಚಂದ್ರಾವತಿಯವರು ಕಿರು ಪ್ರಹಸನ, ಕೃತಿ ಚಡಗ - ನೃತ್ಯ, ತನ್ವಿ ರಾವ್ ರವರು ಯಕ್ಷಗಾನ, ರಚಿತಾ ರಾವ್ - ಚಟ್ ಪಟ್ ಚಾಟ್ ತಿನಿಸು ತಯಾರಿ, ಶಾಲಿನಿ ಉಡುಪ, ರಶ್ಮಿ ಭಟ್ ಮತ್ತು ಸರೋಜಾ ಸತ್ಯನಾರಾಯಣರವರು ಕರಕುಶಲ ವಸ್ತುಗಳ ತಯಾರಿಗಳಲ್ಲಿ ಮಕ್ಕಳನ್ನು ತರಬೇತುಗೊಳಿಸಿದರು.

ಶಿಬಿರದ ಸಮಾರೋಪ ಸಮಾರಂಭವು ಗೌ. ಕೋಶಾಧಿಕಾರಿ ಹಾಗೂ ಯುವ ವಿಭಾಗದ ಅಧ್ಯಕ್ಷರಾದ ಹರಿದಾಸ್ ಭಟ್ ರವರ ನಿರೂಪಣೆಯಲ್ಲಿ, ಕಾರ್ಯದರ್ಶಿ ಎ. ಪಿ. ಕೆ. ಪೆÇೀತಿ ಹಾಗೂ ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ರಾವ್ ಮತ್ತು ಕಾರ್ಯಕಾರಿ ಸಮಿತಿಯವರ ಉಪಸ್ಥಿತಿಯಲ್ಲಿ ಜರಗಿತು. ಶಿಬಿರದ ಯಶಸ್ಸಿಗೆ ಸಹಕರಿಸಿದ ಶಿಕ್ಷಕ -ಶಿಕ್ಷಕಿಯರನ್ನು, ಕಾರ್ಯಕರ್ತರನ್ನು ಪದಾಧಿಕಾರಿಗಳು ಪುರಸ್ಕರಿಸಿದರು. ಹರಿದಾಸ್ ಭಟ್ ರವರು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭ ಹಾರೈಸುತ್ತಾ ಮುಂದಿನ ಶಿಬಿರಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಂತಾಗಲಿ ಎಂದು ಹಾರೈಸಿ, ಅಚ್ಚುಕಟ್ಟಾಗಿ ಆಯೋಜಿಸಿದ ಯುವ ವಿಭಾಗ ಹಾಗೂ ಮಹಿಳಾ ವಿಭಾಗದ ಕಾರ್ಯಕರ್ತರನ್ನು ಅಭಿನಂದಿಸುತ್ತಾ ಧನ್ಯವಾದ ಸಮರ್ಪಿಸಿದರು .

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here