Monday 7th, July 2025
canara news

ಸ್ಯಾಂಡಲ್ ವುಡ್ನಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ಪಡೆದ ಮೊದಲ ಮಂಗಳಮುಖಿ

Published On : 23 Jun 2018   |  Reported By : canaranews network


ಮಂಗಳೂರು: ರೆಡಿಯೋ ಜಾಕಿಯಾಗಿ ಎಲ್ಲರ ಮನ ಗೆದ್ದಿದ್ದ ತೃತೀಯ ಲಿಂಗಿ ಕಾಜಲ್ ಇದೀಗ ಸ್ಯಾಂಡಲ್ ವುಡ್ನಲ್ಲಿ ನಾಯಕ ನಟಿಯಾಗಿ ಅಭಿನಯಿಸುವ ಅವಕಾಶ ಪಡೆದು ಸಿನಿಮಾ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದ್ದಾರೆ.ಮೂಲತಃ ಮಂಡ್ಯದವಳಾದ ಕಾಜಲ್ ಕಳೆದ 10 ವರುಷಗಳಿಂದ ಉಡುಪಿಯಲ್ಲಿ ನೆಲೆಸಿದ್ದರು. ಈಗಾಗಲೇ ರಂಗಭೂಮಿ, ರೇಡಿಯೋ ಜಾಕಿಯಾಗಿ ಗುರುತಿಸಿಕೊಂಡಿದ್ದ ಕಾಜಲ್ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಹಿರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.ಚಂದನ್ ಗೌಡ ನಿರ್ದೇಶನದ ಲವ್ ಬಾಬ ಸಿನಿಮಾದಲ್ಲಿ ಕಾಜಲ್ ನಾಯಕಿಯಾಗಿ ಅಭಿನಯಿಸಲಿದ್ದಾರೆ.

ಈ ಚಿತ್ರದಲ್ಲಿ ಮೂರು ಜನ ನಾಯಕ ನಟರು ಇರಲಿದ್ದು, ಕಾಜಲ್ ನಾಯಕಿಯಾಗಿ ನಟಿಸಲು ಅವಕಾಶ ಪಡೆದ ಮೊದಲ ಮಂಗಳಮುಖಿ ಆಗಿದ್ದಾರೆ. ಯುವಕರ ತಂಡ ಈ ಚಿತ್ರವನ್ನು ಹೆಣೆದಿದ್ದು, ಚಿತ್ರಕ್ಕೆ ಸಂಗೀತ, ಛಾಯಾಗ್ರಹಣವನ್ನು ಹೊಸಬರ ತಂಡ ಮಾಡುತ್ತಿದೆ. ಮಾತ್ರವಲ್ಲ ಈ ಚಿತ್ರ ವಿಭಿನ್ನ ಕಥೆಯನ್ನು ಹೊಂದಿದೆ. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಇದಾಗಿದ್ದು, 2018ರ ಅಂತ್ಯಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here