Wednesday 14th, May 2025
canara news

ಬ್ಲಡ್ ಕ್ಯಾನರ್ ಗೆ ತುತ್ತಾದ ಬಡ ಕುಟುಂಬದ ಮಹಿಳೆಯ ಚಿಕಿತ್ಸೆಗೆ ಸಹಾಯ ಹಸ್ತಕ್ಕಾಗಿ ಮೊರೆ

Published On : 25 Jun 2018   |  Reported By : Rons Bantwal


ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ತೋಕೆ ನಿವಾಸಿ ಬಡ ಕೂಲಿ ಕಾರ್ಮಿಕ ಹರಿಶ್ಚಂದ್ರ ಶೆಟ್ಟಿಗಾರ ಅವರ ಪತ್ನಿ ಗೀತಾ ಶೆಟ್ಟಿಗಾರ್ ಅವರು ಕಳೆದ ಕೆಲವು ತಿಂಗಳಿನಿಂದ ಬ್ಲಡ್ ಕ್ಯಾನ್ಸರ್ ನಿಂದ ಬಳಲಿತ್ತಿದ್ದು ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.

ಈಗಾಗಲೇ ಆಸ್ಪತ್ರೆ ಚಿಕಿತ್ಸೆಗಾಗಿ ಹಲವರ ಸಹಾಯ ಪಡೆದು ಸುಮಾರು ಮೂರು ಲಕ್ಷ ರೂ. ವ್ಯಯಿಸಿದ್ದು ಇನ್ನೂ ಚಿಕಿತ್ಸೆ ಮುಂದುವರಿಸಬೇಕಾಗಿದೆ. ಚಿಕಿತ್ಸೆಗೆ ಈ ಬಡ ಕುಟುಂಬಕ್ಕೆ ದಾನಿಗಳ ಸಹಾಯ ಹಸ್ತ ಹೊರತುಪಡಿಸಿ ಬೇರೆ ಯಾವುದೇ ದಾರಿ ಇಲ್ಲ. ಈ ದಂಪತಿಗೆ ಮೂವರು ಮಕ್ಕಳಿದ್ದು ಪಿಯುಸಿ ಕಲಿಯುತ್ತಿದ್ದ ಮಗಳು ತಾಯಿಗಾಗಿ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿದ್ದಾರೆ. ಒಬ್ಬ ಪುತ್ರ ಕೂಡಾ ಐಟಿಐ ಶಿಕ್ಷಣವನ್ನು ತಾಯಿಗೆ ನೆರವಾಗಲೆಂದು ಅರ್ಧಕ್ಕೆ ಮೊಟಕುಗೊಳಿಸಿದ್ದಾನೆ. ಕಿರಿಯ ಪುತ್ರ ಎಂಟನೆಯ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಹಾಗಾಗಿ ಈ ಕುಟುಂಬಕ್ಕೆ ನೆರವಾಗಲು ಬಯಸುವವರು : ಹರಿಶ್ಚಂದ್ರ ಶೆಟ್ಟಿಗಾರ, ಸಿಂಡಿಕೇಟ್ ಬ್ಯಾಂಕ್, ವರ್ಕಾಡಿ ಸುಂಕದಕಟ್ಟೆ ಶಾಖೆಯ

A/c no : 42282200116816
IFC code :SYNB0004228 ಗೆ ಕಳುಹಿಸಬೇಕಾಗಿ ಕಳಕಳಿಯ ವಿನಂತಿ.

ಹರಿಶ್ಚಂದ್ರ ಶೆಟ್ಟಿಗಾರ ಅವರ ಮೊಬೈಲ್ ನಂಬ್ರ: 9164 092820

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here