ಮುಂಬಯಿ, ಜೂ: 25: ಬಂಟ್ವಾಳದಿಂದ ಅರಳ ಮಾರ್ಗವಾಗಿ ಕುಪ್ಪೆಪದವುವಿಗೆ ಹಾದುಹೋಗುವ ಮೂಲರಪಟ್ಣ ಇಲ್ಲಿನ ಕೂಡು ರಸ್ತೆಯಲ್ಲಿನ ನೇತ್ರಾವತಿ ನದಿಗೆ ಅಡ್ಡಲಾಗಿರುವ ಅರಳ ಸೇತುವೆ ಭಾರೀ ಮಳೆಯ ಪರಿಣಾಮ ಇಂದಿಲ್ಲಿ ಸಂಜೆ ಕುಸಿದು ಬಿದ್ದಿದೆ.
ಯಾವುದೇ ಜೀವಹಾನಿ ಹಾಗಿಲ್ಲ ಎಂದು ರಸ್ತೆ ಮೂಲಕ ಹಾದು ಹೋಗುವ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಾಹನ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದು ಈ ಮೂಲಕ ಹಾದು ಹೋಗುವ ಪ್ರಯಾಣಿಕರು ಪರದಾಟ ನಡೆಸುವಂತಾಯಿತು.