Wednesday 14th, May 2025
canara news

ಘಾಟ್ಕೋಪರ್‍ನಲ್ಲಿ ಚಾರ್ಟರ್ ವಿಮಾನ ದುರಂತ-ಐವರು ಮೃತ್ಯುವಶ

Published On : 28 Jun 2018   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.28: ಉಪನಗರ ಘಾಟ್ಕೋಪರ್‍ನಲ್ಲಿ ಇಂದಿಲ್ಲಿ ಮಧ್ಯಾಹ್ನ ಸುಮಾರು 1.15ರ ವೇಳೆಗೆ 12 ಸೀಟರ್‍ನ ಎ ಕಿಂಗ್ ಏರ್ ಸಿ90 ಹೆಸರಿನ ಚಾರ್ಟರ್ ವಿಮಾನ (ಪ್ಲೈಟ್ ಕ್ರಾಶ್) ಒಂದು ದುರ್ಘಟನೆಯಲ್ಲಿ ಪೈಲೆಟ್ ಸೇರಿದಂತೆ ವಿಮಾನದಲ್ಲಿದ್ದ ನಾಲ್ವರು ಸೇರಿ ಘಟನಾ ಸ್ಥಳದ ಪಾದಚಾರಿ ಓರ್ವರೂ ಸೇರಿದಂತೆ ಐವರು ಮೃತ್ಯುವಶರಾದರು.

 

 

ಸಾಂತಕ್ರೂಜ್‍ನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸನಿಹದ ಜೂಹೂ ಹ್ಯಾಲಿಪೇಡ್‍ನಿಂದ ಹಾರಾಟ ನಡೆಸಿದ ಕೆಲವೇ ನಿಷಗಳಲ್ಲಿ ಘಾಟ್ಕೋಪರ್ ಇಲ್ಲಿನ ಸರ್ವೋದಯ ನಗರದ ಜೀವೋದಯ ಲೇನ್‍ನ ಇಲ್ಲಿನ ಕಾಮಗಾರಿ ಹಂತದಲ್ಲಿದ್ದ ಕಟ್ಟವೊಂದರ ವೇಲ್ಛಾವಣಿ ಗೋಡೆಗೆ ತಾಗಿ ರಸ್ತೆಗೆ ಏಕಾಏಕಿ ಕುಸಿದ ದೀಪಕ್ ಕೊಠಾರಿ ಇವರ ಮಾಲಕತ್ವದ ಖಾಸಾಗಿ ಚಾರ್ಟರ್ (ಕಿರು) ವಿಮಾನ ಬಿಡಿಭಾಗ ಕೆಟ್ಟ ಪರಿಣಾಮ ನೆಲಕ್ಕುರುಳಿ ಅವಘಡ ಸಂಭವಿಸಿದೆ. ವಿಮಾನ ಈ ಹಿಂದೆ ಉತ್ತರ ಪ್ರದೇಶದ ಸರಕಾರದ ಅಧೀನತ್ವದಲ್ಲಿದ್ದು ಈ ಹಿಂದೆ ಒಂದು ಬಾರಿ ಅಪಘಾತಕ್ಕೊಳಗಾಗಿತ್ತು ಎನ್ನಲಾಗಿದೆ.

ಜನನಿಭಿಡ ಪ್ರದೇಶವಾದ ಇಲ್ಲಿ ಇಂದು ಭಾರೀ ಮಳೆ ಸುರಿಯುತ್ತಿದ್ದ ಕಾರಣ ಹವಾಮಾನ ವೈಪರಿತ್ಯದಿಂದ ವಿಮಾನಯಾನ ಚಾಲನೆಯಲ್ಲಿ ತಾಂತ್ರಿಕ ದೋಷ ಕಂಡು ಚಾಲನಾ ಹಿಡಿತದಿಂದ ತನ್ನ ಕೈತಪ್ಪುತ್ತಿದ್ದಂತೆಯೇ ವಿಷಯ ತಿಳಿದ ವಿಮಾನ ನಡೆಸುತ್ತಿದ್ದ ಮಹಿಳಾ ಮುಖ್ಯ ಪೈಲೆಟ್ ಮರಿಯಾ ಕುಬೇರಾ ಚಾಣಕ್ಷತೆ ತೋರಿ ಕಟ್ಟಡವೊಂದರ ಮೇಲೆ ಇಳಿಸಲು ಪ್ರಯತ್ನಿಸಿದ್ದ ಕಾರಣ ಭಾರೀ ಕಷ್ಟನಷ್ಟದಿಂದ ಪಾರಾಗುವಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹವಾಮಾನದ ವೈಪರಿತ್ಯದಿಂದ ಘಟನೆ ಸಂಭವಿಸಿರ ಬಹುದು ಎಂದು ಮೂಲಗಳು ತಿಳಿಸಿವೆ.

ಪೈಲೆಟ್ ಮರಿಯಾ, ಸಹ ಪೈಲೆಟ್ ಪ್ರದೀಪ್ ರಾಜ್‍ಪುತ್, ಇಂಜಿನೀಯರ್ ಶುಭಾಂಗಿ, ಪಾದಚಾರಿ ಸೇರಿದಂತೆ ಒಟ್ಟು ಐವರು ಮಡಿದ ದುರ್ದೈವಿಗಳಾಗಿದ್ದಾರೆ. ಆಗ್ನಿಶಾಮಕ ದಳ, ಸ್ಥಳಿಯ ಪೆÇೀಲಿಸ್ ಪಡೆ, ಏರ್‍ಪೆÇೀರ್ಟ್ ಆಥಾರಾಟಿ ಆಫ್ ಇಂಡಿಯಾ ಮತ್ತಿತರ ವಿಮಾನಯಾನ ಸಂಬಂಧಿತ ಇಲಾಖೆ ಮತ್ತಿತರ ಇಲಾಖೆಗಳ ಮುಖ್ಯಸ್ಥರು ತಕ್ಷಣವೇ ಸ್ಥಳಕ್ಕಾಗಮಿಸಿದ ಮೊದಲಾಗಿ ಬೆಂಕಿ ಆರಿಸಿ ಮೃತದೇಹಗಳನ್ನು ಪತ್ತೆಹಚ್ಚಿ ಘಾಟ್ಕೋಪರ್ ಪೂರ್ವದ ರಾಜವಾಡಿ ಆಸ್ಪತ್ರೆಗೆ ಒಯ್ದು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.

 

 

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here