Wednesday 14th, May 2025
canara news

ಹೆಲ್ತ್ ಮಲಬಾರ್ ಹೆಲ್ತ್ ಡೈರೆಕ್ಟರಿ ಪ್ರಥಮ ಆವೃತ್ತಿ ಬಿಡುಗಡೆ

Published On : 01 Jul 2018   |  Reported By : Rons Bantwal


ಮಂಗಳೂರು, ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳ ಪ್ರಥಮ ಹೆಲ್ತ್ ಡೈರೆಕ್ಟರಿ "Health Malabar 2018-19" ನ್ನು ದಿನಾಂಕ 30/06/2018 ರಂದು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆಯುವ ಪತ್ರಿಕಾ ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಮುಖ್ಯ ಕಮಾಂಡೆಂಟ್ ಡಾ. ಮುರಳಿ ಮೋಹನ್ ಚೂಂತಾರ್ ಅವರು ಬಿಡುಗಡೆಗೊಳಿಸಿದರು.

ಪ್ರಥಮ ಹೊತ್ತಗೆಯನ್ನು ಇಂಡಿಯನ್ ಮೆಡಿಕಲ್ ಅಸ್ಸೋಸಿಯೇಶನ್ ಮಂಗಳೂರು ಅಧ್ಯಕ್ಷ ಪ್ರೊಫೆಸ್ಸರ್ ಡಾ ಕೆ ಆರ್ ಕಾಮತ್ ಅವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಒನ್ ಸಿಟಿ ಯೆಲ್ಲೋ ಪೇಜಸ್ ಚೀಫ್ ಎಕ್ಸಿಕ್ಯೂಟಿವ್ ಓಫೀಸರ್ ಎಲ್ ಕೆ ಮೋನು ಬೋರ್ಕಳ, Health Malabar ಪ್ರಧಾನ ಸಂಪಾದಕ Hameed Borkala ಅವರು ಉಪಸ್ಥಿತರಿದ್ದರು.

ಮಂಗಳೂರು, ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳ ಅಲ್ಲೋಪತಿ, ಆಯುರ್ವೇದ ಹಾಗೂ ಹೋಮಿಯೋಪತಿ ಡಾಕ್ಟರ್ಸ್, ಹೋಸ್ಪಿಟಲ್ಸ್, ಡೆಂಟಿಸ್ಟ್ಸ್ ಹಾಗೂ ಇತರ ಆರೋಗ್ಯ ಸೇವಾ ವಿವರಗಳ ಸಮಗ್ರ ಮಾಹಿತಿ ಇರುವ ಈ ಡೈರೆಕ್ಟರಿ ಡಾಕ್ಟರ್ಸ್ ಕ್ಲಿನಿಕ್ ಗಳು, ಆಸ್ಪತ್ರೆಗಳು, ವಾಚನಾಲಯಗಳು, ಹೋಟೆಲ್ಸ್, ಲಾಡ್ಜ್ ಗಳು, ಕಛೇರಿಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ವಿತರಿಸಲಾಗುವುದು. ಅಲ್ಲದೆ ಪುಸ್ತಕ-ಸ್ಟೇಶನರಿ ಅಂಗಡಿಗಳಲ್ಲಿ, ಔಷಧಿ ಅಂಗಡಿಗಳಲ್ಲಿ, ಸೂಪರ್ ಮಾರ್ಕೆಟ್, ಶೋಪಿಂಗ್ ಮಾಲ್ ಗಳಲ್ಲಿ ಮಾರಾಟಕ್ಕೆ ಇಡಲಾಗುವುದು. ಮತ್ತು Health Malabar Online ಹಾಗೂ App ನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು, ಮಾತ್ರವಲ್ಲದೆ ಆರೋಗ್ಯ ಸಹಾಯಿ ಮಾಹಿತಿ ಕೇಂದ್ರ (Health Helpline) ಸದ್ಯದಲ್ಲಿಯೇ ಚಾಲನೆಗೆ ಬರುವುದು ಎಂದು ಪ್ರಧಾನ ಸಂಪಾದಕ ಹಮೀದ್ ಬೋರ್ಕಳ ತಿಳಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here