Wednesday 14th, May 2025
canara news

ಶ್ರೀ ಧ.ಮಂ.ಆಂ. ಮಾಧ್ಯಮ ಶಾಲೆಯಲ್ಲಿ ಭತ್ತದ ನಾಟಿ

Published On : 03 Jul 2018   |  Reported By : Rons Bantwal


ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಪರಿಸರ ಸಂಘದ ವತಿಯಿಂದ, ಮಕ್ಕಳಲ್ಲಿ ಕೃಷಿಯ ಬಗ್ಗೆ ಒಲವು, ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಭತ್ತದ ನಾಟಿಯನ್ನು ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗಳು ಜಂಟಿಯಾಗಿ ನಿರ್ವಹಿಸಿದರು. ಈ ಕಾರ್ಯಕ್ರಮವು ಸಂತೋಷ್‍ರವರ ಮಾರ್ಗದರ್ಶನ ಹಾಗೂ ಶ್ರೀ ಕ್ಷೇತ್ರದ ತೋಟದ ಸಿಬ್ಬಂದಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಮೂಡಿಬಂದಿದೆ.

 

ಗದ್ದೆಯ ಉಳುಮೆಗಾಗಿ ನೇಗಿಲಿನ ಬದಲು ಮಕ್ಕಳಿಂದ ಕೆಸರಿನಾಟವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳೆಲ್ಲಾ ತುಂಬು ಆಸಕ್ತಿಯಿಂದ ಇದರಲ್ಲಿ ಪಾಲ್ಗೊಂಡಿದ್ದು ಉಲ್ಲೇಖನೀಯ. ಈ ಕಾರ್ಯಕ್ರಮದ ಒಟ್ಟು ನಿರ್ವಹಣೆಯನ್ನು ಶಾಲಾ ಸºಶಿP್ಪ್ಷಕಿಯರಾದ ಶ್ರೀಮತಿ ಸೌಮ್ಯಾ ಹಾಗು ಶ್ರೀಮತಿ ಸಂಧ್ಯಾ ನಿರ್ವಹಿಸಿದರು. ಈ ಕಾರ್ಯಕ್ರಮವನ್ನು ಸತತ ಮೂರು ವರ್ಷಗಳಿಂದ ಯಶಸ್ವಿ ಯಾಗಿ ನಡೆಸಿಕೊಂಡು ಬಂದಿರುವುದಾಗಿ ಶಾಲೆಯ ಮುಖ್ಯೋಪದ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ.ಯವರು ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here