Wednesday 14th, May 2025
canara news

ಆಕಾಶವಾಣಿಯ ಸ್ವರಮಂಟಮೆಗೆ `ಅಮ್ಮೆರ್ ಪೊಲೀಸ್'

Published On : 06 Jul 2018   |  Reported By : Rons Bantwal


ಮುಂಬಯಿ, ಜು.06: ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರಮಂಟಮೆ ಪುಸ್ತಕ-ಧ್ವನಿಸುರುಳಿ ಬಿಡುಗಡೆಯ ನೇರ ಪ್ರಸಾರದ 18ನೇ ಕಾರ್ಯಕ್ರಮ ಜುಲೈ.7 ರಂದು ಶನಿವಾರ ಬೆಳಿಗ್ಗೆ 10.30 ರಿಂದ 11.30 ಗಂಟೆ ವರೆಗೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ಸಾನ್ವಿ ಕ್ರಿಯೇಷನ್‍ನವರ ‘ಅಮ್ಮೆರ್ ಪೊಲೀಸ’ ಸಿನಿಮಾದ ಹಾಡುಗಳ ಅನಾವರಣ ಹಾಗೂ ಸಿನೆಮಾ ಕುರಿತು ವಿಶೇಷ ಕಾರ್ಯಕ್ರಮ ಬಿತ್ತರವಾಗಲಿದೆ. ಲಕುಮಿ ಕ್ರಿಯೆಷನ್‍ನ ಲಯನ್ ಕಿಶೋರ್ ಡಿ.ಶೆಟ್ಟಿ, ಚಿತ್ರ ನಿರ್ಮಾಪಕ ಸಾನ್ವಿ ಕ್ರಿಯೇಷನ್‍ನ ರಾಜೇಶ್ ಶೆಟ್ಟಿ, ನಿರ್ದೇಶಕ ಸೂರಜ್ ಶೆಟ್ಟಿ, ನಾಯಕ ನಟ ರೂಪೇಶ್ ಶೆಟ್ಟಿ, ನಾಯಕಿ ನಟಿ ಪೂಜಾ ಶೆಟ್ಟಿ, ವಿಸ್ಮಯ ವಿನಾಯಕ, ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ಡಿ.ಕುನ್ಹಾ, ಕವಯತ್ರಿ ಪಲ್ಲವಿ ಪ್ರಶಾಂತ್ ನರಿಕೊಂಬು, ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ತುಳು ವಿಭಾಗದ ಕಾರ್ಯಕ್ರಮ ನಿರ್ವಾಹಕರಾದ ಡಾ| ಸದಾನಂದ ಪೆರ್ಲ ನಡೆಸಿಕೊಡಲಿದ್ದಾರೆ.

ಕೇಳುಗರು ಅತಿಥಿü ಕಲಾವಿದರ ಜೊತೆ ಸಿನಿಮಾದ ಬಗ್ಗೆ ಸಂವಾದ ಮಾಡಲು (0824) 2211999, ಮೊಬೈಲ್ 8277038000 ದೂರವಾಣಿಗಳನ್ನು ಸಂಪರ್ಕಿಸಬಹುದೆಂದು ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಉಷಾಲತಾ ಸರಪಾಡಿ ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here