Wednesday 14th, May 2025
canara news

ಭಾರತ್ ಬ್ಯಾಂಕ್‍ನ ಬೆಂಗಳೂರು ಪೀಣ್ಯ ಶಾಖೆ ಸ್ಥಳಾಂತರ-ಸೇವಾರಂಭ

Published On : 07 Jul 2018   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಬೆಂಗಳೂರು, ಜು.07: ಭಾರತ್ ಕೋ. ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 45ನೇ ಶಾಖೆಯಾಗಿ ಬೆಂಗಳೂರು ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್‍ನಲ್ಲಿನ ಸೇವಾ ನಿರತ ಪೀಣ್ಯ ಶಾಖೆಯನ್ನು ಸ್ಥಳೀಯ ಕಟ್ಟಡದ ತಳಮಹಡಿಗೆ ಸ್ಥಳಾಂತರಿಸಿ ಇಂದಿಲ್ಲಿ ಶುಕ್ರವಾರ ಪೂರ್ವಾಹ್ನ ಪುನಾಂಭಿಸಲಾಯಿತು.

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷರಾದ ಜಯ ಸಿ.ಸುವರ್ಣ ಅವರು ರಿಬ್ಬನ್ ಬಿಡಿಸಿ ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಿ ಶುಭಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ಬಿಲ್ಲವರ ಅಸೋಸಿಯೇಶನ್ ಬೆಂಗಳೂರು ಅಧ್ಯಕ್ಷ ಎಂ. ವೇದ ಕುಮಾರ್ ಮತ್ತು ನ್ಯಾ| ಎ.ಕೆ ವಸಂತ್ ಅವರು ದೀಪ ಪ್ರಜ್ವಲಿಸಿ ಶಾಖೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಲಾಕರ್ ಸೇವೆಗೆ ಮತ್ತು ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಶಾಖೆಯ ವ್ಯವಹಾರಗಳಿಗೆ ಚಾಲನೆಯನ್ನೀಡಿ ಶುಭಕೋರಿದರು.

ಅತಿಥಿü ಅಭ್ಯಾಗತರುಗಳಾಗಿ ಎಂ. ವೇದ ಕುಮಾರ್, ನ್ಯಾ| ಎ.ಕೆ ವಸಂತ್ ಡಾ| ಜಾಕೆಬ್ ಕ್ರಾಸ್ತಾ, ಶ್ರೀನಿವಾಸ ಅಸ್ರಣ್ಣ, ಎಚ್.ಜಿ.ಭಾಸ್ಕರ್, ಗೋವಿಂದ ಪೂಜಾರಿ, ವೆಂಕಟರಾಜು ಸಿಎ, ಶ್ರೀರಾಮ್ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಶುಭೇಚ್ಛ ಕೋರಿದರು.

ಪುರೋಹಿತರಾದ ಗೋಪಾಲಕೃಷ್ಣ ಭಟ್ ಮತ್ತು ಗೋಪಾಲ ಎನ್.ಪೂಜಾರಿ ತಮ್ಮ ಪೌರೋಹಿತ್ಯದಲ್ಲಿ ವಾಸ್ತುಪೂಜೆ, ಗಣಹೋಮ, ಸತ್ಯನಾರಾಯಣ ಮಹಾಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಹರಸಿದರು. ಅಜಯ್ ಭಟ್ ಮತ್ತು ಮಧುರಾ ಅಜಯ್ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ಚಂದ್ರಶೇಖರ ಎಸ್.ಪೂಜಾರಿ, ಗಂಗಾಧರ್ ಜೆ.ಪೂಜಾರಿ, ನಿರ್ದೇಶಕರುಗಳಾದ ಎನ್.ಎಂ ಸನಿಲ್, ಶೇಖರ ಕೋಟ್ಯಾನ್ ಬೆಂಗಳೂರು ಸೇರಿದಂತೆ ಗ್ರಾಹಕರನೇಕರು, ಹಿತೈಷಿಗಳು ಉಪಸ್ಥಿತರಿದ್ದು ಶಾಖೆಯ ಶ್ರೇಯೋಬ್ಭಿವೃದ್ಧಿಗೆ ಯಶ ಹಾರೈಸಿದರು.

ಸಮಾರಂಭದಲ್ಲಿ ಬ್ಯಾಂಕ್‍ನ ಬ್ಯಾಂಕ್‍ನ ಪ್ರಧಾನ ಪ್ರಬಂಧಕ ದಿನೇಶ್ ಬಿ.ಸಾಲಿಯಾನ್, ಬ್ಯಾಂಕ್‍ನ ಅಭಿವೃದ್ಧಿ ಇಲಾಖಾ ಉನ್ನತಾಧಿಕಾರಿಗಳಾದ ಸುನೀಲ್ ಎ.ಗುಜರನ್, ವಿಜಯ್ ಪಾಲನ್,ವಿವಿಧ ಶಾಖೆಗಳ ಮುಖ್ಯಸ್ಥರುಗಳಾದ ನಾಗರಾಜ (ಬನ್ನೇರ್‍ಘಟ್ಟಾ), ಸತೀಶ್ ಪಿ.ಪಿ (ಜಯನಗರ), ರವಿ ಕುಂದರ್ (ಕೆ.ಹೆಚ್ ರೋಡ್), ರವಿ ಕುಮಾರ್ (ಕೋರಮಂಗಲ), ಸುರೇಖಾ ಸತೀಶ್(ಮಾಗಡಿ ರಸ್ತೆ), ಉದಯ ಹಳೆಯಂಗಡಿ(ಮಲ್ಲೇಶ್ವರ), ಮುರಳೀಧರ (ಇಂದಿರಾ ನಗರ), ಶಾಖಾ ಪ್ರಬಂಧಕ ಗೋಪಾಲ್ ಪೂಜಾರಿ, ಶಾಖಾ ಉಪ ಪ್ರಬಂಧಕ ಭಾಸ್ಕರ್ ಸಿ. ಪೂಜಾರಿ, ಶಾಖಾ ಸಿಬ್ಬಂದಿಗಳಾದ ರಾಜೇಂದ್ರ ಪ್ರಸಾದ್ ತಿರುಮಲಯ್ಯ, ಪ್ರತಾಣ್ ಕುಮಾರ್, ರಾಜೇಶ್ ಬಿ.ಪೂಜಾರಿ, ಪೂಜಾ ಪಿ.ಬಂಗೇರ, ಭಾಸ್ಕರ್ ಕೆ.ಸಾಲ್ಯಾನ್, ಹರೀಶ್ ಎಸ್.ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಬ್ಯಾಂಕ್‍ನ ಡಿಜಿಎಂ ಹಾಗೂ ಕರ್ನಾಟಕ ಪ್ರಾದೇಶಿಕ ಉಸ್ತುವರಿ ಅಧಿಕಾರಿ ಬಾಲಕೃಷ್ಣ ಎಸ್.ಕರ್ಕೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಕೃತಜ್ಞತೆ ಸಮರ್ಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here