Wednesday 8th, May 2024
canara news

ರಷ್ಯಾದ ಟಶ್ಖೆಂಟ್‍ನಲ್ಲಿ ಕನ್ನಡಿಗರಿಗೆ `ಏಷಿಯಾ ಪೆಸಿಫಿಕ್ ಅಚೀವರ್ಸ್ ಪ್ರಶಸ್ತಿ' ಪ್ರದಾನ

Published On : 10 Jul 2018   |  Reported By : Rons Bantwal


ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ರಂಗೇರಿದ ಭಾರತೀಯ ಸಂಸ್ಕೃತಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ರಷ್ಯಾ (ಟಶ್ಖೆಂಟ್), ಜು.10: ಗ್ಲೋಬಲ್ ಫೌಂಡೇಶನ್ ಅಚೀವರ್ (ಜಿಎಫ್‍ಎ) ಸಂಸ್ಥೆಯು ರಷ್ಯಾ ರಾಷ್ಟ್ರದ ಟಶ್ಖೆಂಟ್ (ಉಝ್ಬೆಕೀಸ್ತಾನ್)ನ ಅಲ್ಲಿನ ಕುಶ್‍ಬೆಗಿ ಸ್ಟ್ರೀಟ್‍ನ ಅಮರ್ ಸಭಾಂಗಣದಲ್ಲಿ ಜಾಗತಿಕ ಅರ್ಥಶಾಸ್ತ್ರದ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿ (ಗ್ಲೋಬಲಾಯಿಝೇಶನ್ ಆಫ್ ಇಕಾನಾಮಿಕ್ ಗ್ರೋಥ್ ಎಂಡ್ ಸೋಶಿಯಲ್ ಡೆವಲಪ್‍ಮೆಂಟ್) ವಿಚಾರಿತ ಮಹಾಸಮ್ಮೇಳನ ನಡೆಸಿತು.

ಇಂದಿಲ್ಲಿ ಭಾನುವಾರ ಸಮ್ಮೇಳನದ ಕೊನೆಯಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮಿತಿ ಮತ್ತು ಜಿಎಫ್‍ಎ ಸಂಸ್ಥೆಗಳ ಆಶ್ರಯದಲ್ಲಿ ಹದಿನೆಳನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನ (ಇಂಟರ್‍ನೇಶನಲ್ ಕಲ್ಚರಲ್ ಫೆಸ್ಟ್) ಐಸಿಎಫ್) ಆಯೋಜಿಸಲ್ಪಟ್ಟಿತು. ಸಮ್ಮೇಳನ ಸಮಾರಂಭದಲ್ಲಿ ಭಾರತ ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿ ಮಹಾನಗರದಲ್ಲಿನ ಪ್ರತಿಷ್ಠಿತ ಸಮಾಜ ಸೇವಕರಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ, ಕನ್ನಡ ಸಂಘ ಸಾಂತಕ್ರೂಜ್‍ನ ಅಧ್ಯಕ್ಷ ಎಲ್.ವಿ ಅವಿೂನ್, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ, ವಾಸ್ತುತಜ್ಞ ಪಂಡಿತ್ ನವೀನ್‍ಚಂದ್ರ ಆರ್.ಸನಿಲ್, ಎನ್.ಪಿ ಸುವರ್ಣ, ಪಲ್ಲವಿ ಮಣಿ ಮತ್ತಿತರರ ಸಾಧನೀಯ ಸೇವೆ ಪರಿಗಣಿಸಿ `ಏಷಿಯಾ ಪೆಸಿಫಿಕ್ ಅಚೀವರ್ಸ್ ಅವಾರ್ಡ್' (ಂsiಚಿ Pಚಿಛಿiಜಿiಛಿ ಂಛಿhieveಡಿs ಂತಿಚಿಡಿಜ) ಪುರಸ್ಕಾರ ಪ್ರದಾನಿಸಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಝ್ಬೆಕೀಸ್ತಾನ್ ಟಶ್ಖೆಂಟ್‍ನ ಭಾರತೀಯ ರಾಯಭಾರಿ ಸಿಫ್ರ ಘೋಶ್, ಗೌರವ ಅತಿಥಿüಗಳಾಗಿ ಹಿಲ್ಟನ್ಸ್ ಸ್ಕೂಲ್ಸ್ ಡೆಹಾರಡುನ್‍ನ ಮುಖ್ಯಸ್ಥ ಡೇವಿಡ್ ಜೋಸೆಫ್ ಹಿಲ್ಟನ್, ಐಎನ್‍ಹೆಚ್‍ಎ ವಿಶ್ವವಿದ್ಯಾಲಯ ಉಝ್ಬೆಕೀಸ್ತಾನ್ ಇದರ ರೆಕ್ಟರ್ ವೂಸ್ಕಿ ಚೊ, ಟಶ್ಖೆಂಟ್‍ನ ಉದ್ಯಮಿ ಕು| ಆಡೊಲೆಟ್ ನಸಿರೊನಾ, ಜಿಎಎಫ್ ಮುಖ್ಯಸ್ಥ ಡಾ| ವಿ.ಬಿ ಸೋನಿ, ಐಸಿಎಫ್ ಭಾರತೀಯ ಸಮಿತಿ ಕಾರ್ಯಾಧ್ಯಕ್ಷ ಇಂ| ಮಂಜುನಾಥ್ ಸಾಗರ್, ಗೌರವ ಕಾರ್ಯಾಧ್ಯಕ್ಷ ಪಲ್ಲೇಮಣಿ ಎಂ.ಸುಬ್ರಹ್ಮಣಿ ಉಪಸ್ಥಿತರಿದ್ದು ಅನೇಕ ಸಾಧಕರಿಗೆ ಪ್ರಶಸ್ತಿ ಪ್ರದಾನಿಸಿ ಗೌರವಿಸಿ ಶುಭಾರೈಸಿದರು.

ಮುಂಬಯಿ ಅಲ್ಲಿನ ಪ್ರಭಾ ಎನ್.ಸುವರ್ಣ, ಸುಧಾ ಎಲ್.ವಿ ಅವಿೂನ್, ದಿವಿಜಾ ಚಂದ್ರಶೇಖರ್ ಸೇರಿದಂತೆ ವಿವಿಧ ರಾಷ್ಟ್ರಗಳ ಗಣ್ಯರು ಉಪಸ್ಥಿತರಿದ್ದರು. ಜಿಎಎಫ್‍ನ ಸಂಜೀವ ಸೂರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಎಫ್‍ಎ ಕಾರ್ಯದರ್ಶಿ ಎ.ಕೆ ಶರ್ಮ ಧನ್ಯವದಿಸಿದರು. ಭವ್ಯ ಉತ್ಸವದಲ್ಲಿ ಭಾರತೀಯ ಹಾಗೂ ಇತರ ರಾಷ್ಟ್ರಗಳ ತಂಡಗಳು ಭಾರತೀಯ ಸಂಸ್ಕೃತಿ ಸಾರುವ ವೈವಿಧ್ಯಮಯ ನೃತ್ಯಾವಳಿ, ನೃತ್ಯರೂಪಕ, ಜಾನಪದ ಮತ್ತು ಸಾಹಿತಿಕ ಕಾರ್ಯಕ್ರಮಗಳ `ಸಾಂಸ್ಕೃತಿಕ ಸೌರಭ' ಪ್ರಸುತ ಪಡಿಸಿದÀವು. ಐಸಿಎಫ್ ಪ್ರಧಾನ ಕಾರ್ಯದರ್ಶಿ ಗೋ.ನಾ ಸ್ವಾಮಿ ಬೆಂಗಳೂರು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು.

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here