Thursday 18th, April 2024
canara news

ದೇಶ ಜಗತ್ತಿನಲ್ಲಿ ಮಂಚೂಣಿಯಲ್ಲಿ ಬರುವಂತಹ ಯೋಗದಾನ ನಿಮ್ಮದಾಗ ಬೇಕು : ಗೋಪಾಲಕ್ರಷ್ಣ ಶೆಟ್ಟಿ

Published On : 14 Jul 2018   |  Reported By : Bernard Dcosta


ಕುಂದಾಪುರ,ಜು.14 : ‘ಇವತ್ತು ಭಾರತ ದೇಶ ಕೆಲವು ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದೆ, ಅದಕ್ಕೆ ಕಾರಣ ನಮ್ಮನ್ನು ಕಲಿಸಿದ ಶಿಕ್ಷಕರು. ಅವರು ನಮಗೆ ತಿದ್ದಿ ಬುದ್ದಿ ಶಿಕ್ಷಣ ಸುಶಿಕ್ಷಿತರನಾಗಿ ಮಾಡಿದ್ದೆ ಕಾರಣ. ಇವತ್ತು ನೀವು ಕಾಲೇಜಿನ ಸಂಸತ್ತು ನಾಯಕರಾಗಿದ್ದಿರಿ, ಮುಂದೆ ನೀವು ದೇಶದ ಉತ್ತಮ ನಾಯಕರಾಗಿ, ವಿಧ್ಯಾವಂತರಾಗಿ ನಮ್ಮ ದೇಶ ಎಲ್ಲದರಲ್ಲೂ ಜಗತ್ತಿನಲ್ಲಿ ಮಂಚೂಣಿಯಲ್ಲಿ ಬರುವಂತಹ ಯೋಗದಾನ ನಿಮ್ಮದಾಗ ಬೇಕು’ ಎಂದು ಕುಂದಾಪುರ ಪುರಸಭಾ ಮುಖ್ಯಾಧಿಕಾರಿ ಗೋಪಾಲಕ್ರಷ್ಣ ಶೆಟ್ಟಿ ಅವರು ಹೇಳಿದರು. ಅವರು ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಸಂಸತ್ತು ಉದ್ಘಾಟಿಸಿ ಮಕ್ಕಳಿಗೆ ಶುಭ ಕೋರಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಸಂಚಾಲಕರಾದ ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ವಂ|ಸ್ಟ್ಯಾನಿ ತಾವ್ರೊ ಇವರು ಕಾಲೇಜು ವಿದ್ಯಾರ್ಥಿ ಮಂಡಳಿಯಲ್ಲಿ ಆರಿಸಿ ಬಂದವರಿಗೆ ಪ್ರಮಾಣ ವಚನ ಬೋಧಿಸಿ, ‘ವಿದ್ಯಾರ್ಥಿಗಳು ಉತ್ತಮ ನಾಯಕತ್ವನ್ನು ಬೆಳೆಸಿಕೊಂಡು, ವಿದ್ಯಾವಂತರಾಗಿ ದೇಶವನ್ನು ಸಂಪನ್ಮೂಲ ರಾಷ್ಟ್ರಾವನ್ನಾಗಿ ಮಾಡಬೇಕೆಂದು ಹಿತವಚನ ನೀಡಿದರು. ಕಾಲೇಜು ಪ್ರಿನ್ಸಿಪಾಲರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಶುಭಾಷಯ ಕೋರಿದರು. 

ವೇದಿಕೆಯಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ, ಪುರಸಭಾ ಆರೋಗ್ಯ ನಿರೀಕ್ಷಿತರಾದ ರಾಘವೇಂದ್ರ, ಉಪಪ್ರಾಂಶುಪಾಲೆ ಮಂಜುಳ ನಾಯರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ಪ್ರಾಧ್ಯಪಕಿ ಜೊಯ್ಲಿನ್ ಸಾಲಿನ್ಸ್ ಸಾಗತಿಸಿದರು. ಕಾಲೇಜು ವಿಧ್ಯಾರ್ಥಿ ನೆಲ್ಡ್ರಿಯಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರೆ, ರೇಶ್ಮಾ ಭಟ್ ಧನ್ಯವಾಗಳನ್ನು ಅರ್ಪಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here