Saturday 20th, April 2024
canara news

ಎಸ್.ಆರ್ ಇಂಗ್ಲಿಷ್ ಶಾಲೆಯ ಕನ್ನಡದ ಕೆಲಸ ಶ್ಲಾಘನೀಯ

Published On : 17 Jul 2018   |  Reported By : Rons Bantwal


ಹೆಬ್ರಿ ತಾಲೂಕಿನ ಪ್ರಥಮ ಕವಿ ಕಾವ್ಯ ಸಂಭ್ರಮದಲ್ಲಿ ಜೋಯಿಸ್

ಮುಂಬಯಿ, ಜು.17: ಹೆಬ್ರಿಯ ಗ್ರಾಮೀಣ ಪ್ರದೇಶದ ಎಸ್.ಆರ್ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಯು ಮಾಡುವ ಕನ್ನಡದ ಕೆಲಸ ಅದ್ಬುತವಾದುದು, ಕಾವ್ಯ ಸಾಹಿತ್ಯ ಅದು ಗೀಚಿ ಗೀಚಿ ಬರುವಂತದ್ದು, ನಾಡಿನಲ್ಲಿ ಕನ್ನಡ ಮತ್ತು ಸಾಹಿತ್ಯಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಮುಂದೆ ವಿಧ್ಯಾಥಿರ್üಗಳು ಸಾಹಿತ್ಯ ಕ್ಷೇತ್ರದಲ್ಲಿ ಮುನ್ನಡೆಯಬೇಕು ಹೆಬ್ರಿ ತಾಲ್ಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷರಾದ ಸಾಹಿತ್ಯ ಸಂಘಟಕ ಹೆಚ್.ಭಾಸ್ಕರ ಜೋಯಿಸ್ ಹೇಳಿದರು.

ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಹೆಬ್ರಿ ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಹೆಬ್ರಿ ತಾಲ್ಲೂಕಿನ ಪ್ರಥಮ ಕವಿ ಕಾವ್ಯ ಸಂಭ್ರಮಕ್ಕೆ ಚಾಲನೆ ನೀಡಿ ಜೋಯಿಸ್ ಮಾತನಾಡಿದರು.

ಕವಿ ಸಾಹಿತಿ ಶೇಖರ ಅಜೆಕಾರು ಅವರ ಸಾಹಿತ್ಯದ ತುಡಿತ ಬಹುದೊಡ್ಡದು, ಅವರಷ್ಟು ಸಾಹಿತ್ಯದ ಕೆಲಸವನ್ನು ಬೇರಾರು ಮಾಡಲು ಸಾಧ್ಯವಿಲ್ಲ. ಸಾಹಿತ್ಯ ಪರಿಷತ್ ಯುವ ಬರಹಗಾರರ ಪುಸ್ತಕಗಳನ್ನು ಮುದ್ರಿಸಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಹೆಬ್ರಿ ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಚ್. ನಾಗರಾಜ ಶೆಟ್ಟಿ ಮಾತನಾಡಿ ಕವಿ ಸಂಭ್ರಮದಲ್ಲಿ ವಿದ್ಯಾಥಿರ್üಗಳಿಗೆ ಸಾಹಿತ್ಯದೆಡೆಗೆ ಹೋಗಲು ಅತ್ಯುತ್ತಮ ಸಂದೇಶ ದೊರಕಿದೆ, ಯುವ ಮನಸ್ಸುಗಳನ್ನು ಪ್ರೇರೆಪಿಸುವ ಕೆಲಸ ಕೂಡ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ಹೋಬಳಿ ಘಟಕದ ಅಧ್ಯಕ್ಷ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದು ನಾಗರಾಜ ಶೆಟ್ಟಿ ಅವರನ್ನು ಗೌರವಿಸುವ ಮೂಲಕ ಕವಿ ಕಾವ್ಯ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಅಶೋಕ್ ಕುಮಾರ್ ಕಾಸರಗೋಡು, ಹೆಬ್ರಿ ಎಸ್.ಆರ್ ಶಿಕ್ಷಣ ಸಮೂಹ ಸಂಸ್ಥೆಯ ಸಂಚಾಲಕಿ ಸಪ್ನ ಎನ್ ಶೆಟ್ಟಿ, ಅವಿಭಜಿತ ದಕ್ಷಿಣ ಕನ್ನಡ ಜವಳಿ ವರ್ತಕರ ಸಂಘದ ಅಧ್ಯಕ್ಷ ಉದ್ಯಮಿ ಹೆಚ್.ಯೋಗೀಶ್ ಭಟ್, ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ಹೋಬಳಿ ಘಟಕದ ಸಂಘಟನಾ ಕಾರ್ಯದರ್ಶಿ ಸಮಾಜಸೇವಕ ಹೆಚ್.ಜನಾರ್ಧನ್, ಹೆಬ್ರಿ ಪತ್ರಕರ್ತರ ಸಂಘದ ಸ್ಥಾಪಕ ಕಾರ್ಯದರ್ಶಿ ಸುಕುಮಾರ್ ಮುನಿಯಾಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕ ಶೇಖರ ಅಜೆಕಾರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾಥಿರ್üಗಳ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರಬಲಗೊಳಿಸಿ ಕನ್ನಡವನ್ನು ಉಳಿಸುವ ಕೈಂಕರ್ಯಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.

ಕವಿ ಕಾವ್ಯ ಸಂಭ್ರಮದಲ್ಲಿ ಗಂಗಾಧರ ಪಣಿಯೂರು, ಅರುಣಾ ಹೆಬ್ರಿ, ಬಾಲಕೃಷ್ಣ ಹೆಗ್ಡೆ ಅಜೆಕಾರು, ಸುಮತಿ ಪ್ರಭು ಅಂಡಾರು, ದೀಪಕ್ ದುರ್ಗಾ, ಅವನಿ ಉಪಾಧ್ಯಾ ಕಾರ್ಕಳ, ಪ್ರಮೀಳಾ ಶೆಟ್ಟಿ ಸೋಮೇಶ್ವರ, ಸತೀಶ ಆರ್. ಆಚಾರ್ಯ ವರಂಗ, ನಾಗಶ್ರೀ ನಾಗರಕಟ್ಟೆ ಎಸ್.ಆರ್ ಕಾಲೇಜಿನ ಆಶ್ವಿನಿ ರಟ್ಟಾಡಿ, ಆಶ್ವಿನಿ ಉಪ್ಪಳ, ವಾಸುಕಿ, ಶ್ವೇತಾ ಎಸ್.ಪಿ ಜೋಗಿಬೆಟ್ಟು ಕವಿತೆಗಳನ್ನು ವಾಚಿಸಿ ಕಾವ್ಯ ಸಂಭ್ರಮದ ಬಗ್ಗೆ ಮಾತನಾಡಿದರು.

ಸಂಭ್ರಮದ ಅಧ್ಯಕ್ಷತೆ ವಹಿಸಿದ್ದ ಶೇಖರ ಅಜೆಕಾರು ಪ್ರತಿಯೊಬ್ಬರಿಗೂ ಮತ್ಸರ ಬೇಕು, ನಾವು ಉಳಿದವರಿಗಿಂತ ಒಳ್ಳೆಯದಾಗಬೇಕು ಎಂಬುದಕ್ಕೆ ಆದರೆ ಮತ್ತೊಬ್ಬರನ್ನು ತುಳಿದು ಅವರ ತಲೆ ಮೇಲೆ ನಾವು ಬೆಳೆಯ ಬೇಕು ಎಂಬ ಮತ್ಸರ ಇರಕೂಡದು ಎಂದರು.

ಆಳ್ವಾಸ್ ತಂಡದ ಮೂಲಕ ಸಾವಿರಾರು ಪ್ರದರ್ಶನಗಳಲ್ಲಿ ಭಾಗವಹಿಸಿದ ಯುವ ಕಲಾವಿದ, ಪತ್ರಕರ್ತ ದಿವಿತ್ ಕೆ ಪೆರಾಡಿ `ಶೂರ್ಪನಖಿ' `ವಿಷಯೆ ವಿಭ್ರಮ' ಏಕವ್ಯಕ್ತಿ ಪ್ರದರ್ಶನ ನಡೆಸಿದರು. ಸಾಹಿತ್ಯ ಸಂಘದ ಸಂಚಾಲಕ ದೀಪಕ್ ದುರ್ಗಾ ಸ್ವಾಗತಿಸಿದರು. ಎಸ್. ಅಶ್ವಿನಿ ವಂದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here