Wednesday 14th, May 2025
canara news

ಬಿಲ್ಲವರ ಅಸೋಸಿಯೇಶನ್ ಮುಂಬಯಿ 2018-2021 ಕಾರ್ಯಕಾರಿ ಸಮಿತಿ ರಚನೆ

Published On : 18 Jul 2018


ಚಂದ್ರಶೇಖರ ಎಸ್.ಪೂಜಾರಿ-ಅಧ್ಯಕ್ಷ ; ಜಯಂತಿ ವಿ.ಉಳ್ಳಾಲ್-ಮಹಿಳಾಧ್ಯಕ್ಷೆ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜು.17: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ 2018-2021ನೇ ಸಾಲಿನ ಕಾರ್ಯಕಾರಿ ಸಮಿತಿ ರಚನೆ ಆಗಿದ್ದು ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಎಸ್.ಪೂಜಾರಿ (ಶಾಂತಿ) ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಗಿ ಜಯಂತಿ ವಿ.ಉಳ್ಳಾಲ್ ಹಾಗೂ ಯುವಾಭ್ಯುದಯ ಉಪ ಸಮಿತಿ ಕಾರ್ಯಾಧ್ಯಕ್ಷ ಆಗಿ ನಾಗೇಶ್ ಎಂ.ಕೋಟ್ಯಾನ್ ಸರ್ವಾನುಮತದಿಂದ ಆಯ್ಕೆಯಾದರು.

       

           Chandrashekar S.Poojary                       Jayanti V.Ullal                                        Nagesh M. Kotyan.

ಇಂದಿಲ್ಲಿ ಸೋಮವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಮಾಲೋಚನಾ ಸಭಾಗೃಹದಲ್ಲಿ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಮಾರ್ಗದ ರ್ಶನದಲ್ಲಿ ಮತ್ತು ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕಾರಿ ಸಮಿತಿಯ ಪ್ರಥಮ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲ್ಪಟ್ಟಿತು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾಗಿ ಶಂಕರ ಡಿ.ಪೂಜಾರಿ, ಹರೀಶ್ ಜಿ.ಅವಿೂನ್, ದಯಾನಂದ್ ಆರ್.ಪೂಜಾರಿ ಕಲ್ವಾ, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಆಗಿ ಧನಂಜಯ ಎಸ್.ಕೋಟ್ಯಾನ್ (ಶಾಂತಿ), ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಗೌ| ಜೊತೆ ಕಾರ್ಯದರ್ಶಿಗಳಾಗಿ ಹರೀಶ್ ಜಿ.ಸಾಲ್ಯಾನ್, ಹರೀಶ್ ಹೆಜ್ಮಾಡಿ, ಕೇಶವ ಕೆ.ಕೋಟ್ಯಾನ್, ಧರ್ಮೇಶ್ ಎಸ್.ಸಾಲ್ಯಾನ್, ಜೊತೆ ಕೋಶಾಧಿಕಾರಿಗಳಾಗಿ ಶಿವರಾಮ ಕೆ.ಸಾಲ್ಯಾನ್, ಜಯ ಎಸ್.ಸುವರ್ಣ, ಮೋಹನ್ ಡಿ.ಪೂಜಾರಿ, ಬಬಿತಾ ಜೆ.ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾರ್ಶಿ ಆಗಿ ಸುಮಿತ್ರಾ ಎಸ್.ಬಂಗೇರ, ಯುವಾಭ್ಯುದಯ ಸಮಿತಿ ಕಾರ್ಯದರ್ಶಿ ಆಗಿ ಉಮೇಶ್ ಎಂ.ಕೋಟ್ಯಾ ನ್, ಸೇವಾದಳದ ದಳಪತಿ (ಜಿಒಸಿ) ಆಗಿ ಗೋಪಾಲ ಎಸ್.ಕೋಟ್ಯಾನ್ ಆಯ್ಕೆಯಾದರು.

ಶಾಲಾ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್, ಕಾರ್ಯದರ್ಶಿ ಆಗಿ ಸಿ.ರಾಮಚಂದ್ರಯ್ಯ (ಗುರುನಾರಾಯ ಣ ರಾತ್ರಿ ಶಾಲಾ ಮುಖ್ಯೋಪಾಧ್ಯಯ), ವಿದ್ಯಾ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಆರ್.ತೋನ್ಸೆ, ಕಾರ್ಯದರ್ಶಿ ಆಗಿ ಹರೀಶ್ ಜಿ.ಸಾಲ್ಯಾನ್, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಯಾನಂದ್ ಆರ್.ಪೂಜಾರಿ, ಕಾರ್ಯದರ್ಶಿ ಆಗಿ ಅಶೋಕ್ ಕುಕ್ಯಾನ್ ಸಸಿಹಿತ್ಲು, ಇತರ ಹಿಂದುಳಿದ ವರ್ಗ (ಒಬಿಸಿ) ಸಮಿತಿ ಕಾರ್ಯಾಧ್ಯಕ್ಷರಾಗಿ ಎಂ.ಆನಂದ ಪೂಜಾರಿ, ಕಾರ್ಯದರ್ಶಿ ಆಗಿ ದಿನೇಶ್ ಬಿ.ಅವಿೂನ್, ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯಧ್ಯಕ್ಷ ಮೋಹನ್‍ದಾಸ್ ಜಿ.ಪೂಜಾರಿ, ಕಾರ್ಯದರ್ಶಿ ಆಗಿ ರವೀಂದ್ರ ಎ.ಅವಿೂನ್ (ಶಾಂತಿ), ಸಾಮಾನ್ಯ ಸಹಾಯಕ ಸಮಿತಿ ಕಾರ್ಯಾಧ್ಯಕ್ಷೆ ಆಗಿ ಶಕುಂತಳಾ ಕೆ.ಕೋಟ್ಯಾನ್, ಕಾರ್ಯದರ್ಶಿ ಆಗಿ ಸದಾಶಿವ ಎ.ಕರ್ಕೇರ, ಶುಭ ಮಂಗಳ ಸಮಿತಿಯ ಕಾರ್ಯಧ್ಯಕ್ಷೆ ಸುಮಿತ್ರಾ ಎಸ್.ಬಂಗೇರ, ಕಾರ್ಯದರ್ಶಿ ಆಗಿ ಬಬಿತಾ ಕೋಟ್ಯಾನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಧರ್ಮಪಾಲ ಜಿ.ಅಂಚನ್, ಮಹೇಶ್ ಸಿ.ಪೂಜಾರಿ, ನಿಲೇಶ್ ಪೂಜಾರಿ, ಡಾ| ರಾಜಶೇಖರ್ ಆರ್.ಕೋಟ್ಯಾನ್, ಅಕ್ಷಯ್ ಎ.ಪೂಜಾರಿ ಆಯ್ಕೆ ಗೊಂಡರು.

ಇತ್ತೀಚೆಗೆ ನಡೆಸಲ್ಪಟ್ಟ ಅಸೋಸಿಯೇಶನ್‍ನ 86ನೇ ವಾರ್ಷಿಕ ಮಹಾಸಭೆಯಲ್ಲಿಮೂರು ವರ್ಷಗಳ ಕಾಲಾವಧಿ ಕಾರ್ಯಕಾರಿ ಸಮಿತಿಗೆ 30 ಸದಸ್ಯರು ಆಯ್ಕೆ ಗೊಂಡಿದ್ದು ಇಂದು 5 ಸಹಸದಸ್ಯರುಗಳಾಗಿ (ಕೋ.ಆಪ್ಟ್) ಆರಿಸÀಲಾಯಿತು. ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್, ಬಿಲ್ಲವ ಧುರೀಣರಾದ ಜ್ಯೋತಿ ಕೆ.ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ ಸಭೆಯಲ್ಲಿ ಉಪಸ್ಥಿತರಿದ್ದರು.ನಿರ್ಗಮನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರು ನೂತನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅವರಿಗೆ ಪುಷ್ಪಗುಪ್ಛವನ್ನಿತ್ತು ಅಧಿಕಾರ ಹಸ್ತಾಂತರಿಸಿ ಎಲ್ಲಾ ಪದಾಧಿಕಾರಿಗಳಿಗೆ ಶುಭಾರೈಸಿದರು. ಧರ್ಮಪಾಲ ಜಿ.ಅಂಚನ್ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here