Wednesday 14th, May 2025
canara news

ಡಾ| ರಜನಿ ವಿ.ಪೈ ಅವರಿಗೆ `ಬೆಂಗಳೂರು ರತ್ನ-2018 ಪ್ರಶಸ್ತಿ' ಪ್ರದಾನ

Published On : 18 Jul 2018   |  Reported By : Rons Bantwal


ಮುಂಬಯಿ, ಜು.17: ಬೆಂಗಳೂರು ರತ್ನ ಮಾಸಪತ್ರಿಕೆ ತನ್ನ 14ನೇ ವಾರ್ಷಿಕೋತ್ಸವವನ್ನು ಕಳೆದ ಸೋಮವಾರ ಬೆಂಗಳೂರಿನ ಕೆಂಪೇಗೌಡನಗರದ ಉದಯಾಭಾನು ಸಾಂಸ್ಕೃತಿಕ ಕಲಾ ಭವನದಲ್ಲಿ ನೇರವೇರಿಸಿತು. ಸಮಾರಂಭದಲ್ಲಿವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಕರ್ನಾಟಕ ವಿಕಾಸರತ್ನ -2018 ಮತ್ತು ಬೆಂಗಳೂರು ರತ್ನ-2018 ಪ್ರಶಸ್ತಿ ಪ್ರದಾನಿ ಗೌರವಿಸಿತು.

ಮುಂಬಯಿನ ಸಮಾಜ ಸೇವಕಿ, ಮುಂಬಯಿ ಕನ್ನಡ ಸಂಘ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ| ರಜನಿ ವಿನಾಯಕ ಪೈ ಅವರಿಗೆ `ಬೆಂಗಳೂರು ರತ್ನ-2018 ಪ್ರಶಸ್ತಿ' ಪ್ರದಾನಿಸಿ ಗೌರವಿಸಿತು.

ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಮನು ಬಳಿಗಾರ, ಕವಿ ದೊಡ್ಡರಂಗೇ ಗೌಡ, ಶಾಸಕ ರವಿ ಸುಬ್ರಹ್ಮಣ್ಯ, ದೂರದರ್ಶನದ ನಿವೃತ್ತ ಮಹಾ ನಿರ್ದೇಶಕ ಮಹೇಶ್ ಜೋಶಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಹಲವಾರು ಸಾಧಕರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಮುಂಬಯಿ ಉಪನಗರದ ಮುಲುಂಡ್ ಪಶ್ಚಿಮದಲ್ಲಿ ನೆಲೆಸಿದ ರಜನಿ ಪೈ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಸಿದ್ಧಿ ನಿವಾಸಿ ಆಗಿದ್ದಾರೆ. ಮುಂಬಯಿಯಲ್ಲಿ ತೆರೆಮರೆಯಲ್ಲಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here