Tuesday 23rd, April 2024
canara news

ವಿದ್ಯಾ ಪ್ರಸಾರಕ ಮಂಡಳದಲ್ಲಿ ಶಿಕ್ಷಕ ವರ್ಗಕ್ಕೆ ಪುರಸ್ಕಾರ ಪ್ರದಾನ-ಅಭಿನಂದನಾ ಸಮಾರಂಭ

Published On : 19 Jul 2018


ವಿಶ್ವದ ಸಂಪನ್ಮೂಲಗಳ ಸಂಪತ್ತೇ ಶಿಕ್ಷಕರು-ಚೇತನ್.ಆರ್ ಶ್ಹಾ

ಮುಂಬಯಿ, ಜು.19: ವಿದ್ಯಾ ಪ್ರಸಾರಕ ಮಂಡಳವು ಹಮ್ಮಿಕೊಂಡಿದ್ದ ವಜ್ರಮಹೋತ್ಸವ ನಿಮಿತ್ತ ವಿ.ಪಿ.ಎಂ ಮಂಡಳದ ಮುಲುಂಡ್ ಮತ್ತು ಐರೋಳಿಯ ಬಾಲವಾಡಿಯಿಂದ ಮಹಾವಿದ್ಯಾಲಯ ವರೆಗಿನ ನಿವೃತ್ತ ಶಿಕ್ಷಕ ಮತ್ತು ಶಿಕ್ಷಕೇತರ ಉದ್ಯೋಗಿಗಳಿಗೆ, ಹಾಗೆಯೇ ಪ್ರಸ್ತುತ ಕಾರ್ಯನಿರತ ಉದ್ಯೋಗಿಗಳಿಗೆ ಸರ್ಟಿಫಿಕೆಟ್ ಮತ್ತು ಸ್ಮರಣಿಕೆ ನೀಡಿ ಪುರಸ್ಕಾರ ಪ್ರದಾನ-ಅಭಿನಂದನಾ ಸಮಾರಂಭ ಇತ್ತೀಚೆಗೆ ಆಯೋಜಿಸಿತ್ತು.

ಸಮಾರಂಭಕ್ಕೆ ಮುಖ್ಯ ಅತಿಥಿüಯಾಗಿ ಮ್ಯಾರಥಾನ್ ರಿಯಾಲ್ಟಿ ಕಾರ್ಯಾಧ್ಯಕ್ಷ ಚೇತನ್ ಆರ್. ಶ್ಹಾ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಶಿಕ್ಷಕರು ರಾಷ್ಟ್ರದ ಸಂಪತ್ತು, ವಿದ್ಯಾಥಿರ್üಗಳಿಗೆ ಪ್ರೇರೆಪಿಸುವ ಸಾಮಥ್ರ್ಯ ಮತ್ತು ಉತ್ಸಾಹವನ್ನು ಉಂಟು ಮಾಡುವ, ಸಂಪತ್‍ಭರಿತವಾದ ನವ ಪೀಳಿಗೆಯನ್ನು ಸೃಷ್ಟಿಸುವ ಶಕ್ತಿ,, ಯುಕ್ತಿಯ ಕುರಿತು ಪ್ರಸ್ಥಾಪಿಸಿದರು. ವಿಜ್ಞಾನ ಮಾಹಿತಿಯ ವಿಶ್ವ ಗ್ರಂಥಾಲಯದ ನಿಯಂತ್ರಣವು ಸಾಂಪ್ರದಾಯಿಕ ಪಾತ್ರದಿಂದ ಬಹುದೂರ ಹೋಗುತ್ತಿದ್ದರೂ ಸಹ ಅದರ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ. ಜಾಗೃತ ಯುವ ಪೀಳಿಗೆಯನ್ನು ತಯಾರಿಸುವ ಮತ್ತು ಮೌಲ್ಯ ವ್ಯವಸ್ಥೆಯಿಂದ ಸವಾಲುಗಳನ್ನು ಎದುರಿಸುವ ಗುಣ ಕೇವಲ ಗುರುವಿನ ಸ್ಥಾನದಿಂದ ಮಾತ್ರ ಧಾರೆಯೆರೆದು ದಯಪಾಲಿಸಲಾಗುತ್ತದೆ ಎಂದು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಮರ್ಮವನ್ನು ಶಿಕ್ಷಕ ವೃಂದಕ್ಕೆ ಅಭಿನಂದಿಸತ್ತಾ ವಜ್ರ ಮಹೋತ್ಸವಕ್ಕೆ ಶುಭ ಹಾರೈಸಿದರು.

ಗೌರವ ಅತಿಥಿüಯಾಗಿ ಪ್ರಾಧ್ಯಾಪಕಿ ಶೈಲಜಾ ಶ್ಹಾ ಮಾತನಾಡಿ ವಿದ್ಯಾ ಪ್ರಸಾರಕ ಮಂಡಳವು ತಮ್ಮ ಪ್ರತಿಷ್ಠಿತ ಸೇವೆಯನ್ನು ಗುರುತಿಸಿ, ಗೌರವ ಮೆರವಣಿಗೆಯನ್ನು ವಾದ್ಯವೃಂದದ ಮೂಲಕ ಮಾನವೀಯತೆಯನ್ನು ಪ್ರದರ್ಶಿಸಿದೆ. ವಿಶ್ವದ ಶ್ರೇಷ್ಠ ಸಂಪನ್ಮೂಲಗಳ ವ್ಯವಸ್ಥಾಪಕರಾಗಿ ತಮ್ಮೆಲ್ಲರಿಗೂ ಸದವಕಾಶವನ್ನು ಕಲ್ಪಿಸಿ ಜವಾಬ್ದಾರಿಯನ್ನು ವಹಿಸಿದೆ. ಶ್ರೇಷ್ಠ ಸ್ಥಾನವನ್ನು ಅಲಂಕರಿಸಿದ ತಾವೂ ಉತ್ಸಾಹ ಮತ್ತು ಉಲ್ಲಾಸದಿಮದ ಮುಂದುವರೆಯಲು ಶಕ್ತಿ-ಸಾಮಥ್ರ್ಯವನ್ನು ಪ್ರಕಾಶಿಸಿರಿ ಎಂದು ಮನವಿ ಮಾಡಿದ ಅವರು ಶುಭ ಕೊರಿದರು.

ಮಂಡಳದ ಪ್ರಧಾನ ಗೌರವ ಕಾರ್ಯದರ್ಶಿ ಡಾ| ಪಿ.ಎಂ ಕಾಮತ್ ಅವರು ಗಣ್ಯರಿಗೆ ಪುಷ್ಪಗುಚ್ಛವಿತ್ತು ಗೌರವಿಸಿ, ಕಾರ್ಯಕ್ರಮಕ್ಕೆ ಅನುಮೊದನೆಯನ್ನು ಪ್ರಾಪ್ತಗೊಳಿಸಿ, ಸದಸ್ಯರ ಸಾಧನೆಯ ಆದರ್ಶದ ಸ್ಮರಣೆಯ ಪ್ರಾಮಾಣಿಕತೆ, ಪರಕಾಷ್ಠತೆಯ ಪಾರದರ್ಶಕತೆಯ ಕುರಿತು ವಿವರಿಸಿದÀರು ಹಾಗೂ ಶಾಲೆ ಬೆಳೆದು ಬಂದ ಬಗೆಯನ್ನು ಅನಾವರಣ ಗೊಳಿಸಿದರು. ವಿದ್ಯಾ ಪ್ರಸಾರಕ ಮಂಡಳಕ್ಕೆ 1962ರಲ್ಲಿ ಅಗತ್ಯವಿದ್ದಾಗ ಉದಯೋನ್ಮುಖ ಮತ್ತು ಸೃಷ್ಟಿಯಲ್ಲಿನ ಸಮರ್ಥ, ಸದೃಡ, ಅಹರ್ನಿಸಿ, ಪಾರದರ್ಶಕತೆಯ ವ್ಯಕ್ತಿಯಾಗಿ ಸಂಸ್ಥೆಯನ್ನು ಆಲದ ಮರದ ಹಾಗೆ ಬೆಳೆಯುವಂತೆ ಮಾಡಿ, ಶೈಕ್ಷಣಿಕ ಕ್ರಾಂತಿಯನ್ನೆ ಪ್ರಹಾರಗೊಳಿಸಿದರು. ನೀರಿಕ್ಷಣೆಗೂ ಮೀರಿದ ಆಧುನಿಕ ಸೌಕರ್ಯಗಳನ್ನು ಹೊಂದಿರುವ ಶಾಲಾ ಕಟ್ಟಡದ ಮರು ಅಭಿವೃದ್ಧಿ ಬಗ್ಗೆ ಪ್ರೇಕ್ಷಕರ ಗಮನಕ್ಕೆ ತಂದರು.

ವೇದಿಕೆಯಲ್ಲಿ ಮಂಡಳದ ಗೌರವ ಕಾರ್ಯದರ್ಶಿ ಬಿ.ಹೆಚ್ ಕಟ್ಟಿ, ಖಜಾಂಚಿ ಪೆÇ್ರ| ಸಿ.ಜೆ ಪೈ, ಸಹ ಖಜಾಂಚಿ ಎನ್.ಎಂ ಗುಡಿ ಆಸೀನರಾಗಿದ್ದರು.

ಸಮಾರಂಭದಲ್ಲಿ ಮಂಡಳದ ಪದಾಧಿಕಾರಿಗಳು, ಎಲ್ಲಾ ವಿಭಾಗದ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯ ರು, ಪರಿವೀಕ್ಷಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು, ನಿವೃತ್ತ ಶಿಕ್ಷಕರ ಯಾದಿಯನ್ನಯ ಆಯಾ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುವನಾ ಶೆಟ್ಟಿ, ಡಾ| ಸಾಯಿನಾಥ್ ಶೆಣೈ, ಮಹಾವಿದ್ಯಾಲಯದ ಪ್ರಾಚಿರಾವ ರಾಣಿ ಮತ್ತು ಸಂಧ್ಯಾ ಸೊಂಡೂರ ಓದಿದರು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಗಿ ವಂದೇ ಮಾತರಂ ಗೀತೆಯೊಮದಿಗೆ ಸಮಾರೋಪ ಗೊಂಡಿತು. ಅಶ್ವಿನಿ ಬಂಗೇರಾ ಸ್ವಾಗತಿಸಿ ಶಿಕ್ಷಕರ ವಿಶಿಷ್ಟವಾದ ವ್ಯಕ್ತಿ ಚಿತ್ರಣದ ಪ್ರದರ್ಶನದಿಂದ ಪರಿಚಯಿಸಿದರು. ಪ್ರಮೀಳಾ ಪರೇರಾ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here