Wednesday 14th, May 2025
canara news

ಕಲ್ಕೂರ ಪ್ರತಿಷ್ಠಾನ ಕೃಷ್ಣ ಕಥಾ ಚಿತ್ರ ಸ್ಪರ್ಧೆ

Published On : 19 Jul 2018   |  Reported By : Rons Bantwal


ಶ್ರೀ ಕೃಷ್ಣ ವೇಷ ಸ್ಪರ್ಧೆ ಎನ್ನುವ ರಾಷ್ಟ್ರೀಯ ಮಕ್ಕಳ ಉತ್ಸವವನ್ನು ಸಂಯೋಜಿಸುತ್ತಿರುವ ‘ಕಲ್ಕೂರ ಪ್ರತಿಷ್ಠಾನ’ದ ನೆರಳಲ್ಲಿ ವಿದ್ಯಾರ್ಥಿಗಳಿಗೆ ‘ಶ್ರೀ ಕೃಷ್ಣ ಕಥಾ ಚಿತ್ರ ಬಿಡಿಸುವ ಸ್ಪರ್ಧೆ ಜರಗಲಿದೆ. ಆಯ್ಕೆಯಾದ ಚಿತ್ರಗಳನ್ನು ‘ಶ್ರೀ ಕೃಷ್ಣ ದರ್ಶನ’ ಚಿತ್ರಕಥಾ ಮಾಲಿಕೆ ಪುಸ್ತಕದಲ್ಲಿ ಪ್ರಕಟಿಸಲಾಗುವುದು.

ಸ್ಪರ್ಧಾ ಸ್ವರೂಪ
• ಶ್ರೀ ಕೃಷ್ಣನ ಜನ್ಮ, ಬಾಲ್ಯ, ಸಾಹಸ, ಮಹಿಮೆಗಳನ್ನು ಸಾರುವ ದೃಶ್ಯಗಳನ್ನು ಚಿತ್ರಿಸಬೇಕು.
• ಚಂದಮಾಮ, ಬಾಲಮಿತ್ರ, ಅಮರ ಚಿತ್ರಕಥೆ ಮಾದರಿಯ ಚಿತ್ರಗಳಾಗಿರಬೇಕು.
• ವಾಟರ್ ಕಲರ್ ಚಿತ್ರಗಳಾಗಿರಬೇಕು
• ಚಿತ್ರಕ್ಕೆ ಶಿರ್ಷಿಕೆ ಎರಡು ಸಾಲಿನ ಕಥಾ ವಿವರಣೆ ಬರೆದಿರಬೇಕು
• ಉದಾ: ಕಾಳಿಂಗ ಮರ್ದನ: ಕಾಳಿಂದಿ ಮಡುವಿನÀಲ್ಲಿ ಬಾಲಕೃಷ್ಣ ಕಾಳಿಂಗವನ್ನು ಮರ್ದಿಸುತ್ತಿದ್ದಾನೆ ಕಾಳಿಂಗನ ಪತ್ನಿಯರು ಭಯದಿಂದ ಬೇಡಿಕೊಳ್ಳುತ್ತಿದ್ದಾರೆ.

ಸ್ಪರ್ಧಾ ವಿಭಾಗಗಳು/ನಿಯಮಗಳು
• 6ನೇ ತರಗತಿ ಮೇಲ್ಪಟ್ಟು ಪಿ.ಯು.ಸಿ. ತನಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
• ಚಿತ್ರದ ಅಳತೆ 10x14 ಇಂಚು ಇರತಕ್ಕದ್ದು
• ಮೊದಲ ಸುತ್ತಿನ ಸ್ಪರ್ಧೆ: ಮಕ್ಕಳು ಚಿತ್ರ ಬಿಡಿಸಿ ಅಂಚೆ/ಕೊರಿಯರ್ ಮೂಲಕ ಸಂಚಾಲಕ ಶ್ರೀ ಜಾನ್ ಚಂದ್ರನ್ (9844284175) ಕಲ್ಕೂರ ಪ್ರತಿಷ್ಠಾನ ಶ್ರೀ ಕೃಷ್ಣ ಸಂಕೀರ್ಣ ಕೊಡಿಯಾಲ್‍ಬೈಲ್ ಮಂಗಳೂರು ಈ ವಿಳಾಸಕ್ಕೆ ಚಿತ್ರಗಳನ್ನು ತಾ. 29-7-2018 ರ ಮುಂಚಿತವಾಗಿ ತಲುಪಿಸಬೇಕು.
• ಮೊದಲ ಸುತ್ತಿನಲ್ಲಿ ಆಯ್ಕೆಯಾದ ಚಿತ್ರಗಾರರಿಗೆ ಅಂತಿಮ ಹಂತದ ಸ್ಪರ್ಧೆಯನ್ನು ಮಂಗಳೂರು/ಉಡುಪಿಯಲ್ಲಿ ನಡೆಯಲಿರುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here