Wednesday 14th, May 2025
canara news

ಬಿಎಂಸಿ ಪರಿಮಂಡಳ ಸಮಿತಿ ಸದದ್ಯರಾಗಿ ನಿರಂಜನ್ ಲಕ್ಷ ್ಮಣ್ ಪೂಜಾರಿ ನಿಯುಕ್ತಿ

Published On : 21 Jul 2018   |  Reported By : Rons Bantwal


ಮುಂಬಯಿ, ಜು.21: ಬೃಹನ್ಮುಂಬಯಿ ಮಹಾನಗರ ಪಾಲಿಕಾ ಪರಿಮಂಡಳದ 3ಕೆ ಪೂರ್ವ ಸಮಿತಿ ಸದದ್ಯರಾಗಿ ನಿರಂಜನ್ ಲಕ್ಷ ್ಮಣ್ ಪೂಜಾರಿ ನಿಯುಕ್ತಿಗೊಂಡಿದ್ದಾರೆ.

ಮುಂಬಯಿ ಉಚ್ಛನ್ಯಾಯಲದ ಆದೇಶನುಸಾರ ಆಸ್ತಿತ್ವಕ್ಕೆ ಬಂದಿರುವ ಈ ಸಮಿತಿ ಮಹಾರಾಷ್ಟ್ರ ಸರಕಾರದ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಿದ್ದು ಬೃಹನ್ಮುಂಬಯಿ ಮಹಾನಗರ ಪಾಲಿಕಾ ಉಪಾಯುಕ್ತರ ನೇತೃತ್ವದಲ್ಲಿ ಕಾರ್ಯಚರಿಸುತ್ತಿದೆ.

ಕರ್ಮಚಾರಿ ಯೂನಿಯನ್, ಸರಕರೇತರಸಂಸ್ಥೆಗಳ ಮುಖ್ಯಸ್ಥರು, ಸರಕಾರಿ ನೌಕರ ಸಂಯೋಗತ್ವ ಮುಖ್ಯಸ್ಥರು ಮತ್ತಿತರ ಸಂಘಟನೆಗಳ ಎರಡೆರಡು ಸದಸ್ಯರನ್ನೊಳಗೊಂಡಿರುತ್ತದೆ. 3ಕೆ ಪೂರ್ವ ಸಮಿತಿ ಬಾಂದ್ರ ಪೂರ್ವಮತ್ತು ಪಶ್ಚಿಮ ಪ್ರದೇಶದಿಂದ ಜೊಗೇಶ್ವರಿ ತನಕ ವ್ಯಾಪ್ತಿಯಲ್ಲಿ ಕಾರ್ಯಚರಿಸಲಿದ್ದು ಸಮಿತಿಗೆ ಆಯ್ಕೆಯಾದ ಮೊದಲ ಕನ್ನಡಿಗ ಸದಸ್ಯ ನಿರಂಜನ್ ಆಗಿದ್ದು ನಿಯುಕ್ತಿಯನ್ನು ಸಮಿತಿಯ ಬಿಎಂಸಿ ವರಿಷ್ಠ ನಿರೀಕ್ಷ ಎಸ್.ಪಾಟೇಲ್ ಮಾನ್ಯತಾಪತ್ರದೊಂದಿಗೆ ತಿಳಿಸಿದ್ದಾರೆ.

ಮೂಲ್ಕಿ ಚಿತ್ರಾಪುರ ಗ್ರಾಮದ ನಿವಾಸಿ, ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ ಮುಂಬಯಿ ಪ್ರದೇಶ ಉಪಾಧ್ಯಕ್ಷ ಲಕ್ಷ ್ಮಣ್ ಪೂಜಾರಿ ಮತ್ತು ಪ್ರಭಾವತಿ ಲಕ್ಷ ್ಮಣ್ ದಂಪತಿ ಸುಪುತ್ರರಾಗಿರುವ ನಿರಂಜನ್‍ಪೂಜಾರಿ ಫೈನಾನ್ಸ್‍ನಲ್ಲಿ ಎಂಬಿಎ ಪದವೀಧರರಾಗಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here