Monday 10th, December 2018
canara news

ತುಳುವೆರೆ ಆಯನೊ ಕೂಟ ಕುಡ್ಲ (ರಿ.) ಗೌರವಾಧ್ಯಕ್ಷರಾಗಿ ಡಾ. ಆರೂರು ಪ್ರಸಾದ್ ರಾವ್ ಆಯ್ಕೆ

Published On : 21 Jul 2018   |  Reported By : Rons Bantwal


ಕಳೆದ 12ವರ್ಷಗಳಿಂದ ದಕ್ಷಿಣ ತುಳುನಾಡಿನ ಸಾಂಸ್ಕøತಿಕ, ಸಾಮಾಜಿಕ, ಸಾಹಿತ್ಯ, ಜನಪದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದು, ಪ್ರಥಮ ಬಾರಿಗೆ 5ದಿನ 5ವೇದಿಕೆಗಳಲ್ಲಿ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮವನ್ನು ಆಯೋಜಿಸಿ ತುಳುವೆರೆ ಆಯನೊ ಕೂಟ ಕಾಸರಗೋಡು ಪ್ರಸಿದ್ದಿಪಡೆದಿರುತ್ತದೆ. ಇದರ ಕಾರ್ಯಕ್ಷೇತ್ರವನ್ನು ಮಧ್ಯ ಮತ್ತು ಉತ್ತರ ತುಳುನಾಡಿಗೂ ವಿಸ್ತರಿಸಬೇಕೆಂಬ ಉದ್ದೇಶದಿಂದ ತುಳುವೆರೆ ಆಯನೊ ಕೂಟ ಕುಡ್ಲ(ರಿ) ಎಂಬ ಹೆಸರಿನಲ್ಲಿ ನೋಂದಾವಣಿಗೊಳಿಸಲು ಸಜ್ಜಾಗಿದೆ.

ಮಂಗಳೂರಿನಲ್ಲಿರುವ ತುಳು ಭಾಷೆಯ ಸಾಂಸ್ಕøತಿಕ, ಸಾಮಾಜಿಕ, ಸಾಹಿತ್ಯ, ಜನಪದ ಸೊಗಡನ್ನು ಇನ್ನಷ್ಟು ಜಗತ್ತಿಗೆ ಪರಿಚಯಿಸಲು ಮತ್ತು ತುಳುನಾಡಿನ ದೈವಾರಾಧನೆಯ ಬಗ್ಗೆ ಆಳವಾದ ಅಧ್ಯಯನ ಮಾಡುವ ಮೂಲ ಉದ್ದೇಶದಿಂದ ಕಾರ್ಯ ಪ್ರವೃತವಾಗಲಿದೆ. ಅಲ್ಲದೆ ತುಳುನಾಡಿನ ಜಾತಿ, ಮತ, ಭಾಷಾ ಸಾಮರಸ್ಯವನ್ನು ಕಾಯ್ದುಕೊಳ್ಳುವ ಮುಖ್ಯ ಗುರಿಯನ್ನು ಹೊಂದಿದೆ.

ಸಮಿತಿಯ ಗೌರವಾಧ್ಯಕ್ಷರಾಗಿ ಡಾ. ಆರೂರು ಪ್ರಸಾದ್ ರಾವ್ ಇವರನ್ನು ಆಯ್ಕೆಮಾಡಲಾಗಿದ್ದು, ಅಧ್ಯಕ್ಷರಾಗಿ ದಯಾನಂದ ಕತ್ತಲ್‍ಸಾರ್, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿ, ಹರೀಶ್ ಶೆಟ್ಟಿ ಪಣಿಯೂರು, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್. ಯಸ್ ಕೊಂಚಾಡಿ, ಕಾರ್ಯದರ್ಶಿಯಾಗಿ ನಾಗಾರಾಜ್ ಕುದ್ರೊಳಿ, ಆಶಾ ಶೆಟ್ಟಿ ಅತ್ತಾವರ, ಖಜಾಂಜಿಯಾಗಿ ಭೂಷಣ್ ಕುಲಾಲ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಕ್ಷಿತ್ ಕುಡುಪು, ಎಸ್. ಆರ್. ಬಂಡಿಮಾರ್, ಹರ್ಷ ರೈ ಪುತ್ರಕಳ, ರಾಧಿಕ ವಾಮಂಜೂರು, ರತ್ನಾವತಿ, ಚೇತನ್ ಕುಮಾರ್ ಕುಲಶೇಖರ, ಪ್ರೇಮನಾಥ ಪೊಳಲಿ ಹಾಗೂ ಪ್ರಧಾನ ಸಂಚಾಲಕರಾಗಿ ಡಾ. ರಾಜೇಶ ಆಳ್ವರನ್ನು ನೇಮಕ ಮಾಡಲಾಯಿತು.
More News

ಡಿ.15: ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ 74ನೇ ವಾರ್ಷಿಕ ಶನಿಪೂಜೆ-ಅಮೃತ ಮಹೋತ್ಸವ ಸಂಭ್ರಮಕ್ಕೆ ಚಾಲನೆ
ಡಿ.15: ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ 74ನೇ ವಾರ್ಷಿಕ ಶನಿಪೂಜೆ-ಅಮೃತ ಮಹೋತ್ಸವ ಸಂಭ್ರಮಕ್ಕೆ ಚಾಲನೆ
`ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್‍ನ್ಯಾಶನಲ್' ಪ್ರಶಸ್ತಿಗೆ ಭಾಜನರಾದ ಆಶಾ ಶಿವಾನಂದ ಶೆಟ್ಟಿ
`ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್‍ನ್ಯಾಶನಲ್' ಪ್ರಶಸ್ತಿಗೆ ಭಾಜನರಾದ ಆಶಾ ಶಿವಾನಂದ ಶೆಟ್ಟಿ
ಇಂಟರ್‍ನೇಶನಲ್ ಫೀಸ್ ಯೂನಿವರ್ಸಿಟಿ ಜರ್ಮನ್ ಸಂಸ್ಥೆಯ `ಗೌರವ ಡಾಕ್ಟರೇಟ್'ಗೆ ಪಾತ್ರರಾದ ಕರ್ನೂರು ಮೋಹನ್ ರೈ
ಇಂಟರ್‍ನೇಶನಲ್ ಫೀಸ್ ಯೂನಿವರ್ಸಿಟಿ ಜರ್ಮನ್ ಸಂಸ್ಥೆಯ `ಗೌರವ ಡಾಕ್ಟರೇಟ್'ಗೆ ಪಾತ್ರರಾದ ಕರ್ನೂರು ಮೋಹನ್ ರೈ

Comment Here