Wednesday 14th, May 2025
canara news

ಭರವಸೆಯ ಹೀರೋ ಶ್ರೀಕಾಂತ್ ರೈ

Published On : 23 Jul 2018   |  Reported By : Rons Bantwal


ತುಳುವಿಗೆ ಓರ್ವ ಸುಂದರ ಹಾಗೂ ಗಟ್ಟಿಮುಟ್ಟಾದ ಪ್ರತಿಭಾನ್ವಿತ ಹೀರೋ ಸಿಗುತ್ತಿದ್ದಾನೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿ ಶಹಬ್ಬಾಸ್ ಪಡೆದುಕೊಂಡಿರುವ ಶ್ರೀಕಾಂತ್ ಜೆ. ರೈ ಹೆಸರಿನ ಈತನ ಬಗ್ಗೆ ಎಲ್ಲರಿಗೂ ವಿಶೇಷ ಭರವಸೆ ಮೂಡಿದೆ.

 

ಗುರುಪುರ ಬೆಳ್ಳಿಬೆಟ್ಟುಗುತ್ತು ಜಗನ್ನಾಥ ರೈ ಮತ್ತು ಉಮಾ ಜೆ ರೈ ಅವರ ಪುತ್ರರಾಗಿರುವ ಇವರು ಶಾಲಾ - ಕಾಲೇಜು ದಿನಗಳಲ್ಲಿಯೇ ನಟನೆಯಲ್ಲಿ ಆಸಕ್ತಿ ಹೊಂದಿದವರು. ಆಗಲೇ ನಾಟಕಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಶಿಕ್ಷಣದಲ್ಲೂ ಮುಂಚೂಣಿಯಲ್ಲಿದ್ದ ಅವರು ಎಸ್‍ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ. ಬಳಿಕ ನಿಟ್ಟೆ ಕಾಲೇಜಿನಿಂದ ಎಂಬಿಎ ಪದವಿ ಪಡೆದಿರುವ ಅವರು ಬಿಗ್ ಎಫ್ ಎಂ ನಲ್ಲಿ ಒಂದು ವರ್ಷÀ ಆರ್‍ಜೆ ಆಗಿ ದುಡಿದಿದ್ದಾರೆ.

ನಟನಾಗಬೇಕು ಎಂಬ ಆಸೆ ಅವರಲ್ಲಿ ಆಳವಾಗಿತ್ತು. ಆದ್ದರಿಂದಲೇ ಅದಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದರು. ಬೆಂಗಳೂರಿನ ಬನಶಂಕರಿಯಲ್ಲಿ ಸುಚಿತ್ರಾ ಫಿಲ್ಮ್ ಅಕಾಡೆಮಿಯಿಂದ ಅಭಿನಯ ಕುರಿತು ತರಬೇತಿ ಪಡೆದುಕೊಂಡಿರುವ ಅವರು ಕೆ. ಬಾಲು ಅವರಿಂದ ಫೈಟಿಂಗ್ ತರಬೇತಿಯನ್ನೂ ಪಡೆದುಕೊಂಡಿದ್ದಾರೆ. ದೇಹ ದಂಡನೆ ಮೂಲಕ ಸಿನಿಮಾಕ್ಕೆ ಅಗತ್ಯವಿರುವ ರೀತಿಯಲ್ಲಿ ದೇಹವನ್ನು ಸಿದ್ಧಗೊಳಿಸುತ್ತಿದ್ದಾರೆ. ಆ ಶ್ರಮವೆಲ್ಲವೂ ಅವರ ದೇಹದಲ್ಲಿ ಈಗ ಕಂಡು ಬರುತ್ತಿದೆ. ಅವರು ಸುಂದರ ದೇಹದ ಸುಂದರ ರೂಪದ ಹೀರೋ ಎಂದು ಗುರುತಿಸಿಕೊಂಡಿದ್ದಾರೆ.

ಕೆಲವು ಟೆಲಿಫಿಲ್ಮ್‍ಗಳನ್ನು ಮಾಡಿರುವ ಅವರು ಕಂಡಿಷನ್ ಎಪ್ಲೈ, ಸ್ಟೋನ್ ಹೌಸ್ ಮುಂತಾದ ಕಿರುಚಿತ್ರ ಗಳನ್ನೂ ಮಾಡಿದ್ದಾರೆ. ಬರ್ಕೆ ಸಿನಿಮಾದಲ್ಲಿ ಮೂವರು ಹೀರೋಗಳ ಪೈಕಿ ಓರ್ವರಾಗಿ ನಟಿಸಿ ಗಮನ ಸೆಳೆದಿದ್ದರು. ಸಂಬಂಧ ಹೆಸರಿನ ತುಳು ಸೀರಿಯಲ್‍ನಲ್ಲೂ ನಟಿಸಿದ್ದರು. "ಗಂಟ್ ಕಲ್ವೆರ್" ಸಿನಿಮಾದಲ್ಲೂ ನಟಿಸಿರುವ ಇವರು ಕೆಲವು ಕನ್ನಡ ಸಿನಿಮಾಗಳಲ್ಲೂ ನಟಿಸಿ ಗಮನ ಸೆಳೆಯುತ್ತಿದ್ದಾರೆ. ಡ್ವಾನ್ ಕುಮಾರ್, ಅರಿಷಡ್ವರ್ಗ, ಕಾಲಚಕ್ರ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, ಪ್ರಸ್ತುತ ಅರುಣಾಶ್ವ ಎಂಬ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಹೀರೋ ಪಾತ್ರ ಮಾಡಿರುವ ಅವರಿಗೆ ಸಂಭ್ರಮ ಹೀರೋಯಿನ್ ಆಗಿದ್ದಾರೆ. ಅದೇ ತಂಡದವರು ಮಾಡುತ್ತಿರುವ 'ಆಯೆ ಏರ್' ತುಳು ಸಿನಿಮಾದಲ್ಲೂ ಇವರೇ ಹೀರೋ ಆಗಿದ್ದಾರೆ. ಈ ಚಿತ್ರದಲ್ಲೂ ಸಂಭ್ರಮ ನಾಯಕಿಯಾಗಿದ್ದಾರೆ. ಇವರಿಗೆ ಉತ್ತಮ ಅವಕಾಶಗಳು ಸಿಕ್ಕಿದರೆ ಅವರಲ್ಲಿರುವ ಪೂರ್ಣ ಪ್ರಮಾಣದ ಪ್ರತಿಭೆ ಹೊರಬರಲು ಸಾಧ್ಯ. ಅಂಥ ಅವಕಾಶ ಶ್ರೀಕಾಂತ್‍ಗೆ ಲಭಿಸಲಿ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here