Wednesday 14th, May 2025
canara news

ಇನ್ಮುಂದೆ ಚುನಾವಣೆಗೆ ಸ್ಪರ್ಧೆ ಇಲ್ಲ - ಕ್ಷೇತ್ರದ ಯುವನಾಯಕರಿಗೆ ಮೊದಲ ಆದ್ಯತೆ- ಕೆ.ಅಭಯಚಂದ್ರ ಜೈನ್

Published On : 24 Jul 2018   |  Reported By : canaranews network


ಮಂಗಳೂರು: ನನಗೆ ವಯಸ್ಸಾಗಿದೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಯುವ ಅಭ್ಯರ್ಥಿಗೆ ಸ್ಪರ್ಧಿಸಲು ಅವಕಾಶ ನೀಡುತ್ತೇನೆ. ಬೇರೆ ಕ್ಷೇತ್ರದಲ್ಲಿನ ಅಭ್ಯರ್ಥಿಗಳು ಇಲ್ಲಿ ಬಂದು ಸ್ಪರ್ಧಿಸುವುದಕ್ಕಿಂತ ಇಲ್ಲಿಯ ಯುವನಾಯಕರೇ ಸ್ಪರ್ಧಿಸಲು ಬೇಕಾದ ಪ್ರಯತ್ನಗಳನ್ನು ಮಾಡುತ್ತೇನೆ. ನಾನು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವರ್ಧನೆಯೇ ನನ್ನ ಗುರಿ. ಅದಕ್ಕಾಗಿ ಶ್ರಮಿಸುವೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸೋಮವಾರ ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೋದಿ ಒಬ್ಬ ಉತ್ತಮ ಕಲಾವಿದ.

ಅವರಿಗೆ ಜನರನ್ನು ಮರುಳು ಮಾಡುವುದು ಚೆನ್ನಾಗಿ ಗೊತ್ತು. ಭಾಷಣದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಪೆಟ್ರೋಲ್,ಡಿಸೆಲ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಪ್ರಧಾನಿ ಮಾತ್ರ ವಿದೇಶ ಪ್ರವಾಸದಲ್ಲೇ ನಿರತರಾಗಿದ್ದಾರೆ. ವಿದೇಶ ಪ್ರವಾಸಗಳನ್ನು ಹಮ್ಮಿಕೊಳ್ಳುವುದು ವಿದೇಶಾಂಕ ಸಚಿವ ಕೆಲಸ. ಆದರೆ ಆ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ. ಯುವಕರಿಗೆ ಉದ್ಯೋಗ ಸೃಷ್ಟಿಸುತ್ತೇವೆ ಎನ್ನುವ ಮೋದಿಯ ಭರವಸೆ ಇನ್ನೂ ಈಡೇರಲಿಲ್ಲ ಎಂದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here