Wednesday 14th, May 2025
canara news

ನಾಳೆ (ಜು.29) ದಾದರ್ ಪೂರ್ವದ ಕೊಹಿನೂರ್ ಭವನ್‍ನಲ್ಲಿ ಶ್ರೀ ರಜಕ ಸಂಘ ಮುಂಬಯಿ 81ನೇ ಮಹಾಸಭೆ

Published On : 28 Jul 2018   |  Reported By : Rons Bantwal


ಮುಂಬಯಿ, ಜು.27: ಶ್ರೀ ರಜಕ ಸಂಘ ಮುಂಬಯಿ (ರಿ.) ಇದರ 81ನೇ ಮಹಾಸಭೆಯನ್ನು ನಾಳೆ ಜು.29ನೇ ಆದಿತ್ಯವಾರ ಪೂರ್ವಾಹ್ನ 9.30 ಗಂಟೆಗೆ ಸರಿಯಾಗಿ ಕೊಹಿನೂರ್ ಭವನ್ ಹಾಲ್, ಜ್ಞಾನ್ ಜೀವನ್‍ದಾಸ್ ಮಾರ್ಗ, ದಾದರ್ ಸೆಂಟ್ರಲ್ ರೇಲ್ವೆ ಸ್ಥಾನಕದ ಎದುರುಗಡೆ, ದಾದರ್ (ಪೂರ್ವ), ಮುಂಬಯಿ ಇಲ್ಲಿ ಸಂಘದ ಅಧ್ಯಕ್ಷ ಸತೀಶ್ ಎಸ್ ಸಾಲಿಯಾನ್ ಅಧ್ಯಕ್ಷತೆಯಲ್ಲಿ ಜರಗಲಿರುವುದು.

ಸಭೆಯಲ್ಲಿ 80ನೇ ವಾರ್ಷಿಕ ಮಹಾಸಭೆಯ ವರದಿ ವಾಚನ ಮತ್ತು ಮಂಜೂರತಿ, 2017-18ರ ವಾರ್ಷಿಕ ಚಟುವಟಿಕಾ ವರದಿ, ಲೆಕ್ಕಪತ್ರ ಮಂಡಿಸಿ ಮಂಜೂರತಿ, 18ರ ಸಾಲಿಗೆ ಶಾಸನಬಧ್ಧ ಮತ್ತು ಆಂತರಿಕ ಲೆಕ್ಕ ಪರಿಶೋಧಕರ ಆಯ್ಕೆ, ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾಥಿರ್üಗಳಿಗೆ ಬಹುಮಾನ ವಿತರಣೆ, ವೈವಾಹಿಕ ಜೀವನದ ಸ್ವರ್ಣ ದಂಪತಿಗಳ ಮತ್ತು ಸಾಧಕರ ಸನ್ಮಾನ, ಮುಂದಿನ ವರ್ಷಾಚರಣೆಗಳ ಪಕ್ಷಿನೋಟ, 2018-20ರ ಎರಡು ಸಾಲಿಗೆ ಪದಾಧಿಕಾರಿಗಳ ಮತ್ತುಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ, ಪ್ರಾದೇಶಿಕ, ಮಹಿಳಾ ವಿಭಾಗ ಮತ್ತು ಯುವ ವಿಭಾಗಗಳ ಪದಾಧಿಕಾರಿಗಳ ಆಯ್ಕೆ ನಡೆಸಲಾಗುವುದು. ಅಧ್ಯಕ್ಷರ ಅನುಮತಿಯ ಮೇರೆಗೆ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ಸದಸ್ಯರಿಗೆ ಅವಕಾಶ ಒದಗಿಲಾಗುವುದು.

ಆದುದರಿಂದ ಸಂಘದ ರಜಕ ಬಾಂಧವರು, ಸದಸ್ಯರು ಹೆಚ್ಚಿನ ಸ0ಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿರಬೇಕಾಗಿ ಗೌರವ ಕಾರ್ಯದರ್ಶಿ ಸುಮಿತ್ರಾ ಆರ್ ಪಲಿಮಾರ್ ಆಡಳಿತ ಸಮಿತಿ ಪರವಾಗಿ ಈ ಮೂಲಕ ವಿನ0ತಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here