Wednesday 14th, May 2025
canara news

ಯಶ್ ಸುರೇಂದ್ರ ಪೂಜಾರಿ-ಬಿಬಿಎ15ನೇ ರ್ಯಾಂಕ್

Published On : 30 Jul 2018   |  Reported By : Rons Bantwal


ಮುಂಬಯಿ, ಜು.30: ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಪರೀಕ್ಷೆಯಲ್ಲಿ ಮಾ| ಯಶ್ ಸುರೇಂದ್ರ ಪೂಜಾರಿ ಅವರು ಅತ್ಯಾಧಿಕ ಅಂಕಗಳನ್ನು ಗಳಿಸಿ 15ನೇ ರ್ಯಾಂಕ್‍ಗೆ ಭಾಜನರಾಗಿದ್ದಾರೆ. ಒಟ್ಟು 600 ವಿದ್ಯಾಥಿರ್üಗಳು ಪರೀಕ್ಷೆ ನೀಡಿದ್ದು ಆ ಪಯ್ಕಿ ವಿಲೇಪಾರ್ಲೆ ಪಶ್ಚಿಮದ ನರ್ಸಿ ಮಾನ್ಜಿ ಇನ್‍ಸ್ಟ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (ಎನ್‍ಎಂಐಎಸ್) ಕಾಲೇಜು ವಿದ್ಯಾಥಿರ್ü ಯಶ್ ಸುರೇಂದ್ರ ಪೂಜಾರಿ ಸರ್ವೋತ್ಕೃಷ್ಟ ದರ್ಜೆಯಲ್ಲಿ ಪಾಸಾಗಿದ್ದಾರೆ.

ಬಿಬಿಎ ವಿದ್ಯಾಭ್ಯಾಸವು ವಾಣಿಜ್ಯ , ಕಲೆ ಮತ್ತು ವ್ಯವಹಾರ ಆಡಳಿತದಲ್ಲಿ ಸ್ನಾತಕ ಪದವಿ ಆಗಿದೆ. ಬಿಬಿಎ ಪೆÇ್ರೀಗ್ರಾಂ ಸಾಮಾನ್ಯವಾಗಿ ಸಾಮಾನ್ಯ ವ್ಯಾಪಾರ ಶಿಕ್ಷಣ ಮತ್ತು ನಿರ್ದಿಷ್ಟ ಸಾಂದ್ರತೆಗಳಿಗೆ ಮುಂದುವರಿದ ಕೋರ್ಸುಗಳನ್ನು ಒಳಗೊಂಡಿದೆ.

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ, ವ್ಯಾಪಾರದ ಸಾಂದ್ರೀಕರಣದ ಒಂದು ಅಥವಾ ಹೆಚ್ಚಿನ ಕ್ಷೇತ್ರಗಳಲ್ಲಿ ನಾಲ್ಕು ವರ್ಷಗಳ ಸಂಪೂರ್ಣ-ಸಮಯದ ಅಧ್ಯಯನದ ನಂತರ ಪದವಿಯನ್ನು ನೀಡಲಾಗುತ್ತದೆ. ಯೂರೋಪ್‍ನಲ್ಲಿ, ವ್ಯಾಪಾರದ ಸಾಂದ್ರೀಕರಣದ ಒಂದು ಅಥವಾ ಹೆಚ್ಚಿನ ಕ್ಷೇತ್ರಗಳಲ್ಲಿ ಮೂರು ವರ್ಷಗಳ ಪೂರ್ಣ-ಸಮಯದ ಅಧ್ಯಯನದ ನಂತರ ಪದವಿಯನ್ನು ನೀಡಲಾಗುತ್ತದೆ.

ಮಹಾನಗರದಲ್ಲಿನ ಹೆಸರಾಂತ ಸಮಾಜ ಸೇವಕ, ಸಾಯಿಕೇರ್ ಲಾಜೆಸ್ಟಿಕ್ಸ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ, ಹಳೆಯಂಗಡಿ ಪಾಲಡ್ಕ ಮೂಲದ ಸುರೇಂದ್ರ ಎ.ಪೂಜಾರಿ ಮತ್ತು ಮೂಲ್ಕಿ ದಯಾಶ್ರೀ ಎಸ್.ಪೂಜಾರಿ ದಂಪತಿ ಸುಪುತ್ರ ಆಗಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here