Wednesday 14th, May 2025
canara news

ಬೆರೆತು ಬಾಳಿದಾಗ ಮಾತ್ರ ನಿಜವಾದ ಬುದ್ಧಿವಂತರಾಗಲು ಸಾಧ್ಯ ರಜಕ ಸಂಘ ಮುಂಬಯಿ 81ನೇ ಮಹಾಸಭೆಯಲ್ಲಿ ಸತೀಶ್ ಎಸ್.ಸಾಲಿಯಾನ್

Published On : 30 Jul 2018   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.30: ಎಲ್ಲಾ ಸಮಾಜಗಳ ಸಂಘಸಂಸ್ಥೆಗಳಲ್ಲೂ ಎಲ್ಲಾ ಹರೆಯದ ಮತ್ತು ವಿಭಿನ್ನ ವರ್ಗದ ಜನರಿರುವಂತೆ ನಮ್ಮಲ್ಲೂ ವಿದ್ಯಾವಂತರೂ, ವಿವಿಧ ಕ್ಷೇತ್ರದ ಜನರಿದ್ದಾರೆ. ಆದರೆ ಸಂಘಸಂಸ್ಥೆಗಳಲ್ಲಿ ಎಲ್ಲರನ್ನೂ ಸಂಭಾಳಿಸುವುದು ಸುಲಭವಲ್ಲ. ಇಂತವರ ಜೊತೆ ಸೇರಿಬಾಳಿದರೆನೇ ನಾವು ನಿಜವಾದ ಬುದ್ಧಿವಂತರಾಗುತ್ತೇವೆ. ಯಾಕೆಂದರೆ ವಿದ್ಯೆ ಕಲಿತರೆ ವಿದ್ಯಾವಂತರಾಗುತ್ತೇವೆ. ಎಲ್ಲಾ ಹರೆಯದ ಜನರೊಂದಿಗೆ ಬೆರೆತು ಬಾಳಿದಾಗ ಮಾತ್ರ ನಿಜವಾದ ಬುದ್ಧಿವಂತರಾಗಲು ಸಾಧ್ಯ. ವಿದ್ಯೆ ಮತ್ತು ಬುದ್ಧಿ ಒಲಿಸಿಕೊಂಡವನೇ ನಿಜವಾದ ಮಾನವ. ಅನೇಕರು ವಿದ್ಯಾವಂತರಾಗುತ್ತಾರೆ ಆದರೆ ಸ್ವಸಮಾಜದಲ್ಲೇ ಇರಲಾರರು. ಅನೇಕ ಬಾರಿ ಬುದ್ಧಿವಂತರಲ್ಲಿ ವಿದ್ಯೆಯ ಕೊರತೆಯಿರುತ್ತದೆ. ಇಲ್ಲಿ ಇಬ್ಬರೂ ಹಿಂದುಳಿಯುವರು. ಸಮಾಜದ ಏಳಿಗೆಗೆ ಹಾಗೂ ಸ್ವಂತ ಏಳಿಗೆಗೆ ವಿದ್ಯೆ ಮತ್ತು ಬುದ್ಧಿಯ ಅತ್ಯಗತ್ಯವಿದೆ. ವಿದ್ಯಾರ್ಜನೆಯಿಂದ ವಿದ್ಯೆ ಗಳಿಸಬಹುದು ಆದರೆ ಸಮಾಜದ ಜನತೆಯೊಂದಿಗೆ ಬೆರುತುಕೊಂಡಾಗ ಮಾತ್ರ ಬುದ್ಧಿ ಲಭಿಸುವುದು. ಅದೂ ಶುಲ್ಕರಹಿತ ಜ್ಞಾನಾರ್ಜನೆ ಸಾಧ್ಯವಾಗುವುದು ಎಂದು ರಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್ ಎಸ್.ಸಾಲಿಯಾನ್ ತಿಳಿಸಿದರು.

ಶ್ರೀ ರಜಕ ಸಂಘ ಮುಂಬಯಿ ತನ್ನ 81ನೇ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ದಾದರ್ ಪೂರ್ವದಲ್ಲಿನ ಕೊಹಿನೂರ್ ಭವನ್ ಸಭಾಗೃಹದಲ್ಲಿ ನಡೆಸಿದ್ದು, ಸಂಘದ ಪದಾಧಿಕಾರಿಗಳನ್ನು ಒಳಗೊಂಡು ಅಧ್ಯಕ್ಷ ಸತೀಶ್ ಸಾಲಿಯಾನ್ ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯನ್ನೀಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

ಸದ್ಯದ ಯುವಪೀಳಿಗೆ ಸ್ವಸಮಾಜದ ಸಂಸ್ಥೆಗಳಲ್ಲೂ ಸಹಭಾಗಿಗಳಾಗದಿರುವುದು ದೊಡ್ದ ದುರಂತವೇ ಸರಿ. ಪೆÇೀಷಕರು ಇಲ್ಲೇನು ಸಿಗುವುದು ಎಂಬ ಉಮೇದು ಇರಿಸಿ ಬರುವುದೂ ಇದೆ. ಯಾವುದೇ ವಿಶ್ವವಿದ್ಯಾಲಯಗಳಲ್ಲೂ ಲಭ್ಯವಾಗದ ತಿಳುವಳಿಕೆ ಸಮಾಜ ಸಂಸ್ಥೆಗಳಲ್ಲಿ ಲಭಿಸುವುದು. ಇಲ್ಲಿ ಬದುಕು ಎಂಬ ಕಲ್ಪನೆ ಮಾಡಿಸಿ ಕೊಂಡು ಕ್ರೀಡೆ, ಶಾಸನ, ಇನ್ಫೋಟೆಕ್, ಸಾಂಸ್ಕೃತಿಕ, ಶಿಕ್ಷಣ ಪ್ರಾಪ್ತಿಸಿದಾಗ ಸಂಸ್ಥೆಗಳು ಸರ್ವೊತೋಮುಖ ಅಭಿವೃದ್ಧಿಗೆ ಪೂರಕವಾಗಬಲ್ಲವು ಎಂದೂ ಸತೀಶ್ ಸಾಲಿಯಾನ್ ಸಲಹಿದರು.

ಉಪಾಧ್ಯಕ್ಷ ದಾಸು ಸಿ.ಸಾಲ್ಯಾನ್, ಜೊತೆ ಕೋಶಾಧಿಕಾರಿ ಸುಭಾಷ್ ಸಾಲ್ಯಾನ್, ಮಹಿಳಾ ವಿಭಾಗಧ್ಯಕ್ಷೆ ಸರೋಜಿನಿ ಡಿ.ಗುಜರನ್, ಯುವ ವಿಭಾಗಧ್ಯಕ್ಷ ಮನೀಷ್ ಕುಂದರ್, ಡೊಂಬಿವಿಲಿ ಪ್ರಾದೇಶಿಕ ಸಮಿತಿ ಅಧ್ಯಕ್ಷ ಬಾಲಕೃಷ್ಣ ಸಾಲ್ಯಾನ್, ನವಿಮುಂಬಯಿ ಪ್ರಾದೇಶಿಕ ಸಮಿತಿ ಅಧ್ಯಕ್ಷ ಜಯ ಮಡಿವಾಳ, ವಸಾಯಿ ಪ್ರಾದೇಶಿಕ ಸಮಿತಿ ಗೌರವಾಧ್ಯಕ್ಷ ಶ್ಯಾಮ ಮಡಿವಾಳ, ಅಧ್ಯಕ್ಷ ರಮೇಶ್ ಪಲಿಮಾರ್, ಪಶ್ಚಿಮ ಪ್ರಾದೇಶಿಕ ಸಮಿತಿ ಅಧ್ಯಕ್ಷ ಸುರೇಶ್ ಸಾಲ್ಯಾನ್, ಮಧ್ಯ ಪ್ರಾದೇಶಿಕ ಸಮಿತಿ ಅಧ್ಯಕ್ಷ ರತ್ನಾಕರ್ ಕುಂದರ್ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು.

ಅನೇಕ ಸದಸ್ಯ ಬಂಧುಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಲಹೆಗಳನ್ನೀಡಿ ಸಂಘದ ಶ್ರೇಯಸ್ಸಿಗೆ ಶುಭಾರೈಸಿದರು. ನಂತರ 2018-20ರ ಸಾಲಿಗೆ ಪದಾಧಿಕಾರಿಗಳ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ, ಪ್ರಾದೇಶಿಕ, ಮಹಿಳಾ ವಿಭಾಗ ಮತ್ತು ಯುವ ವಿಭಾಗಗಳ ಪದಾಧಿಕಾರಿಗಳ ಆಯ್ಕೆ ಸಭೆ ನಡೆಸಿತು. ದಾಸು ಸಿ.ಸಾಲ್ಯಾನ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು. ಅಂತೆಯೇ ಇತರ ಪದಾಧಿಕಾರಿಗಳ ಆಯ್ಕೆಯೂ ನಡೆಸಲ್ಪಟ್ಟಿತು.

ಸಭೆಯ ಮಧ್ಯಾಂತರದಲ್ಲಿ ಸಮಾಜದ ಉತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿವಿಧ ವಿಭಾಗಗಳ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾಥಿರ್ü ವೇತನ ಪ್ರದಾನಿಸಲಾಯಿತು. ವೈವಾಹಿಕ ಸ್ವರ್ಣ ಜೀವನ ಪೂರೈಸಿದ ಎಂ.ಎಸ್ ಕುಂದರ್ ಮತ್ತು ಸುಮತಿ ಕುಂದರ್ ದಂಪತಿಗೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ 9 ಬಾರಿ 84 ಕಿ.ಮೀ ಓಡಿ ಕಾಮ್‍ರೇಡ್ ಗೌರವಕ್ಕೆ ಪಾತ್ರರಾದ ಸತೀಶ್ ಗುಜರನ್ ಇವರಿಗೆ ಸಾಧಕ ಪುರಸ್ಕಾರ ಪ್ರದಾನಿಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.

ಸಭೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶಶಾಂಕ್ ಸಾಲ್ಯಾನ್, ಸುಮಿತಾ ಡಿ.ಸಾಲ್ಯಾನ್, ಭಾಸ್ಕರ್ ಕುಂದರ್, ಸಂಜೀವ್ ಎಕ್ಕಾರ್, ಪ್ರಕಾಶ್ ಗುಜರನ್, ಕುಮಾರ್ ಬಂಗೇರ, ಅಂತರಿಕ ಲೆಕ್ಕ ಪರಿಶೋಧಕರಾದ ಪೂವಣಿ ಸಾಲ್ಯಾನ್, ಸಿಎ| ಪ್ರದೀಪ್ ಕುಂದರ್ ಮತ್ತಿತರರು ಉಪಸ್ಥಿತರಿದ್ದು ಅಧ್ಯಕ್ಷರು ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು.

ಡೊಂಬಿವಿಲಿ ಪ್ರಾದೇಶಿಕ ಮಹಿಳಾ ವಿಭಾಗದ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಸಭೆ ಆರಂಭ ಗೊಂಡಿತು. ನಂತರ ಅಗಲಿದ ಸದಸ್ಯರು, ಹಿತೈಷಿಗಳಿಗೆ ಸಭೆಯ ಶ್ರದ್ಧಾಂಜಲಿ ಅರ್ಪಿಸಿತು. ಕಾರ್ಯದರ್ಶಿ ಸುಮಿತ್ರಾ ಆರ್.ಪಲಿಮಾರ್ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ, ಮುಂದಿನ ವರ್ಷಾಚರಣಾ ಪಕ್ಷಿನೋಟ ಪ್ರಕಟಿಸಿ ಸಭಾ ಕಲಾಪ ನಡೆಸಿದರು. ಜೊತೆ ಕೋಶಾಧಿಕಾರಿ ಸಿಎ| ವಿಜಯ್ ಕುಂದರ್ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿಯನ್ನು ನೀಡಿದರು. ಜೊತೆ ಕಾರ್ಯದರ್ಶಿ ಕಿರಣ್ ಕುಂದರ್ ವಾರ್ಷಿಕ ಚಟುವಟಿಕೆಗಳ ಮಾಹಿತಿಯನ್ನಿತ್ತು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಸಮಾಪನ ಕಂಡಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here