Wednesday 14th, May 2025
canara news

ಮಂಗಳೂರು ಮುಂಬಯಿ ಪ್ರಯಾಣದಲ್ಲಿ ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ ಅವರ ಚಿನ್ನಾಭರಣ-ದಾಖಲೆಪತ್ರಗಳಿರುವ ಬ್ಯಾಗ್ ಕಳವು

Published On : 31 Jul 2018   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜು.31: ಬಿಲ್ಲವರ ಥಾಣೆ ಭಿವಂಡಿಯಲ್ಲಿನ ಹೊಟೇಲ್ ಸಾಯಿಪ್ರಸಾದ್ ಫೆÉೈನ್‍ಡೈನ್ ಫ್ಯಾಮಿಲಿ ರೆಸ್ಟೋರೆಂಟ್‍ನ ಮಾಲಿಕ, ಬಂಟರ ಸಂಘ ಮುಂಬಯಿ ಇದರ ಭಿವಂಡಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷ, ಥಾಣೆ ಕಲ್ಯಾಣ್ ಇಲ್ಲಿನ ಶಹಾಡ್ ಪೂರ್ವದ ಶ್ರೀ ಮೂಕಾಂಬಿಕ ದೇವಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ ಅವರ ಚಿನ್ನಾಭರಣ ಮತ್ತು ದಾಖಲೆಪತ್ರಗಳಿರುವ ಬ್ಯಾಗ್ ಕಳವಾಗಿದೆ.

ನಿನ್ನೆ ಸೋಮವಾರ ಸಂಜೆ ಮಂಗಳೂರು ಪಿವಿಎಸ್ ಸರ್ಕಲ್‍ನಿಂದ ಎಸ್‍ಆರ್‍ಎಸ್ ಟ್ರಾವೆಲ್ಸ್ ಬಸ್‍ನಲ್ಲಿ ಮುಂಬಯಿಗೆ ಪ್ರಯಣಿಸಿದ್ದ ವಿಶ್ವನಾಥ ಶೆಟ್ಟಿ ಅವರು ಯಲ್ಲಾಪುರ ಸಮೀಪ ಊಟಕ್ಕಿಳಿದು ಮತ್ತೆ ಬಸ್ಸನ್ನೇರಿ ನಿದ್ರಿಸಿದ್ದರು. ಎಂದಿನಂತೆ ಇಂದು ಬೆಳಿಗ್ಗೆ ಬಸ್ ನವಿಮುಂಬಯಿ ಅಲ್ಲಿನ ವಾಶಿಗೆ ತಲುಪಿದ್ದು ಇಳಿಯುವ ವೇಳೆ ತನ್ನ ಸೀಟಿನ ಮೇಲಿರಿಸಿದ ಹ್ಯಾಂಡ್‍ಬ್ಯಾಗ್ ತೆಗೆಯಲೆತ್ನಿಸಿದ್ದಾಗ ಬ್ಯಾಗ್ ಮಾಯವಾಗಿರುವುದು ಗಮನಕ್ಕೆ ಬಂದಿದೆ.

ಬ್ಯಾಗ್‍ನಲ್ಲಿ 30 ಗ್ರಾಂ ತೂಕದ ಕರಿಯಮಣಿ (ಪತ್ನಿ ಮಂಗಳೂರುನಲ್ಲಿ ಸರಿಪಡಿಸಲು ನೀಡಿದ್ದ), ಚಿನ್ನಾಭರಣ ಮತ್ತು ಜಾಗದ ದಾಖಲೆಪತ್ರಗಳಿದ್ದವು ಎನ್ನಲಾಗಿದೆ. ತಕ್ಷಣ ವಿಷಯವನ್ನು ಬಸ್ ಚಾಲಕ ಸೇಸಪ್ಪ ಅವರ ಗಮನಕ್ಕೆ ತಂದು ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸಿ ವಾಶಿ ಪೆÇೀಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ.

ಬಸ್ ವಿೂರಾರೋಡ್‍ಗೆ ತೆರಳುತ್ತಿದ್ದು ಬಸ್‍ನಲ್ಲಿದ್ದ ಇಬ್ಬರು ಪ್ರಯಾಣಿಕರು ವಿೂರಾರೋಡ್‍ನಲ್ಲಿ ಇಳಿಯುವವರಿದ್ದರೂ ಪನ್ವೇಲ್‍ನಲ್ಲೇ ಇಳಿದಿರುವ ಬಗ್ಗೆ ಬಸ್ ನಿರ್ವಹಕ ತಿಳಿಸಿದ ಮಾಹಿತಿ ಪ್ರಕಾರ ಪೆÇೀಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸದ್ಯ ಬಸ್‍ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಕಡ್ಡಾಯವಾಗಿದ್ದರೂ ಈ ಬಸ್‍ನಲ್ಲಿ ಮಾತ್ರ ಸಿಸಿ ಕ್ಯಾಮೆರಾ ಅಳವಡಿಸಿರಲಿಲ್ಲ ಎಂದೂ ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here