Wednesday 14th, May 2025
canara news

ಅ.05: ಆಲ್‍ಕಾರ್ಗೊ ಸಹಯೋಗದೊಂದಿಗೆ ಬಂಟವಾಳದ ಬಂಟರ ಸಂಘದಲ್ಲಿ

Published On : 02 Aug 2018   |  Reported By : Rons Bantwal


ಬೃಹತ್ ಶೈಕ್ಷಣಿಕ ವಿದ್ಯಾಥಿರ್sವೇತನ ವಿತರಣಾ ಕಾರ್ಯಕ್ರಮ

ಮುಂಬಯಿ,: ಬಂಟರ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿರುವ ಬಂಟರ ಸಂಘ ಬಂಟವಾಳ ತಾಲೂಕು (ರಿ.) ಇವರ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯು ಮುಂಬಯಿ ಅಲ್ಲಿನ ಪ್ರತಿಷ್ಠಿತ ಆಲ್‍ಕಾರ್ಗೊ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ಸಹಯೋಗದೊಂದಿಗೆ 2018ರ ವಾರ್ಷಿಕ ಬೃಹತ್ ವಿದ್ಯಾಥಿರ್sವೇತನ ವಿತರಣಾ ಕಾರ್ಯಕ್ರಮವನ್ನು ಇದೇ ಅ.05ನೇ ಭಾನುವಾರ ಪೂರ್ವಾಹ್ನ 10.30 ಗಂಟೆಗೆ ತುಂಬೆ ವಳವೂರು ಇಲ್ಲಿನ ಬೋಳಂತೂರುಗುತ್ತು ಗಂಗಾಧರ ರೈ ಕಾಂಪ್ಲೆಕ್ಸ್‍ನ ಬಂಟ್ವಾಳದ ಬಂಟರ ಭವನದ ಬೆಳ್ಳೂರು ಪರಾರಿ ಪಿ.ವಿ ಶೆಟ್ಟಿ ಸಭಾಗೃಹದ (ಆಲ್‍ಕಾರ್ಗೋ ಶಶಿಕಿರಣ್ ಶೆಟ್ಟಿ ಮಾತೃಶ್ರೀ) ಸುಶೀಲ ಜನಾರ್ದನ ಶೆಟ್ಟಿ ವೇದಿಕೆಯಲ್ಲಿ ಆಯೋಜಿಸಿದೆ.

      

Dr. Shantarama Shetty                      A Shashikiran Shetty              Nagrigutt Vivek Shetty.

ಮುಂಬಯಿನ ಕೈಗಾರಿಕೋದ್ಯಮಿ, ಹೆಸರಾಂತ ಸಮಾಜ ಸೇವಕ, ಬಂಟರ ಸಂಘ ಬಂಟವಾಳ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ| (ಡಾ|) ಎಂ.ಶಾಂತಾರಾಮ ಶೆಟ್ಟಿ ಮತ್ತು ಗೌರವ ಅತಿಥಿsಗಳಾಗಿ ಮೈಟ್ ಮೂಡಬಿದ್ರೆ ಅಧ್ಯಕ್ಷ ರಾಜೇಶ್ ಚೌಟ, ನವಿಮುಂಬಯಿನ ನಿವೃತ್ತ ಪೆÇಲೀಸ್ ಅಧಿಕಾರಿ ಮತ್ತು ಆಲ್‍ಕಾರ್ಗೊ ಸಂಸ್ಥೆಯ ಸಿಎಸ್‍ಆರ್ ಸಲಹೆಗಾರ ಕೆ.ಎಲ್ ಪ್ರಸಾದ್ ಹಾಗೂ ಸಿಎಸ್‍ಆರ್ ಮುಖ್ಯಸ್ಥ ಡಾ| ನೀಲ್‍ರತ್ನ ಆರ್.ಶಿಂಧೆ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರ್ರಹಾಸ ಡಿ.ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಜಗಧೀಶ್ ಶೆಟ್ಟಿ ಇರಾ, ಜೊತೆ ಕಾರ್ಯದರ್ಶಿ ನವೀನ್‍ಚಂದ್ರ ಶೆಟ್ಟಿ ಮುಂಡಜೆಗುತ್ತು, ಶೈಕ್ಷಣಿಕ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಹೆಚ್.ಸಂಕಪ್ಪ ಶೆಟ್ಟಿ ಬಿ.ಸಿ ರೋಡ್, ಮಹಿಳಾ ವಿಭಾಗಧ್ಯಕ್ಷೆ ಆಶಾ ಪಿ.ರೈ ಮತ್ತಿತರÀರು ಉಪಸ್ಥಿತರಿದ್ದು ಎಲ್ಲಾ ಸಮುದಾಯ, ಜಾತಿಗಳ ಸುಮಾರು ಒಂದುವರೆ ಸಾವಿರಕ್ಕೂ ಅಧಿಕ ವಿದ್ಯಾಥಿರ್üಗಳಿಗೆ ಸುಮಾರು 40 ಲಕ್ಷಕ್ಕೂ ಮೊತ್ತದ ಶೈಕ್ಷಣಿಕ ದೇಣಿಗೆ ಈ ಬಾರಿ ವಿತರಿಸಲಿದೆ ಎಂದು ನಗ್ರಿಗುತ್ತು ವಿವೇಕ್ ಶೆಟ್ಟಿ ತಿಳಿಸಿದ್ದಾರೆ.

ಬಂಟರ ಸಂಘ ಬಂಟವಾಳ:
2005ರಲ್ಲಿ ಸಂಘವು ರೂಪುಗೊಂಡಿದ್ದು ಪ್ರಥಮ ಅಧ್ಯಕ್ಷರಾಗಿ ಕಿರಣ್ ಹೆಗ್ಡೆ ಅನಂತಾಡಿ ಸಂಘದ ಚುಕ್ಕಾಣಿಯನ್ನೀ -ಡಿದರು. ನಂತರ ದ್ವಿತೀಯ ಅಧ್ಯಕ್ಷರಾಗಿ ಲೋಕನಾಥ ಶೆಟ್ಟಿ ಮತ್ತು ತೃತೀಯ ಅಧ್ಯಕ್ಷರಾಗಿ ಬೋಳಂತೂರುಗುತ್ತು ಗಂಗಾಧರ ರೈ ಸಂಘವನ್ನು ದಕ್ಷತೆಯಿಂದಲೇ ಮುನ್ನಡೆಸಿದರು. 2014ರಲ್ಲಿ ಮೂರು ವರ್ಷಗಳ ಕಾಲಾವಧಿಗೆ ಚತುರ್ಥ ಅಧ್ಯಕ್ಷರಾಗಿ ನಗ್ರಿಗುತ್ತು ವಿವೇಕ್ ಶೆಟ್ಟಿ ಆಯ್ಕೆಗೊಂಡು ಯಶಸ್ವಿಯಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾ ಭಾರೀ ಜನಮನ್ನಣೆಗೆ ಪಾತ್ರರಾದರು. ಅಂತೆಯೇ 2017-2020ರ ಅವಧಿಗೂ ಎರಡನೇ ಬಾರಿ ಒಕ್ಕೊರಳ ಮತ್ತು ಒಮ್ಮತದ ಬೇಡಿಕೆಯಲ್ಲಿ ವಿವೇಕ್ ಶೆಟ್ಟಿ ಅವರೇ ಅಧ್ಯಕ್ಷರಾಗಿ ಮುನ್ನಡೆಯುವಂತಾಯಿತು. ತನ್ನ ಸಾರಥ್ಯದಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಸಹಯೋಗದಿಂದ 2016ರಲ್ಲಿ ಕೇವಲ ಒಂದುವರೆ ವರ್ಷದ ಅಲ್ಪಾವಧಿಯಲ್ಲೇ ಅತ್ಯಾಧುನಿಕ ಮತ್ತು ಅತ್ಯಾಕರ್ಷಕ ಬಂಟ್ವಾಳದ ಬಂಟರ ಭವನ ನಿರ್ಮಿಸಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರ ಅಭಯಾಸ್ತದಿಂದ ಸೇವಾರ್ಪಣೆ ಮಾಡಿ ನಗ್ರಿಗುತ್ತು ಜನನಾಯಕರಾಗಿ ಪ್ರಶಂಸೆಗೆ ಪಾತ್ರರಾದರು.

ಅನನ್ಯ ಸಂಸ್ಕೃತಿ ಮತ್ತು ಶಿಕ್ಷಣಪ್ರೇಮಿ ಆಗಿರುವ ನಗ್ರಿಗುತ್ತು ಕಳೆದ ಎರಡು ವರ್ಷಗಳಿಂದ ಆಲ್‍ಕಾರ್ಗೊ ಸಂಸ್ಥೆಯ ಸಹಕಾರದಲ್ಲಿ ಕಳೆದ 2017ರ ಸಾಲಿನಲ್ಲಿ 30 ಲಕ್ಷ ರೂಪಾಯಿ ವಿದ್ಯಾಥಿರ್ü ವೇತನ ಹಾಗೂ ಸುಮಾರು 3 ಲಕ್ಷ ರೂಪಾಯಿ ಅಂಗವಿಕಲರಿಗೆ ಸಹಾಯಧನ ವಿತರಿಸಿ ತಮ್ಮ ಸೇವಾ ನಿಷ್ಠೆಯನ್ನು ಮೆರೆದಿದ್ದಾರೆ. ಕಳೆದ ವರ್ಷ ಅವರ ಹಸ್ತದಿಂದ ವೇತನ ವಿತರಿಸಿ ಈ ವಾರ್ಷಿಕ ಕಾರ್ಯಕ್ರಮಕ್ಕೆ ಇನ್ನಷ್ಟು ಪ್ರತಿಷ್ಠೆಯನ್ನು ತಂದೊದಗಿಸಿದ್ದಾರೆ. ಅಸಮಾನ್ಯ ಸಮಾಜ ಸೇವಕರೆಂದೇ ಗುರುತಿಸಿಕೊಂಡು ಕೊಡುಗೈದಾನಿ ಆಗಿರುವ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರ ಯಾವುದೇ ಕಾರ್ಯಕ್ರಮಗಳೂ ವಿಭಿನ್ನವೂ ಅರ್ಥಪೂರ್ಣ ಆಗಿರುತ್ತವೆ. ಸದಾ ಭೌಗೋಳಿಕವಾಗಿ ಚಿಂತಕರೆಣಿಸಿ ದೂರದೃಷ್ಠಿತವುಳ್ಳ ಸಾಮಾಜಿಕ ಕಳಕಳಿಯುಳ್ಳ ಅವರ ಯೋಚನೆಗಳು ಹಿರಿಯ ನಾಗರಿಕರಿಂದ ಯುವ ಪೀಳಿಗೆಯಲ್ಲೂ ಮನಾಕರ್ಷಣಾ ಮೋಡಿ ಮಾಡುವಂತಹದ್ದು. ಕಲಾತ್ಮಕ ಮನಸ್ಸುವುಳ್ಳವರಾಗಿದ್ದು ಆಧುನಿಕತೆಯಲ್ಲೂ ಪ್ರಾಚೀನತೆ ರೂಢಿಸಿ ಭವಿಷ್ಯತನ್ನು ರೂಪಿಸಬಲ್ಲ ಸಹೃದಯಿ. ಸರ್ವರಲ್ಲೂ ಸಮಾನತ್ವ ಕಾಯ್ದಿರಿಸಿ ಮುನ್ನಡೆಯುವ ಚಿಂತನಾಶೀಲರಾಗಿದ್ದು ಓರ್ವ ಅಪ್ಪಟ ಸಂಪ್ರದಯಸ್ಥರೇ ಸರಿ. ಆದುದರಿಂದಲೇ ನಗ್ರಿಗುತ್ತು ವಿವೇಕ್ ಶೆಟ್ಟಿ ಅಂದರೆ ವಿಭಿನ್ನತೆಗೆ ಒಂದು ಹೆಸರು ಎನ್ನುವುದು ವಾಸ್ತವ್ಯ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here