ಮುಂಬಯಿ, : ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಯುವ ವಿಭಾಗವು ಯುವ ವಿಭಾಗಧ್ಯಕ್ಷ ಚರಣ್ ಆರ್.ಶೆಟ್ಟಿ ಮುಂದಾಳುತ್ವದಲ್ಲಿ ಇದೇ ಬರುವ ಆ.15ರ ಬುಧವಾರ ಭಾರತ ರಾಷ್ಟ್ರದ 72ನೇ ಸ್ವಾತಂತ್ರ್ಯ ದಿಣಾಚರಣೆಯ ಶುಭಾವಸರದಲ್ಲಿ ನವಿಮುಂಬಯಿ ಜೂಯಿ ನಗರದ ಸೆಕ್ಟರ್-24ರಲ್ಲಿರುವ ಬಂಟ್ಸ್ ಸೆಂಟರ್‍ನ ಬೃಹತ್ ರಕ್ತದಾನ ಶಿಬಿರ ಆಯೋಜಿಸಿದೆ.
ಅಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆ ತನಕ ಅಪೆÇಲೋ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ. ನಾಡಿನ ಆಸಕ್ತ ಸರ್ವರಿಗೂ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ರಕ್ತದಾನ ಮಾಡಿ ಮತ್ತೊಬ್ಬರ ಜೀವವನ್ನು ಉಳಿಸಿ. ರಕ್ತದಾನದ ಮೂಲಕ ನಗುವನ್ನು ಬೀರಿದಾಗಲೇ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಪ್ರತೀಯೊಂದು ಕ್ಷಣಕ್ಕೂ ಅನೇಕರಿಗೆ ರಕ್ತದ ಅವಶ್ಯವಿರುತ್ತದೆ. ಅದಕ್ಕಾಗಿ ತಮ್ಮಮಹತ್ವದ ಕನಿಷ್ಟ ಹತ್ತು ನಿಮಿಷಗಳನ್ನು ಇಂತಹ ಪುಣ್ಯಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಕ್ತದಾನ ನಡೆಸಿ ಸಹಕರಿಸುವಂತೆ ಯುವ ವಿಭಾಗದ ಪದಾಧಿಕಾರಿಗಳು ತಿಳಿಸಿದ್ದಾರೆ.
ಅಧಿಕ ಮಾಹಿತಿಗಾಗಿ ಯುವ ವಿಭಾಗದ ಅಧ್ಯಕ್ಷ ಚರಣ್ ಆರ್.ಶೆಟ್ಟಿ (9819761711) ಮತ್ತು ಕೋಶಾಧಿಕಾರಿ ಧನಂಜಯ ಆರ್.ಶೆಟ್ಟಿ (9773273489) ಇವರನ್ನು ಸಂಪರ್ಕಿಸುವಂತೆ ಈ ಮೂಲಕ ಯುವ ವಿಭಾಗದ ಕಾರ್ಯದರ್ಶಿ ಸ್ಮೃತಿ ಶೆಟ್ಟಿ ವಿನಂತಿಸಿದ್ದಾರೆ.