Wednesday 14th, May 2025
canara news

ಬಂಟ್ಸ್ ಸೆಂಟರ್‍ನಲ್ಲಿ ಪೀಪಲ್'ಸ್ ಆರ್ಟ್ ಸೆಂಟರ್ ಮುಂಬಯಿ ಸಂಸ್ಥೆ

Published On : 11 Aug 2018   |  Reported By : Rons Bantwal


ಸಂಭ್ರಮಿಸಿದ ಸಂಗೀತಕಾರ ಕಿಶೋರ್ ಕುಮಾರ್ 89ನೇ ಜನ್ಮೋತ್ಸವ

ಮುಂಬಯಿ, ಆ.10: ದ ಪೀಪಲ್'ಸ್ ಆರ್ಟ್ ಸೆಂಟರ್ (ರಿ.) ಮುಂಬಯಿ ಸಂಸ್ಥೆಯು ಇತ್ತೀಚೆಗೆ ನವಿ ಮುಂಬಯಿ ಅಲ್ಲಿನ ಜು¬ೂ ನಗರದ ಬಂಟ್ಸ್ ಸೆಂಟರ್‍ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ವಿಶ್ವಕಂಡ ಅಪ್ರತಿಮ ಸಂಗೀತಕಾರ ಸ್ವರ್ಗೀಯ ಕಿಶೋರ್ ಕುಮಾರ್ ಅವರ 89ನೇ ಜನ್ಮೋತ್ಸವದ ಪ್ರಯುಕ್ತ `ಚಿರಂತನ ಕಿಶೋರ್ ಕುಮಾರ್' ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಫೆಡರೇಶನ್ ಆಫ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್‍ಸ್ ಮಹಾರಾಷ್ಟ್ರ ಇದರ ಉಪಾಧ್ಯಕ್ಷ, ಮಹಾರಾಷ್ಟ್ರ ರಾಜ್ಯ ಸರಕಾರದ ವಿಶೇಷ ಕಾರ್ಯನಿರ್ವಹಣಾ ಅಧಿಕಾರಿ (ಎಸ್‍ಸಿಒ) ವಿರಾರ್ ಶಂಕರ್ ಬಿ.ಶೆಟ್ಟಿ ಉಪಸ್ಥಿತರಿದ್ದು ಪ್ರಧಾನ ಅಭ್ಯಾಗತರಾಗಿದ್ದ ನವಿ ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತ ಐಎಎಸ್ ಅಧಿಕಾರಿ ಡಾ| ರಮಸಮಿ ಎನ್., ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಅಖಿಲ ಭಾರತ ಮರಾಠಿ ಚಿತ್ರಪದ್ ಮಹಾ ಮಂಡಲದ ಮಾಜಿ ಅಧ್ಯಕ್ಷ ವಿಜಯ್ ಕೋಂಡ್ಕೆ ಅತಿಥಿüಗಳಾಗಿದ್ದರು. ಪೀಪಲ್'ಸ್ ಆರ್ಟ್ ಸೆಂಟರ್ ಇದರ ಕಾರ್ಯದರ್ಶಿ ಗೋಪ್‍ಕುಮಾರ್ ಕೃಷ್ಣ ಪಿಳ್ಳೈ ಸ್ವಾಗತಿಸಿದರು. ಡಾ|. ಕೆ.ಸತೀಶನ್ ಪುರಸ್ಕೃತರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿ ಕಿಶೋರ್ ಕುಮಾರ್ ಜೀವನದ ಅಮರತ್ವ ಸಾರಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here