Wednesday 14th, May 2025
canara news

ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮ ಪೂರ್ಲಿಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಚತಾ ಅಂದೋಲನ

Published On : 11 Aug 2018   |  Reported By : Rons Bantwal


ಮುಂಬಯಿ (ಬಂಟ್ವಾಳ), ಆ.10:ಬಂಟ್ವಾಳ ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಟ್ಟರೆ ಆರೋಗ್ಯ ರಕ್ಷಣೆ ಪಡೆಯಲು ಸಾಧ್ಯ ಎಂದು ಮಾಜಿ.ಜಿ.ಪಂ.ಸದಸ್ಯ ಚೆನ್ನಪ್ಪ ಆರ್ .ಕೋಟ್ಯಾನ್ ಹೇಳಿದರು.

ಅವರು ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮ ಪೂರ್ಲಿಪಾಡಿ ಅಂಗನವಾಡಿ ಕೇಂದ್ರ ದಲ್ಲಿ , ಬಾಳ್ತಿಲ ಗ್ರಾ.ಪಂ. ಮಹಿಳಾ ಮತ್ತು ‌ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲವಿಕಾಸ ಸಮಿತಿ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಗುಂಪು ಇವರ ಸಹಯೋಗದೊಂದಿಗೆ ಸ್ವಚ್ಚತಾ ಅಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ರು.
ಸ್ವಚ್ಚತಾ ಕಾರ್ಯಗಳು ಮನಃಪೂರ್ವಕವಾಗಿ ಪ್ರತಿಯೊಬ್ಬರಲ್ಲಿ ಬಂದಾಗ ಪ್ರಧಾನಿ ನರೇಂದ್ರ ಮೋದಿ ಯವರ ಕನಸು ನನಸು ಅಗುತ್ತದೆ.

ಅರೋಗ್ಯ ಕಾಪಾಡಲು ಸ್ವಚ್ಚತಾ ಕಾರ್ಯಕ್ರಮಗಳು ಪ್ರತಿ ಗ್ರಾಮದಲ್ಲಿ ಅನುಷ್ಠಾನಕ್ಕೆ ಬರಬೇಕು‌ಎಂದರು.

ವೇದಿಕೆಯಲ್ಲಿ ಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ವಿಠಲ ನಾಯ್ಕ, ಮಾಜಿ ಗ್ರಾ.ಪಂ.ಅದ್ಯಕ್ಷ ಬಿ.ಕೆ.ಅಣ್ಣು ಪೂಜಾರಿ, ವಿಶ್ವ ಹಿಂದೂ ಪರಿಷತ್ ಅದ್ಯಕ್ಷ ಕೆ.ಕ್ರಷ್ಣಪ್ಪ, ಗ್ರಾ.ಪಂ.ಸದಸ್ಯ ರಾದ ಸುಂದರ ಸಾಲಿಯಾನ್, ಲೋಕನಾಥ ಏಳ್ತಿಮಾರ್, ಪ್ರಕಾಶ್ ಪೂಜಾತಿ ಕರ್ಮಾನ್, ಲೋಕಯ್ಯ, ಭಜರಂಗದಳ ಸಂಚಾಲಕ ನವೀನ್ ಮಾಪಲ, ಸುಜಿತ್ ಕುರ್ಮಾನ್,
ಪ್ರಮುಖರಾದ ಈಶ್ವರ ಪೂಜಾರಿ ಭಂಡಾರ ಮನೆ, ಸಂಜೀವ ಪೂಜಾರಿ, ಮೇಲ್ವಿಚಾರಕಿ ಶಾಲಿನಿ, ಆಶಾ ಕಾರ್ಯಕರ್ತೆ ಸುಜಾತ ಹಾಗೂ ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ಪೋಷಕರು, ಕಾರ್ಯಕರ್ತೆ ಮತ್ತು ಸಹಾಯಕಿ ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here