Monday 7th, July 2025
canara news

ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಶ್ರೀನಿವಾಸ ನಾಯಕ್ ಇಂದಾಜೆ ಗೆಲುವು

Published On : 11 Aug 2018   |  Reported By : Rons Bantwal


ಮುಂಬಯಿ, ಆ.10: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಇದರ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಶ್ರೀನಿವಾಸ ನಾಯಕ್ ಇಂದಾಜೆ ಚುನಾಯಿತರಾಗಿದ್ದಾರೆ. ಕಳೆದ ಭಾನುವಾರ ಮಂಗಳೂರು ಅಲ್ಲಿನ ವಾರ್ತಾ ಕಛೇರಿಯಲ್ಲಿ ನಡೆಸಲ್ಪಟ್ಟ ಚುನಾಚಣೆಯಲ್ಲಿ ಶ್ರೀನಿವಾಸ ನಾಯಕ್ ಇಂದಾಜೆ ಬಹುಮತಗಳಿಂದ ಚುನಾಯಿತ ಗೊಂಡರು.

2002 ರಿಂದ ಸಂಘದ ಸದಸ್ಯರಾಗಿದ್ದ ನಾಯಕ್ ಸಕ್ರೀಯರಾಗಿ ಸೇವಾ ನಿರತರಾಗಿದ್ದರು. 2005ರಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ, 2010 ರಿಂದ 2018ರ ಎರಡು ಅವಧಿಗೆ ಪ್ರದಾನ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿ ನಾಡಿನ ಜನಪ್ರಿಯ ಪತ್ರಕರ್ತರೆಣಿಸಿದ್ದರು. ಪ್ರೆಸ್ ಕ್ಲಬ್ ಆಫ್ ಮಂಗಳೂರು ಇದರ ಸದಸ್ಯರಾಗಿರುವ ಶ್ರೀನಿವಾಸ್ 2002 ರಿಂದ ಉದಯ ಟಿವಿ ಇದರ ಜಿಲ್ಲಾ ವರದಿಗಾರರಾಗಿ, ಸದ್ಯ ಫೆÇೀಕಸ್ ಟಿವಿ ಮತ್ತು ನ್ಯೂಸ್‍ಎಕ್ಸ್ ಕನ್ನಡ ಇದರ ಜಿಲ್ಲಾ ವರದಿಗಾರರಾಗಿ ಸೇವಾ ನಿರತರಾಗಿದ್ದಾರೆ.

ಶ್ರೀನಿವಾಸ ನಾಯಕ್ ಅವರು ಮೂಲತಃ ಪುತ್ತೂರು ಸನಿಹದ ಸುಳ್ಯಪದವು ನಿವಾಸಿ. ಕೃಷಿಕ ಸದಾನಂದ ನಾಯಕ್ (ಸದ್ಯ ದಿವಗಂತರು) ಹಾಗೂ ಚಂದ್ರಕಲಾ ನಾಯಕ್ ಅವರ 13 ಮಕ್ಕಳ ಪೈಕಿ 11ನೇಯವರು. ಬಾಲ ಸುಬ್ರಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಪಿ.ಯು.ಸಿ ವಿದ್ಯಾಭ್ಯಾಸ ಹಾಗೂ ಸೈಂಟ್ ಅಲೋಸಿಯಸ್ ಕಾಲೇಜು ಮಂಗಳೂರುನ ಇಲ್ಲಿ ಪತ್ರಿಕೋದ್ಯಮದಲ್ಲಿ ಪದವಿಧರರು.

ಕÀನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು 2012ರಲ್ಲಿ ಮುಂಬಯಿನಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕನ್ನಡ ಪತ್ರಿಕಾ ಸಂಘಟನೆಗಳ ಪ್ರತಿನಿಧಿಗಳ ಮಹಾಸಮ್ಮೇಳನದಲ್ಲಿ ವಿಚಾರಗೋಷ್ಠಿಯಲ್ಲಿ ಪಾಗ್ಲೊಂಡಿದ್ದು, ಹಾಗೂ ಪತ್ರಕರ್ತರ ಸಂಘ ಮಹಾರಾಷ್ಟ್ರವು ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಸಂಸ್ಥೆಗಳ ಸಹಯೋಗದೊಂದಿಗೆ 2015ರಲ್ಲಿ ಮುಂಬಯಿನಲ್ಲಿ ಹಮ್ಮಿಕೊಂಡಿದ್ದ ಮಹಾಸಂವಾದದಲ್ಲಿ ಭಾಗವಹಿಸಿದ್ದು ಅವರನ್ನು ಗೌರವಿಸಲಾಗಿತ್ತು. ಇಂಡಿಯನ್ ಜೇಸಿಸ್‍ನ ಜೂನಿಯರ್ ಚೇಂಬರ್ ಆಫ್ ಮಂಗಳೂರು ಘಟಕದದಿಂದ ಸರ್ವೋತ್ಕೃಷ್ಟ ಸಾಧಕ ಪ್ರಶಸ್ತಿ ಪಡೆದು ಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ನೆಲ್ಲಿಗುಡ್ಡೆ ಎಂಬಲ್ಲಿ ಸದ್ಯ ಹೈನುಗಾರಿಕೆ ಕೃಷಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here