Monday 7th, July 2025
canara news

ರಾಮರಾಜ ಕ್ಷತ್ರೀಯ ಸಂಘ ಮುಂಬಯಿ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ

Published On : 12 Aug 2018   |  Reported By : Rons Bantwal


ಮಾತೃಸಮಾಜದ ಸನ್ಮಾನ ಸರ್ವಶ್ರೇಷ್ಠವಾದದು : ದೇವರಾಯ ಶೇರುಗಾರ್

ಮುಂಬಯಿ, ಅ.12: ರಾಮರಾಜ ಕ್ಷತ್ರೀಯ ಸಂಘ ಮುಂಬಯಿ (ರಿ.) ಕಳೆದ ಆದಿತ್ಯವಾರ ಆಗಸ್ಟ್ 05 ರಂದು ಅಂಧೇರಿ ಪೂರ್ವದ ಸಾಕಿನಾಕ ಅಲ್ಲಿನ ಕೆಪರ್ಸ್ ಸಭಾಗೃಹದಲ್ಲಿ ಸನ್ಮಾನ ಸಮಾರಂಭವು ಆಯೋಜಿಸಿತ್ತು. ಸಂಘದ ಅಧ್ಯಕ್ಷ ಬಿ.ಗಣಪತಿ ಶೇರೆಗಾರ್ ಅಧ್ಯಕ್ಷತೆಯಲ್ಲಿ ನೇರವೇರಿದ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ದೇವರಾಯ ಎಂ.ಶೇರುಗಾರ್, ಸಂಘದ ಗೌರವಾಧ್ಯಕ್ಷ ಮಲ್ಲಯ್ಯ ಆರ್.ಶೇರೆಗಾರ್, ಬಿ.ವಿ ಶೇರೆಗಾರ್, ಉಪಾಧ್ಯಕ್ಷ ಶಂಕರ ಮದ್ದೋಡಿ, ಕೋಶಾಧಿಕಾರಿ ಪ್ರಕಾಶ್ ಎಂ.ಶೇರೆಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕುಂಭಾಶಿಯಲ್ಲಿ ನೂತನ ನಿರ್ಮಿಸಿದ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ರಚಿಸಿ ಲೋಕಾರ್ಪಣೆ ಮಾಡಿದ ಸಮಾಜ ಸೇವಕ, ಧಾರ್ಮಿಕ ಮುಂದಾಳು ದೇವರಾಯ ಎಂ.ಶೇರುಗಾರ್ ಮತ್ತು ಅನಿತಾ ದೇವರಾಯ ದಂಪತಿ ಹಾಗೂ ಪರಿವಾರದ ವೃಷಭ ಡಿ.ಶೇರುಗಾರ್, ಮಿಥುನ್ ಡಿ.ಶೇರುಗಾರ್ ಅವರನ್ನು ಅಧ್ಯಕ್ಷ ಗಣಪತಿ ಶೇರೆಗಾರ್ ಶಾಲು ಹೊದಿಸಿ ಪೇಟಾ ತೊಡಿಸಿ ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿದರು.

ದೇವರಾಯ ಶೇರುಗಾರ್ ಸನ್ಮಾನಕ್ಕೆ ಉತ್ತರಿಸಿ ತನ್ನದೇ ಸಮಾಜದವರಿಂದ ಸನ್ಮಾನ ದೊರಕುವುದು ಅತೀವ ಸಂತೋಷ ತಂದಿದೆ. ನನ್ನ ಎಲ್ಲಾ ಕೆಲಸ ಕಾರ್ಯಗಳಲ್ಲಿ ತಂದೆ ತಾಯಿ ಆಶೀರ್ವಾದ, ಪತ್ನಿ ಮತ್ತು ಮಕ್ಕಳಿಂದ ಸಿಕ್ಕಿದ ಬೆಂಬಲವೇ ಕಾರಣ. ನನ್ನನ್ನು ಈ ವೇದಿಕೆಯಲ್ಲಿ ಸನ್ಮಾನಿಸಿದ ತಮಗೆಲ್ಲರಿಗೂ ಅಭಾರಿಯಾಗಿರುವೆ ಎಂದರು.

ಸಮಾರಂಭದಲ್ಲಿ ಪ್ರಭಾಕರ ನಾಯ್ಕ, ವಿಪುಲ ನಾಯ್ಕ, ಕೆ.ವಿ ಹೆಗಡೆ, ನಾರಾಯಣ ಕೋಡಿ, ಸುಬ್ರಾಯ ಶೇರುಗಾರ ಉಪಸ್ಥಿತರಿದ್ದು ಶುಭಕೋರಿದರು. ಸಂಘದ ಕಾರ್ಯದರ್ಶಿ ದಯಾನಂದ ಬಿ.ಸನ್ಮಾನಿತರನ್ನು ಪರಿಚರಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ರಸಮಂಜರಿ ಕಾರ್ಯಕ್ರಮ ನೇರವೇರಿಸಲ್ಪಟ್ಟಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here