Monday 7th, July 2025
canara news

ವಾಹನ ಅಪಘಾತ: ಜಯ ಟಿ.ಗುಳಿಬೆಟ್ಟು ಮೃತ್ಯುವಶ

Published On : 12 Aug 2018   |  Reported By : Rons Bantwal


ಕೆಮ್ಮಣ್ಣು, ಆ.12: ಕೆಮ್ಮಣ್ಣು ಪಡುತೋನ್ಸೆ ಗ್ರಾಮದ ನಿವಾಸಿ ಆಗಿದ್ದು ಹಲವಾರು ವರ್ಷಗಳಿಂದ ಸ್ಥಳೀಯ ಅಂಚೆ ಗುಮಾಸ್ತನಾಗಿ ಸೇವೆ ಸಲ್ಲಿಸುತ್ತಿದ್ದ ಜಯ ಟಿ.ಗುಳಿಬೆಟ್ಟು ವಾಹನ ಅಪಘಾತಕ್ಕೊಳಪಟ್ಟು ಇಂದಿಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ನಿಧನರಾದರು.

ಓರ್ವ ಕೃಷಿಕನಾಗಿದ್ದು, ಉತ್ತಮ ಸಮಾಜ ಸೇವಕನಾಗಿದ್ದು ಎಲ್ಲಾ ಸಮಾಜದವರ ಕಣ್ಮಣಿ ಆಗಿದ್ದ ಎಲ್ಲರೊಂದಿಗೆ ಬೆರೆತು ಬಾಳುತ್ತಿದ್ದ ಮೃತರು ಕಳೆದ ಶುಕ್ರವಾರ ಅಪಘಾತದಿಂದ ಆಸ್ಪತ್ರೆ ಸೇರಿದ್ದರು. ತೀವ್ರ ರಕ್ತ ಸ್ರಾವದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಜಯ ಅವರು ಶ್ರೀ ಬ್ರಹ್ಮ ಬೈದರ್ಕಳ ಪಂಚದೂಮಾವತೀ ಗರೋಡಿ ತೋನ್ಸೆ ಮುಂಬಯಿ ಸಮಿತಿ ಸದಸ್ಯ ನವೀನ್ ಗುಳಿಬೆಟ್ಟು ಅವರ ಹಿರಿಯ ಸಹೋದರ.

ಮೃತರು ಪತ್ನಿ ಇಬ್ಬರು ಹೆಣ್ಣು ಮಕ್ಕಳು, ಸಹೋದರ ಸಹೋದರಿಯರು ಬಂಧು ಬಳಗವÀನ್ನು ಅಗಲಿದ್ದಾರೆ. ಅಂತಿಮ ಸಂಸ್ಕಾರ ಇಂದಿಲ್ಲಿ ಮಧ್ಯಾಹ್ನ ಮೃತರ ಸ್ವಗೃಹದಲ್ಲಿ ನೆರವೇರಿಸಲಾಯಿತು. ಅಗಲಿದ ಜಯ ಟಿ.ಗುಳಿಬೆಟ್ಟು ಅವÀರ ದಿವ್ಯಾತ್ಮಕ್ಕೆ ಚಿರಶಾಂತಿ ಕರುಣಿಸಲಿ ಮತ್ತು ಮೃತರ ಕುಟುಂಬಕ್ಕೆ ದುಃಖ ವನ್ನು ಸಹಿಸುವ ಶಕ್ತಿ ನೀಡಲಿ ಎಂದು ಶ್ರೀ ಬ್ರಹ್ಮ ಬೈದರ್ಕಳ ಪಂಚದೂಮಾವತೀ ಗರೋಡಿ ತೋನ್ಸೆ ಮುಂಬಯಿ ಸಮಿತಿ ಅದ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಾಥಿರ್üಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here