Saturday 20th, April 2024
canara news

ಹತ್ತನೇ ತರಗತಿ ವಿದ್ಯಾಥಿರ್üಗಳಿಗೆ ಮಾನವ ಸಂಪನ್ಮೂಲ ಸಬಲೀಕರಣ ತರಬೇತಿ ಶಿಬಿರ

Published On : 14 Aug 2018   |  Reported By : Rons Bantwal


ಮಾನವಅಂತರ್ಗತ ಪ್ರತಿಭೆಗಳು ಶ್ರೇಷ್ಠ ಸಂಪತ್ತು - ಪೆÇ| ಶ್ರೀರಾಮ್ ಮರಾಠೆ

ಮುಂಬಯಿ (ಶಿರ್ವ), ಆ.14: ಮಾನವ ಸಾಮಾನ್ಯಜೀವಿಯಲ್ಲ. ಇತರರನ್ನುಅರಿಯುವ ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ಜೀವನದ ಪ್ರತಿಯೊಂದುಕ್ಷಣದ ಘಟನೆಗಳು ನಮ್ಮಅನುಭವವನ್ನು ವೃದ್ಧಿಸುತ್ತವೆ. ಧನಾತ್ಮಕ ಅನುಭವಗಳು ನಮ್ಮ ವ್ಯಕ್ತಿತ್ವಕ್ಕೆ ಹೊಳಪನ್ನು ನೀಡುತ್ತವೆ. ವಿದ್ಯಾರ್ಥಿದೆಸೆಯಲ್ಲಿಯೇ ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಅಂತರ್ಗತ ಪ್ರತಿಭೆಗಳಿಗೆ ಚಾಲನೆ ಸಿಗುತ್ತದೆ. ಮಾನವಅಂತರ್ಗತ ಪ್ರತಿಭೆಗಳು ಶ್ರೇಷ್ಠ ಸಂಪತ್ತುಎಂದು ನಿಟ್ಟೆತಾಂತ್ರಿಕ ಮಹಾ ವಿದ್ಯಾಲಯದಉಪನ್ಯಾಸಕ ಹಾಗೂ ಮಾನವ ಸಂಪನ್ಮೂಲ ಸಬಲೀಕರಣದ ಮಾಸ್ಟರ್‍ಟ್ರೈನರ್ ಪೆÇ್ರ| ಶ್ರೀರಾಮ್ ಮರಾಠೆ ನುಡಿದರು.

ಕಳೆದ ಶನಿವಾರ ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಶಾಲಾ ಹತ್ತನೇ ತರಗತಿ ವಿದ್ಯಾಥಿರ್üಗಳಿಗೆ ಶಿರ್ವ ರೋಟರಿ ಕ್ಲಬ್ ಹಾಗೂ ಶಾಲಾ ಇಂಟರ್ಯಾಕ್ಟ್‍ಕ್ಲಬ್ ವತಿಯಿಂದ ಏರ್ಪಡಿಸಿದ ಮೂರು ದಿನಗಳ "ಮಾನವ ಸಂಪನ್ಮೂಲ ಸಬಲೀಕರಣ ತರಬೇತಿ" ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾಥಿರ್üಗಳಿಗೆ ಪ್ರಶಸ್ತಿಪತ್ರ ವಿತರಿಸಿ ಶ್ರೀರಾಮ್ ಮರಾಠೆ ಮಾತನಾಡಿ ಜೀವನದಲ್ಲಿಒಂದುಗುರಿ, ಶಿಸ್ತು, ಸತತ ಪರಿಶ್ರಮ,ಸಾಧನಾಶೀಲ ವ್ಯಕ್ತಿತ್ವ ಬೆಳೆಸಿಕೊಂಡಾಗ ಸಾಮಾನ್ಯ ಮಾನವ ವಿಶ್ವಮಾನವ ಆಗುತ್ತಾನೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಮಾಸ್ಟರ್‍ಟ್ರೈನರ್ ಶ್ರೀರಾಮ್ ಮರಾಠೆ ಅವರನ್ನು ಸನ್ಮಾನಿಸಲಾಯಿತು. ಶಿಬಿರಾಥಿರ್üಗಳ ಪರವಾಗಿ ನೇಹಾ, ರೂಪೇಶ್ ಮಾತನಾಡಿದರು. ಶಿಬಿರದ ಶಾಲಾ ಉಸ್ತುವಾರಿ ಶಿಕ್ಷಕ ಲಕ್ಷ್ಮೀಶ ವಿ.ಆರ್ ಅವರನ್ನು ಅಬಿನಂದಿಸಲಾಯಿತು.

ಇಂಟರ್ಯಾಕ್ಟ್ ಅಧ್ಯಕ್ಷೆ ಪೃಥ್ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿರ್ವ ರೋಟರಿಅಧ್ಯಕ್ಷದೆಂದೂರುದಯಾನಂದ ಶೆಟ್ಟಿ, ರೋಟರಿಅಂತಾರಾಷ್ಠ್ರೀಯಜಿಲ್ಲೆ 3182 ಇದರ ಸಾಕ್ಷರತಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಭಾಗವಹಿಸಿ ಶುಭಕೋರಿದರು.

ಶಾಲಾ ಮುಖ್ಯ ಶಿಕ್ಷಕ ಜಿನರಾಜ್ ಸಿ.ಸಾಲಿಯಾನ್ ಮಾತನಾಡಿ, ಇಂತಹ ಉತ್ತಮ ತರಬೇತಿ ನೀಡಿ, ವಿದ್ಯಾಥಿರ್üಗಳಲ್ಲಿ ಸ್ಫೂರ್ತಿತುಂಬಿದ ಸಂಪನ್ಮೂಲ ವ್ಯಕ್ತಿಗಳಾದ ನಿಟ್ಟೆತಾಂತ್ರಿಕ ಮಹಾ ವಿದ್ಯಾಲಯದ ಶ್ರೀರಾಮ್ ಮರಾಠೆ, ಪೆÇ್ರ| ಸುಬ್ರಹ್ಮಣ್ಯ ಭಟ್ ಹಾಗೂ ಉಚಿತವಾಗಿ ವ್ಯವಸ್ಥೆ ಮಾಡಿದ ಶಿರ್ವ ರೋಟರಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಶಾಲಾ ವಿದ್ಯಾಥಿರ್ü ನಾಯಕ ಸಂದೀಪ್, ಇಂಟರ್ಯಾಕ್ಟ್ ಕಾರ್ಯದರ್ಶಿ ಮರೀಷಾ, ಇಂಟರ್ಯಾಕ್ಟ್ ಶಿಕ್ಷಕ ಸಂಯೋಜಕಿ ವೀಣಾ ಆಚಾರ್ಯ ಉಪಸ್ಥಿತರಿದ್ದರು. ಶಿಕ್ಷಕಿ ಹೇಮಾ ಬಿ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಬಿ.ಸುಕನ್ಯಾ, ಎಸ್.ರಂಜನಿ, ಕೆ.ಅಶ್ವಿನಿ ಸಹಕರಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here