Wednesday 14th, May 2025
canara news

ಬಿಎಸ್‍ಕೆಬಿ ಅಸೋಸಿಯೇಶನ್ ಗೋಕುಲ ಆಶ್ರಯದಲ್ಲಿ ಸ್ವಾತಂತ್ರ ್ಯ ದಿನಾಚರಣೆ

Published On : 15 Aug 2018   |  Reported By : Rons Bantwal


ಗೋಕುಲದ ಪ್ರೇಮಾ ಎಸ್.ರಾವ್‍ಗೆ `ಗೋಕುಲ ಕಲಾಶ್ರೀ' ಪ್ರಶಸ್ತಿ ಪ್ರದಾನ

ಮುಂಬಯಿ, ಆ.14: ಬಿಎಸ್‍ಕೆಬಿ ಅಸೋಸಿಯೇಶನ್ ಗೋಕುಲವು, ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದಿನಾಂಕ 15.8.2018ರ ಬುಧವಾರ ನೇರೂಲ್ ನಲ್ಲಿರುವ ಹಿರಿಯ ನಾಗರಿಕರ ಆಶ್ರಯಧಾಮ 'ಆಶ್ರಯ' ದಲ್ಲಿ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಸಂಭ್ರಮಿಸಲಿದೆ.

ಆ ನಿಮಿತ್ತ ಮಧ್ಯಾಹ್ನ 12 ಗಂಟೆಗೆ ಹಿರಿಯ ನಾಗರಿಕರಿಗೆ ಸಹಾಯವಾಗುವಂತಹ ಅವಶ್ಯಕ ವೈದ್ಯಕೀಯ ಸಲಕರಣೆಗಳನ್ನು ಅಲ್ಪ ಬಾಡಿಗೆ ದರದಲ್ಲಿ ಒದಗಿಸುವ ಸೇವೆ `ಆಶ್ರಯ ಸಂಜೀವನಿ-ಸೀನಿಯರ್ ಕೇರ್ ಸೆಂಟರ್'ನ್ನು ಸಂಘದ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರುಗಳ ಸಮ್ಮುಖದಲ್ಲಿ, ಮುಖ್ಯ ಅತಿಥಿüಯಾಗಿ ಆಗಮಿಸಲಿರುವ ಅಪೆÇೀಲೋ ಹಾಸ್ಪಿಟಲ್ಸ್, ನವಿಮುಂಬಯಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಡಾ| ನರೇಂದ್ರ ತ್ರಿವೇದಿ ಉದ್ಘಾಟಿಸಲಿದ್ದಾರೆ.

ಅಪರಾಹ್ನ ಡಾ| ಸುರೇಶ್ ಎಸ್. ರಾವ್ ಅಧ್ಯಕ್ಷತೆಯಲ್ಲಿ ಜರಗಲಿರುವ ಸಭಾ ಕಾರ್ಯಕ್ರಮದಲ್ಲಿ, ಬೈಲೂರು ಬಾಲಚಂದ್ರ ರಾವ್ ಅವರು ತಮ್ಮ ಮಾತಾಪಿತರ ಹೆಸರಿನಲ್ಲಿ ಸ್ಥಾಪಿಸಿದ `ಗೋಕುಲ ಕಲಾಶ್ರೀ' ಪ್ರಶಸ್ತಿಯನ್ನು ಗೋಕುಲದ ಕಾರ್ಯಕರ್ತೆ ಪ್ರೇಮಾ ಎಸ್.ರಾವ್ ಅÀವರಿಗೆ ಪ್ರದಾನಿಸುವರು. ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತ ವಿದ್ಯಾಥಿರ್üಗಳನ್ನು ಪುರಸ್ಕರಿಸಲಿರುವರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ `ಸಾಮಾ ಗ್ರೂಪ್' ಇವರಿಂದ ಸಂಗೀತ ರಸಮಂಜರಿ, ಪ್ರಶಾಂತ್ ಹೆರ್ಲೆ ಹಾಗೂ ವಿದುಷಿ ಸಹನಾ ಭಾರದ್ವಾಜ್ ನಿರ್ದೇಶನದಲ್ಲಿ ಸಂಘದ ಸದಸ್ಯರಿಂದ `ಕೃಷ್ಣ ಕೃಷ್ಣ, ಕೃಷ್ಣ' ಪೌರಾಣಿಕ ಸಂಗೀತ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪತ್ರಿಕಾ ಪ್ರಕಟಣೆ ತಿಳಿಸಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here