Thursday 25th, April 2024
canara news

ವಿವಿ ಸಂಧ್ಯಾ ಕಾಲೇಜಿನಲ್ಲಿ ಆಂಗ್ಲಭಾಷಾ ಸ್ನಾತಕೋತ್ತರ ಪದವಿ ಕೋರ್ಸ್ ಉದ್ಘಾಟನೆ

Published On : 15 Aug 2018   |  Reported By : Rons Bantwal


ಮುಂಬಯಿ, ಆ.15: ವಿಶ್ವ ವಿದ್ಯಾನಿಲಯ ಸಂದ್ಯಾ ಕಾಲೇಜು ಮಂಗಳೂರು ಇಲ್ಲಿ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಆರಂಭಗೊಂಡ ಆಂಗ್ಲಭಾಷಾ ಸ್ನಾತಕೋತ್ತರ ಪದವಿ ಕೋರ್ಸನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಕಲಾ ನಿಕಾಯದ ಮುಖ್ಯಸ್ಥರಾದ ಪೆÇ್ರ| ಕೆ.ಕಿಶೋರಿ ನಾಯಕ್ ಅವರು ಕಾಲೇಜು ಆವರಣದಲ್ಲಿರುವ ಶಿವರಾಮ ಕಾರಂತ ಭವನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಉದ್ಘಾಟನೆಯ ಬಳಿಕ ವಿದ್ಯಾಥಿರ್üಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಆಂಗ್ಲ ಭಾಷಾ ಸ್ನಾತಕೋತ್ತರ ಪದವಿ ಆರಂಭಗೊಂಡಿರುವುದು ಅನಿವಾರ್ಯ ಕಾರಣಗಳಿಂದ ಸ್ನಾತಕೋತ್ತರ ಪದವಿಯಿಂದ ವಂಚಿತರಾದವರು ಹಾಗೂ ಹಗಲು ದುಡಿದು ಸ್ನಾತಕೋತ್ತರ ಪದವಿ ಗಳಿಸಿಕೊಳ್ಳುವ ಕನಸು ಹೊಂದಿರುವವರಿಗೆ ಸಹಕಾರಿ ಆಗಲಿದೆ ಹಾಗೂ ಆಂಗ್ಲಭಾಷೆಯನ್ನು ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದವರಿಗೆ ಇತರೆ ಭಾಷೆಗಳ ಅಧ್ಯಯನ ಮಾಡಿದವರಿಗಿಂತ ಹೆಚ್ಚು ಉದ್ಯೋಗದ ಅವಕಾಶಗಳು ಒದಗಿ ಬರುತ್ತವೆ ಎಂದು ಆಭಿಪ್ರಾಯಪಟ್ಟರು. ಅದೇ ರೀತಿ ಆಂಗ್ಲಭಾಷಾ ಸ್ನಾತಕೋತ್ತರ ಪದವೀಧರರಿಗೆ ಉಪನ್ಯಾಸಕ ವೃತ್ತಿಯ ಹೊರತಾಗಿ ಇರುವ ಇನ್ನಿತರ ವೃತ್ತಿ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿüಯಾಗಿದ್ದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಉದಯ ಕುಮಾರ್ ಎಂ.ಎ ಅವರು ಸಂಧ್ಯಾ ಕಾಲೇಜಿನಲ್ಲಿ ಸ್ನಾತಕೋತ್ತರ ಆಂಗ್ಲಭಾಷಾ ವಿಭಾಗ ಆರಂಭಗೊಂಡಿರುವುದು ಉತ್ತಮ ಬೆಳವಣಿಗೆ ಹಾಗೂ ವಿಭಾಗದ ಬೆಳವಣಿಗೆಗೆ ವಿಶ್ವವಿದ್ಯಾನಿಲಯ ಕಾಲೇಜು ಸರ್ವರೀತಿಯಲ್ಲಿಯೂ ಸಹಕರಿಸಲಿದ್ದು, ವಿಭಾಗವು ಉತ್ತಮ ಅಭಿವೃದ್ಧಿಯನ್ನು ಹೊಂದಲಿ ಎಂದು ಶುಭ ಹಾರೈಸಿದರು.

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ರಾಮಕೃಷ್ಣ ಬಿ.ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಂಗ್ಲಬಾಷಾ ಸ್ನಾತಕೋತ್ತರ ಪದವೀಧರರಿಗೆ ಉತ್ತಮ ಬೇಡಿಕೆ ಇದ್ದು, ಅರ್ಹ ಪದವೀಧರರ ಕೊರತೆ ಇದೆ, ಆದುದರಿಂದ ತಮಗೆ ಒದಗಿ ಬಂದಿರುವ ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ವಿದ್ಯಾಥಿರ್üಗಳಿಗೆ ಕಿವಿಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಆಂಗ್ಲಬಾಷಾ ವಿಭಾಗದ ಸಂಯೋಜಕರಾದ ಪೆÇ್ರ| ಶ್ಯಾಮ್ ಭಟ್, ವಿಶ್ವ ವಿದ್ಯಾನಿಲಯ ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥರಾದ ಡಾ| ಅಮ್ಮಾಳು ಕುಟ್ಟಿ, ಡಾ| ರಾಜಲಕ್ಷ್ಮಿ ಎನ್.ಕೆ. ಹಾಗೂ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಎಲ್ಲಾ ಸ್ನಾತಕೋತ್ತರ ವಿಭಾಗಗಳ ಸಂಯೋಜಕರು, ಉಪನ್ಯಾಸಕರು ಉಪಸ್ಥಿತರಿದ್ದರು. ಸ್ನಾತಕೋತ್ತರ ಆಂಗ್ಲಭಾಷಾ ವಿಭಾಗದ ಉಪನ್ಯಾಸಕಿ ಕುಮಾರಿ ಹಂಸಿತ ಕುಂಬ್ಳೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here