Wednesday 14th, May 2025
canara news

ಕುವೈತ್ ಕೆಸಿಎಫ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Published On : 16 Aug 2018   |  Reported By : canaranews network


ಉದ್ಯೋಗವನ್ನು ಅರಸಿ ಕೊಲ್ಲಿ ರಾಷ್ಟ್ರಗಳಲ್ಲಿ ಜೀವಿಸಬೇಕಾದ ಸನ್ನಿವೇಶದಲ್ಲಿ ಕುವೈತ್ ನಲ್ಲಿ ಕೆಸಿಎಫ್ ಆಯೋಜಿಸಿದ "ಭಾರತ ಭಾರತೀರದ್ದಾಗಿರಲಿ" ಎಂಬ ಘೋಷ ವಾಕ್ಯದೊಂದಿಗೆ "ಪ್ರಜಾ ಸಂಗಮ" ಎಂಬ ಕಾರ್ಯಕ್ರಮವು ಮರುಭೂಮಿಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ರಾಷ್ಟ್ರ ಪ್ರೇಮದ ಕಾಳಜಿಯನ್ನು ಇನ್ನಷ್ಟು ಹೆಚ್ಚಿಸಿದೆ.

ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಫಾಹಿಲ್ ನಲ್ಲಿರುವ ಕೆಸಿಎಫ್ ಕೇಂದ್ರ ಕಛೇರಿಯಲ್ಲಿ ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರು,ಕೆಸಿಎಫ್ ಅಂತರರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ,ಕೊಡಗಿನ ಕಣ್ಮಣಿ ಬಹುಮಾನ್ಯ ಕೌಸರ್ ಸಖಾಫಿಯವರ ದುವಾದೊಂದಿಗೆ ಆರಂಭವಾಯಿತು.

ಕೇಂದ್ರ ಕಾರ್ಯದರ್ಶಿ ತೌಫೀಕ್ ಅಡ್ಡೂರ್ ಎಲ್ಲರನ್ನೂ ಸ್ವಾಗತಿಸಿ ಕೆಸಿಎಫ್ ಕುವೈತ್ ನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದು ಕುವೈತ್ ನ ಅನಿವಾಸಿಗರಿಗೆ ಸಂತೋಷದ ಕ್ಷಣವಾಗಿದೆ ಎಂದರು.

ಅಧ್ಯಕ್ಷ ಭಾಷಣದಲ್ಲಿ ಹೋರಾಟ ,ತ್ಯಾಗದಿಂದ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ವನ್ನು ಗಳಿಸಿತು ನಮಗೆ ಭಾರತದಲ್ಲಿ ಇದ್ದಂತೆ ಸ್ವಾತಂತ್ರ್ಯ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ ಎಂದು ರಾಷ್ಟ್ರ ಪ್ರೇಮದ ಬಗ್ಗೆ ತಿಳಿಸಿ ದರು.

ಮುಖ್ಯ ಅತಿಥಿಗಳಾಗಿ ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ಚೆಯರ್ಮ್ಯಾನ್ ಉಮರುಲ್ ಪಾರೂಕ್ ಸಖಾಫಿ ಮಾತನಾಡಿ ನಮಗೆ ಎಲ್ಲಾ ಸೌಕರ್ಯ ಇರುವಾಗಲು ಬಡವ ಬಡವನಾಗಿ, ಶ್ರೀಮಂತ ಶ್ರೀಮಂತನಾಗಿ ಬದುಕು ಸಾಗಿಸುವ ನಾವು ಒಗ್ಗಟ್ಟು ಬಿಟ್ಟು ಬದುಕುತಿದ್ದೇವೆ ಎಂದರರು. ನಾವು ನಮ್ಮ ರಾಷ್ಟ್ರದ ಬಗ್ಗೆ ಪ್ರೀತಿಯನ್ನು ತೊರಿಸಬೇಕಾಗಿದೆ

ಹುಬ್ಬುಲ್ ವತನ್ ಮಿನಲ್ ಈಮಾನ್(ಸ್ವರಾಜ್ಯ ಪ್ರೇಮವು ಈಮಾನಿನ ಭಾಗವಾಗಿದೆ) ಎಂಬ ಪ್ರವಾದಿ ವಚನದ ಮೂಲಕ ನಾಡಿನ ಸಮಸ್ತ ಜನರಿಗೂ ಸ್ವತಂತ್ರ ಭಾರತದ 72 ನೇ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದರು.

ಕೆಸಿಎಫ್ ಅಂತರರಾಷ್ಟ್ರೀಯ ಆಡಳಿತ ಹಾಗೂ ಸಾರ್ವಜನಿಕ ಸಂಪರ್ಕ ವಿಭಾಗದ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರು ಸರ್ವ ಜನಾಂಗದ ಶಾಂತಿಯ ತೋಟವಾಗಿ ಭಾರತ ಇನ್ನಷ್ಟು ಪ್ರಕಾಶಿಸಲಿ, ಪ್ರಜ್ವಲಿಸಲಿ ನಮ್ಮೊಳಗಿನ ಭಾರತ ಜಾಗೃತಗೊಲ್ಲಲಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಈ ಸಂದರ್ಭದಲ್ಲಿ ತಿಳಿಸಿದರು. ಕುವೈತ್ ನಲ್ಲಿ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಕ್ಕಿರುವುದು ಭಾಗ್ಯ ಎಂದು ಹೇಳಿದರು. ಕೊನೆಯದಾಗಿ ಕೆಸಿಎಫ್ ರಾಷ್ಟ್ರೀಯ ಕೋಶಾಧಿಕಾರಿ ಮೂಸ ಇಬ್ರಾಹಿಮ್ ಧನ್ಯವಾದಗೈದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here