Thursday 25th, April 2024
canara news

ಬಿಲ್ಲವರ ಅಸೋಸಿಯೇಶನ್ , ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿ 72ನೇ ಸ್ವಾತಂತ್ರ್ಯ ದಿನಾಚರಣೆ

Published On : 17 Aug 2018   |  Reported By : Rons Bantwal


ಬಿಲ್ಲವರ ಅಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದೇಶದ 72ನೇ ಸ್ವಾತಂತ್ರ್ಯ ಹಾಗೂ ಡೊಂಬಿವಲಿ ಸ್ಥಳೀಯ ಕಚೇರಿಯ 30ನೇ ವಾರ್ಷಿಕ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಯುವ ವಿಭಾಗದ ಸದಸ್ಯರು ಸಭಾಗ್ರಹವನ್ನು ವಿವಿಧ ರೀತಿಯಲ್ಲಿ ಅಚ್ಚುಕಟ್ಟಾಗಿ ಅಲಂಕರಿಸಿದ್ದರು.

ಪ್ರಾರಂಬದಲ್ಲಿ ಪುರೋಹಿತ ವಿಶ್ವನಾಥ್ ಆಮೀನ್ ಗುರು ಪೂಜೆ ಮಾಡಿ ಪ್ರಾರ್ಥನೆ ಮಾಡಿದರು. ಸಭಾಗ್ರಹದಲ್ಲಿ ನೆರೆದಿದ್ದ ಗಣ್ಯರು, ಮಹಿಳೆಯರು , ಯುವಬ್ಯೂದಯ ಸಮಿತಿ ಸದಸ್ಯರು, ಮಕ್ಕಳು ದೇಶದ ಪ್ರಗತಿಗಾಗಿ ಗುರು ಸನ್ನಿಧಿಯಲ್ಲಿ ಪ್ರಾರ್ಥಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮಾನ್ ಯು. ಬಾಬು ಪೂಜಾರಿಯವರು ದ್ವಜಾರೋಹಣ ಮಾಡಿದರು. ನೆರೆದ ಎಲ್ಲರೂ ರಾಷ್ಟ್ರಗೀತೆ ಹಾಡಿ ದ್ವಜಕ್ಕೆ ವಂದನೆ ಸಲ್ಲಿಸಿದರು.

ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗೌ. ಕಾರ್ಯಾಧ್ಯಕ್ಷ ಸೀ. ಯೆನ್. ಕರ್ಕೇರ, ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಉಪ ಕಾರ್ಯಾಧ್ಯಕ್ಷರುಗಳಾದ ಚಂದ್ರಹಾಸ್ ಎಸ್. ಪಾಲನ್ ಹಾಗೂ ಶ್ರೀಧರ್ ಬಿ. ಆಮೀನ್ , ಗೌ. ಕಾರ್ಯದರ್ಶಿ ಪುರಂದರ್ ಪೂಜಾರಿ, ಗೌ. ಕೋಶಾಧಿಕಾರಿ ಸುನಿಲ್ ಸಿ. ಸಾಲಿಯಾನ್ ವೇದಿಕೆಯಲ್ಲಿ ಉಪಸ್ತಿಥರಿದ್ದರು. ಮಾಜಿ ಕಾರ್ಯಾಧ್ಯಕ್ಷ ಶ್ರೀ ರವಿ ಎಸ್ ಸನಿಲ್, ರವರು ವೇದಿಕೆಯಲ್ಲಿದ್ದ ಗಣ್ಯರನ್ನು ಹಾಗೂ ನೆರೆದಿದ್ದ . ಸಭಿಕರನ್ನು ಸ್ವಾಗತಿಸಿ, ಅತಿತಿಗಳನ್ನು ಪರಿಚಿಸಿದರು.

ರವಿ ಎಸ್. ಸನಿಲ್ ರವರು ಡೊಂಬಿವಲಿ ಸ್ಥಳೀಯ ಸಮಿತಿ ನೆಡೆದು ಬಂದ ಹಾದಿಯನ್ನು ಸಂಪೂರ್ಣವಾಗಿ ವಿವರಿಸಿ, ಡೊಂಬಿವಲಿ ಸ್ಥಳೀಯ ಸಮಿತಿಯ ಸ್ಥಾಪನಾ ಸದಸ್ಯರೆಲ್ಲರನ್ನು ಸ್ಮರಣಿಸಿದರು, ಆದರಲ್ಲಿ ಮುಕ್ಯವಾಗಿ ದಿ: ಶ್ರೀ ಸಂಜೀವ ಪಾಲನ್, ಶ್ರೀ ವಸಂತ್ ಬಿ. ಸುವರ್ಣ, ಶ್ರೀ ಬಿ. ವೈ. ಸುವರ್ಣ, ಶ್ರೀ. ಕೆ. ಎಸ್. ಕೋಟಿಯನ್, ಶ್ರೀ ಶಿವರಾಮ್ ಸಾಲಿಯಾನ್, ಶ್ರೀ. ಕೆ. ಪಾಂಡುರಂಗ ಇವರ ಕೆಲಸವನ್ನು ಸ್ಲಾಗಿಸಿದರು. ಹಾಗೆಯೇ ಡೊಂಬಿವಲಿ ಸ್ಥಳೀಯ ಸಮಿತಿ ಸ್ಥಾಪನೆ ಆಗಲು ಕಾರಣಿಬೂತರದಾ ಶ್ರೀ ಕೆ. ಬೋಜರಾಜ್ ರ ಪಾತ್ರವನ್ನು ಮರೆಯಲು ಅಸಾದ್ಯ ಎಂದರು.

ಈ ಸಂದರ್ಬದಲ್ಲಿ ಬೇಬಿ ರಕ್ಷಿತಾ ರಾಜೇಶ್ ಕೋಟ್ಯಾನ್, ಕುಮಾರಿ ಸುರಕ್ಷಾ ಪಾಲನ್ ಹಾಗೂ ಶ್ರೀಮತಿ ಸೌಮ್ಯ ಸುವರ್ಣ ಸುಶ್ರಾವ್ಯವಾಗಿ ದೇಶಭಕ್ತಿ ಗೀತೆ ಹಾಡಿ ಎಲ್ಲರಿಗೂ ಮನರಂಜನೆ ನೀಡಿದರು. ಮಾಸ್ಟರ್ ನಿಖಿಲ್, ಮಾಸ್ಟರ್ ತ್ರೀಶ್ ರಾಮಚಂದ್ರ ಬಂಗೇರ , ಮಾಸ್ಟರ್ ಚಿನ್ಮಯ್ ಮೋಹನ್ ಸಾಲಿಯಾನ್, ಶ್ರೀ ಗಣೇಶ್ ಪೂಜಾರಿ, ಶ್ರೀಮತಿ ಗುಲಾಬಿ ಬಾಬು ಪೂಜಾರಿ ಹಾಗೂ ಶ್ರೀ ಈಶ್ವರ್ ಕೋಟ್ಯಾನ್ ಮಯೋಚಿತವಾಗಿ ಮಾತನಾಡಿದರು.

ಮುಖ್ಯ ಅತಿಥಿ ಯು. ಬಾಬು ಪೂಜಾರಿಯವರು ಮಾತನಾಡುತ್ತಾ ಯುವ ಸದಸ್ಯರಿಗೆ ಸಾರ್ವಜನಿಕವಾಗಿ ಭಾಷಣ ಮಾಡಲು ಟ್ರೈನಿಂಗ್ ನೀಡಬೇಕು ಎಂದು ಸಮಿತಿಗೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ದೇವರಾಜ್ ಪೂಜಾರಿಯವರು ನಾವೆಲ್ಲರೂ ಶಿಸ್ತುಬದ್ದರಾಗಿ ದೇಶದ ಸೇವೆ ಮಾಡೋಣ ಎಂದು ಯುವಕರಿಗೆ ಕರೆ ನೀಡಿದರು ಹಾಗೆಯೇ ಡೊಂಬಿವಲಿ ಸ್ಥಳೀಯ ಕಚೇರಿಗೆ ಸದಾ ಪ್ರೋತ್ಸಾಹನೀಡುತ್ತಿರುವ ಶ್ರೀ ಸಿ. ಟಿ. ಸಾಲಿಯಾನ್ ರವರನ್ನು ಪ್ರಸಾಂಸಿದರು.

ಶ್ರೀ ರವಿ ಎಸ್ ಸನಿಲ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಗೌರವ ಕಾರ್ಯದರ್ಶಿ ಪುರಂದರ್ ಪೂಜಾರಿ ಅಸೋಸಿಯೇಶನ್ನ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡುತ್ತಾ ವಂದನಾರ್ಪಣೆ ಸಲ್ಲಿಸಿದ ಬಳಿಕ ಸೇರಿದ್ದ ಎಲ್ಲರಿಗೂ ಸಿಹಿ ತಿಂಡಿ ಹಾಗೂ ಲಘು ಉಪಹಾರ ನೀಡಲಾಯಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here