Wednesday 14th, May 2025
canara news

ಆ.26-27: ಬಿಲ್ಲವರ ಅಸೋಸಿಯೇಶನ್‍ನ ಬಿಲ್ಲವ ಭವನದಲ್ಲಿ

Published On : 19 Aug 2018   |  Reported By : Rons Bantwal


164ನೇ ಗುರುಜಯಂತಿ-24 ಗಂಟೆಗಳ ಓಂ ನಮೋ ನಾರಾಯಣಾಯ ನಮಃ ಜಪಯಜ್ಞ

ಮುಂಬಯಿ, ಆ.19: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶದಂತೆ ಕಾರ್ಯವೆಸಗುತ್ತಿದ್ದು ಅಸೋಸಿಯೇಶನ್‍ನ ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತಿ ಇದೇ ಆಗಸ್ಟ್. 26 ಮತ್ತು 27ರ ಎರಡು ದಿನಗಳಲ್ಲಿ ವಿಜೃಂಭಣೆಯಿಂದ ಆಚರಿಸಲಿದೆ.

ಬ್ರಹ್ಮಶ್ರೀ ನಾರಾಯಣ ಗುರುಗಳು ಅವರ ತತ್ವ ಸಂದೇಶ ಸರ್ವ ಕಾಲಕ್ಕೂ ಸೀಮಿತವಾಗಿದ್ದು ಬಿಲ್ಲವರ ಅಸೋಸಿಯೇಶನ್ ಗುರುವರ್ಯರ ಜನ್ಮಜಯಂತಿ ವರ್ಷಂಪ್ರತೀ ಆಚರಿಸುತ್ತಿದ್ದಂತೆ ಈ ವರ್ಷವೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಸಾರಥ್ಯದಲ್ಲಿ ಇದೇ ಆಗಸ್ಟ್. 26ರ ಆದಿತ್ಯವಾರ ಮತ್ತು 27ರ ಸೋಮವಾರ ಗುರುಗಳ 164ನೇ ಜಯಂತ್ಯುತ್ಸವವ ಸಂಭ್ರಮಿಸಲಿದೆ. ಆಗಸ್ಟ್. 26ರ ಆದಿತ್ಯವಾರ ಮುಂಜಾನೆ 5.00 ಗಂಟೆಗೆ ಗಣಹೋಮ, ಬಳಿಕ ಪ್ರಭಾಕರ ಸಸಿಹಿತ್ಲು ಮತ್ತು ತಂಡದ ನಿರ್ವಾಹಣೆಯಲ್ಲಿ ನಿರಂತರ 24 ಗಂಟೆಗಳ ಓಂ ನಮೋ ನಾರಾಯಣಾಯ ನಮಃ ಜಪಯಜ್ಞ ಮೂಲಕ ಸಂಭ್ರಮಕ್ಕೆ ಚಾಲನೆ ನೀಡಲಾಗುವುದು. ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಉದ್ಘಾಟಿಸಲಿದ್ದಾರೆ.

ಮರುದಿನ ಆ.27ರ ಸೋಮವಾರ ಪ್ರಾತಃಕಾಲ 6.20 ಗಂಟೆಗೆ ಜಪಯಜ್ಞ ಸಂಪನ್ನಗೊಳ್ಳಲಿದೆ. ನಂತರ ಕಲಾಶಾಭಿಷೇಕ, ಭಜನೆ, ಮಹಾ ಮಂಗಳಾರತಿ,ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಪ್ರಸಾದ ಇತ್ಯಾದಿ ಧಾರ್ಮಿಕ ಪೂಜಾಧಿಗಳನ್ನು ಶ್ರೀ ಧನಂಜಯ ಶಾಂತಿ ಪೌರೋಹಿತ್ಯದಲ್ಲಿ ನಡೆಸಲಾಗುವುದು. 11.30 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಜರಗಲಿದೆ.

ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಜಯ ಸಿ.ಸುವರ್ಣ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿüಯಾಗಿ ಶೆಫ್‍ಟಾಕ್ ಫುಡ್ ಎಂಡ್ ಹಾಸ್ಪಿಟಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿ ಅತಿಥಿü ಅಭ್ಯಾಗತರಾಗಿ ಶ್ರೀಮತಿ ಶಾರದಾ ಭಾಸ್ಕರ್ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಕಲ್ಯಾಣ್ ಇದರ ಅಧ್ಯಕ್ಷ ಎಕ್ಕಾರು ನಡ್ಯೋಡಿಗುತ್ತು ಭಾಸ್ಕರ್ ಎಸ್. ಶೆಟ್ಟಿ ಆಗಮಿಸಲಿದ್ದಾರೆ.

ಈ ಭವ್ಯ ಉತ್ಸವದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್ (ಶಾಂತಿ), ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯಧ್ಯಕ್ಷ ಮೋಹನ್‍ದಾಸ್ ಜಿ.ಪೂಜಾರಿ ಮತ್ತು ಕಾರ್ಯದರ್ಶಿ ರವೀಂದ್ರ ಎ.ಅವಿೂನ್ (ಶಾಂತಿ) ಮತ್ತು ಪದಾಧಿಕಾರಿಗಳು, ಸರ್ವ ಸದಸ್ಯರು ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here