Wednesday 14th, May 2025
canara news

ಕುಂದಾಪುರ ಚರ್ಚ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ

Published On : 17 Aug 2018   |  Reported By : Bernard Dcosta


ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 72 ನೇಯ ಸ್ವಾತಂತ್ರ್ಯತ್ಸೊವನ್ನು ಆಚರಿಸಿಲಾಯಿತು.

ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಎನ್.ಸಿ.ಸಿ. ಕೆಡೇಟಗಳಿಂದ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದರು ‘ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಪ್ರಾಣ ಬಲಿದಾನವನ್ನು ನೀಡಿದ್ದಾರೆ, ಅವರಿಗೆ ನಾವು ಗೌರವಿಸುವುದು ನಮ್ಮ ಕರ್ತವ್ಯ. ನಾವು ಭಾರತೀಯ ಕೈಸ್ತರು, ನಾವು ಹೊರಗಿನವರೆಂಬ ಪುಕಾರು ಇದೆ, ಅದು ವಾಸ್ತವ ಅಲ್ಲಾ, ನಾವು ಅಪ್ಪಟ ಭಾರತೀಯರು, ನಮಗೆ ನಮ್ಮ ದೇಶದ ಮೇಲೆ ಅತ್ಯಂತ ಗೌರವ ಭಕ್ತಿ ಇದೆ, ಇದನ್ನು ನಾವು ಕಾಪಾಡಿಕೊಂಡೊ ಬರೋಣ’ ಎಂದು ಅವರು ಸಂದೇಶ ನೀಡಿದರು.

ಚರ್ಚಿನ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ, ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಎ ಮಾರ್ಟಿಸ್, ನಿರ್ಗಮನ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಕಥೊಲಿಕ್ ಸಭಾದ ಪದಾಧಿಕಾರಿಗಳು ಸದಸ್ಯರು ಇಗರ್ಜಿಯ ಸಮಸ್ತ ಪ್ರಜೆಗಳು ಮೊದಲಾದವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತ ಕೋರಿದರು. ಇಗರ್ಜಿಯ ಗಾಯನ ಮಂಡಳಿ ರಾಸ್ಠ್ರ ಭಕ್ತಿ ಗೀತೆಗಳನ್ನು ಹಾಡಿತು. ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್ ವಂದಿಸಿದರು. ಕಾರ್ಯಕ್ರಮವನ್ನು ವಿಲ್ಸನ್ ಒಲಿವೇರಾ ನಿರುಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here