Wednesday 14th, May 2025
canara news

ಕನ್ನಡ ವಿಭಾಗ ಮುಂಬಯಿ ವಿವಿಯಿಂದ ಕೃತಿ ಬಿಡುಗಡೆ-ಉಪನ್ಯಾಸ-ಪದವಿ ಪ್ರದಾನ ಕಾರ್ಯಕ್ರಮ

Published On : 19 Aug 2018   |  Reported By : Rons Bantwal


ಮುಂಬಯಿಯಲ್ಲಿ ಕನ್ನಡ ಭದ್ರವಾಗಿದೆ: ಮುದ್ದು ಮೂಡುಬೆಳ್ಳೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.19: ಇಲ್ಲಿ ನಿಮ್ಮನ್ನೆಲ್ಲ ಕಂಡಾಗ ನಾವೆಲ್ಲ ಒಂದೇ ಓಣಿಯುವರಿರುವವರೆಂದು ಭಾವನೆ ಮೂಡುತ್ತದೆ. ಹೊರನಾಡಿನಲ್ಲಿದ್ದು ಕರುನಾಡ ತಾಯಿನಾಡನ್ನು ದಿನಾ ಧ್ಯಾನಿಸುವವರು ಮುಂಬಯಿ ಕನ್ನಡಿಗರು. ಇಲ್ಲಿನ ಎಲ್ಲರ ಕೃತಿಗಳು ಒಳ್ಳೆಯ ಕೃತಿಗಳು. ಇವತ್ತು ಕರ್ನಾಟಕದಲ್ಲೇ ಕನ್ನಡ, ಆಗ್ಲ ಮಾಧ್ಯಮದ ಪ್ರಭಾವದಿಂದ ಹಿನ್ನಡೆ ಪಡೆಯುತ್ತಿರುವಾಗ ಇಂತಹ ಸಂಕ್ರಮಣ ಕಾಲ ಘಟ್ಟದಲ್ಲಿ ಮುಂಬಯಿಯಲ್ಲಿ ಕನ್ನಡ ಬಲಿಷ್ಠವಾಗಿ ಬೆಳೆದಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕ ಮುದ್ದು ಮೂಡುಬೆಳ್ಳೆ ತಿಳಿಸಿದರು.

ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಜೆ.ಪಿ.ನಾಯಕ್ ಸಭಾಭವನದಲ್ಲಿ ಇಂದಿಲ್ಲಿ ಶನಿವಾರ ಪೂರ್ವಾಹ್ನ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿರುವ ಕೃತಿ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಪದವಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮುದ್ದು ಮೂಡುಬೆಳ್ಳೆ ಮಾತನಾಡಿದರು.

ಏಕಕಾಲಕ್ಕೆ ಒಟ್ಟು ಆರು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಲೋಕಾರ್ಪಣೆ ಮಾಡಲಾಗಿದ್ದು, ಮಹಾನಗರದಲ್ಲಿನ ಸಾಹಿತಿ ಡಾ| ದಾಕ್ಷಾಯಣಿ ಯಡಹಳ್ಳಿ ಅವರ `ಅಕ್ಕಮಹಾದೇವಿ ಮತ್ತು ಮೀರಾಬಾಯಿ' ಪಿಹೆಚ್‍ಡಿ ಮಹಾಪ್ರಬಂಧ ಕೃತಿಯನ್ನು ಮುದ್ದು ಮೂಡುಬೆಳ್ಳೆ ಬಿಡುಗಡೆಗೊಳಿಸಿದ್ದು ಮುಂಬಯಿ ವಿವಿ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ| ಜೀವಿ ಕುಲಕರ್ಣಿ ಕೃತಿ ಪರಿಚಯಿಸಿದರು. ಮುಂಬಯಿನ ಸಾಹಿತಿ ಅರವಿಂದ ಹೆಬ್ಬಾರ್ ಅವರ `ಹಗಲು ಗನಸು' ಕಥಾಸಂಕಲನವನ್ನು ವಿವಿ ಪೀಠಗಳ ಸಂಯೋಜಕ ಮತ್ತು ಉಪ ಕುಲಸಚಿವ ಪ್ರಭಾಕರ ನೀರುಮಾರ್ಗ ಬಿಡುಗಡೆ ಗೊಳಿಸಿದ್ದು ಕಥೆಗಾರ ಡಾ| ಕೆ.ಗೋವಿಂದ ಭಟ್ ಕೃತಿ ಪರಿಚಯಿಸಿದರು. ಕವಯತ್ರಿ ಶಾರದಾ ಅಂಬೆಸಂಗೆ ಅವರ `ಕಾಡಿ ಬೇಡಲಿಲ್ಲ' ಕವನ ಸಂಕಲನವನ್ನು ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಬಿಡುಗಡೆಗೊಳಿಸಿದರು. ಕವಯತ್ರಿ ಶಾಂತಾ ಶಾಸ್ತ್ರೀ ಅವರ `ಚುಂಬಕ' ಕವನ ಸಂಕಲನವನ್ನು ಆಳ್ವಾಸ್ ಕಾಲೇಜು ಮೂಡಬಿದ್ರೆ ಇದರ ಪ್ರಾಧ್ಯಾಪಕ ಡಾ| ಯೋಗೀಶ್ ಕೈರೋಡಿ ಬಿಡುಗಡೆ ಗೊಳಿಸಿದ್ದು ಮುಂಬಯಿ ವಿವಿ ಕನ್ನಡ ವಿಭಾಗದ ಸಂಶೋಧನಾ ವಿದ್ಯಾಥಿರ್üನಿ ಶೈಲಜಾ ಹೆಗಡೆ ಕೃತಿ ಪರಿಚಯಿಸಿದರು. ಪುಣೆ ಅಲ್ಲಿನ ಸಾಹಿತಿ ಪಾಂಗಾಳ ವಿಶ್ವನಾಥ ಶೆಟ್ಟಿ ಅವರ `ಬೆಂಕಿಯಲ್ಲಿ ಬೆಂದ ಬಂಗಾರ' ಕೃತಿಯನ್ನು ಮುದ್ದು ಮೂಡುಬೆಳ್ಳೆ ಬಿಡುಗಡೆಗೊಳಿಸಿದ್ದು ಪೆÇಳಲಿ ಮಹೇಶ್ ಹೆಗ್ಡೆ ಕೃತಿ ವಿಶ್ಲೇಷಣೆಗೈದರು ಮತ್ತು `ಒಣಮರ ಚಿಗುರಿದಾಗ' ಕೃತಿಯನ್ನು ಮುದ್ದು ಮೂಡುಬೆಳ್ಳೆ ಬಿಡುಗಡೆ ಗೊಳಿಸಿದ್ದು ಪುಣೆ ಅಲ್ಲಿನ ಕವಿ, ಲೇಖಕ ಪೆÇಳಲಿ ಮಹೇಶ್ ಹೆಗ್ಡೆ ಕೃತಿ ವಿಶ್ಲೇಷಿಸಿದರು. ಕೃತಿಕಾರರೂ ತಮ್ಮಅನಿಶಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಕಾರ್ಯಕ್ರಮ ನಡೆಸಲ್ಪಟ್ಟಿದ್ದು, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಡಿಪೆÇ್ಲೀಮಾ ಪದವೀಧರರಾದ ಶರತ್ ಹೆಗ್ಡೆ, ಶ್ರದ್ಧಾ ಹೆಗ್ಡೆ, ಭವನೇಶ್ವರಿ ಹರಳ ಮತ್ತು ವಿಜಯ ಪೂಜಾರಿ ಅವರಿಗೆ ಗೌರವಿಸಿ ಅಭಿನಂದಿಸಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಸ್ತವಿಕ ನುಡಿಗಳನ್ನಾಡಿ ಮುಂಬಯಿನ ವಿದ್ಯಾನಗರಿಯ ಇಡೀ ಕಲೀನಾ ಕ್ಯಾಂಪಸ್ ಕನ್ನಡವನ್ನು ಉಸಿರಾಗಿಸಿ ಹಸಿರಾಗಿಸಿ ಕಂಗೋಳಿಸುತ್ತಿದೆ. ಇದೊಂದು ವಿಭಾಗದ ಶ್ರಾವಣ ಸಂಭ್ರಮದ ಕಾರ್ಯಕ್ರಮ. ಆರು ಕೃತಿಗಳ ಬಿಡುಗಡೆ ಅಂದರೆ ಈ ಕ್ಯಾಂಪಸ್ ವಿಶ್ವ ವಿದ್ಯಾಲಯ ಲೋಕಮುಖಕ್ಕೆ ಸಿಕ್ಸರ್ ಹೊಡೆಯುತ್ತಿರುವುದು ಅಭಿನಂದನೀಯ. ಶ್ರದ್ಧೆ ಶ್ರಮದಿಂದ ರಚಿಸಿ ಮುದ್ರಿಸಿಕೊಂಡ ಕೃತಿಗಳ ಬಿಡುಗಡೆ ಈ ವಿಭಾಗದ ಮಹಾನ್ ಸಾಧನೆಯಾಗಿದೆ. ಆದುದರಿಂದ ಇದು ಕನ್ನಡದ ಹಬ್ಬವೇ ಸರಿ ಎಂದರು.

ಗಿರೀಶ್ ಸಾರ್ವಡ್ ಅಕ್ಕನ ವಚನ ಮತ್ತು ತತ್ವಗೀತೆಗಳನ್ನಾಡಿದರು. ಕನ್ನಡ ವಿಭಾಗದ ಡಾ| ಪೂರ್ಣಿಮಾ ಎಸ್.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here