Tuesday 19th, March 2024
canara news

ಕನ್ನಡ ಸಂಘ ಸಾಂತಕ್ರೂಜ್ ಪೂರೈಸಿದ ಅರ್ವತ್ತೊಂದನೇ ವಾರ್ಷಿಕ ಮಹಾಸಭೆ

Published On : 20 Aug 2018   |  Reported By : Rons Bantwal


ಕನ್ನಡದ ಕಹಳೆ ಮೊಳಗಿಸಿದ ಹಿರಿಮೆ ಈ ಸಂಸ್ಥೆಗಿದೆ : ಎಲ್.ವಿ ಅವಿೂನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.20: ನಮ್ಮ ಕನ್ನಡ ಸಂಘ ಸಂಘವು ಕನ್ನಡದ ಉಳಿವಿಗಾಗಿ ಮಾತ್ರವಲ್ಲ ಕನ್ನಡಾಂಭೆಯ ಆರಾಧನೆಯಾಗಿ ಸೇವೆ ಸಲ್ಲಿಸುತ್ತಿದೆ. ಹೊರನಾಡ, ಕರ್ಮಭೂಮಿ ಮುಂಬಯಿಯಲ್ಲಿ ಒಳನಾಡಿನ ನಂತರ ಅತ್ಯಾಧಿಕ ಹೆಚ್ಚು ಕನ್ನಡಿಗರಿದ್ದರೆ. ಇಲ್ಲಿ ಕನ್ನಡದ ಸೇವೆ ಪ್ರತೀಯೋರ್ವರೂ ಅಭ್ಯಾಸವಾಗಿಸಿದ ಕಾರಣ ಕನ್ನಡ ಭಾಷೆ, ಸಂಸ್ಕೃತಿ ನಿರಂತರವಾಗಿ ಜೀವಾಳವಾಗಿದೆ. ಮುಂಬಯಿನಲ್ಲೇ ಕನ್ನಡದ ಕಹಳೆ ಮೊಳಗಿಸಿದ ಹಿರಿಮೆ ನಮ್ಮ ಸಂಸ್ಥೆಗಿದೆ. ಇಲ್ಲಿನ ಕನ್ನಡ ಜನತೆ ನಿತ್ಯೋತ್ಸವವಾಗಿಸಿ ರಾಜ್ಯೋತ್ಸವ ಆಚರಿಸುತ್ತಿದ್ದರೆ ಎಂದರೂ ತಪ್ಪಾಗಲಾರದು. ಎಂದÀು ಕನ್ನಡ ಸಂಘ ಸಾಂತಾಕ್ರೂಜ್ (ರಿ).ಇದರ ಸಂಘದ ಅಧ್ಯಕ್ಷ ಎಲ್.ವಿ ಅವಿೂನ್ ತಿಳಿಸಿದರು.

ಕನ್ನಡ ಸಂಘ ಸಾಂತಾಕ್ರೂಜ್ ತನ್ನ 61ನೇ ವಾರ್ಷಿಕ ಮಹಾಸಭೆಂiÀÀುನ್ನು ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ಮಹಾಸಭೆಯ ಅಧ್ಯಕ್ಷತೆ ವಹಿಸಿ ಎಲ್.ವಿ ಅವಿೂನ್ ಮಾತನಾಡಿದರು.

ಸಂಘದ ಉಪಾಧ್ಯಕ್ಷ ಗುಣಪಾಲ ಶೆಟ್ಟಿ ಐಕಳ, ಗೌ| ಪ್ರ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್ ವೇದಿಕೆಯಲ್ಲಿದ್ದು, ಸಾಮಾಜಿಕ-ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ಪ್ರಾರ್ಥನೆಯನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಜೊತೆ ಕೋಶಾಧಿಕಾರಿ ದಿನೇಶ್ ಬಿ.ಅವಿೂನ್ ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್ ವಂದಿಸಿದರು.

ಇತ್ತೀಚೆಗೆ ಗ್ಲೋಬಲ್ ಫೌಂಡೇಶನ್ ಅಚೀವರ್ ಸಂಸ್ಥೆಯು ರಷ್ಯಾ ರಾಷ್ಟ್ರದ ಟಶ್ಖೆಂಟ್‍ನಲ್ಲಿ ಜರಗಿಸಿದ ಸಮಾವೇಶÀÀದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯ ಅಧ್ಯಕ್ಷ ಎಲ್.ವಿ ಅವಿೂನ್ ಅವರಿಗೆ `ಏಷಿಯಾ ಪೆಸಿಫಿಕ್ ಅಚೀವರ್ಸ್ ಅವಾರ್ಡ್' ಪ್ರಶಸ್ತಿ ಪ್ರದಾನಿಸಿದ ಗೌರವ ಈ ಸಂಸ್ಥೆಯ ಹಿರಿಮೆಯಾಗಿದೆ ಎಂದು ಸಂಘದ ಪರವಾಗಿ ಸಂಸ್ಥೆಯ ಪ್ರೇಮಾ ಆರ್.ಕೋಟ್ಯಾನ್ ಮತ್ತಿತರರು ಎಲ್.ವಿ ಅವಿೂನ್ ಅವರಿಗೆ ಪುಷ್ಫಗುಪ್ಚವನ್ನಿತ್ತು ಗೌರವಿಸಿದರು.

ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಗೋವಿಂದ ಆರ್.ಬಂಗೇರಾ, ಸುಮಾ ಎಂ.ಪೂಜಾರಿ, ಶಾಲಿನಿ ಎಸ್.ಶೆಟ್ಟಿ, ಆರ್.ಪಿ ಹೆಗ್ಡೆ, ಸಲಹಾ ಸಮಿತಿ ಸದಸ್ಯರಾದ ನಾರಾಯಣ ಎಸ್.ಶೆಟ್ಟಿ, ಬಿ. ಆರ್ ಪೂಂಜಾ, ಎನ್.ಎಂ ಸನೀಲ್,ವಿಶೇಷ ಆಮಂತ್ರಿತ ಸದಸ್ಯರಾದ ಶಿವರಾಮ ಎಂ. ಕೋಟ್ಯಾನ್, ವಿಜಯಕುಮಾರ್ ಕೆ.ಕೋಟ್ಯಾನ್, ಲಿಂಗಪ್ಪ ಬಿ.ಅವಿೂನ್, ಹರೀಶ್ ಜೆ.ಪೂಜಾರಿ, ಸುಜತಾ ಸುಧಾಕರ್ ಉಚ್ಚಿಲ್, ಅಂತರಿಕ ಲೆಕ್ಕ ಪರಿಶೋಧಕ ರಾಜಶೇಖರ್ ಎ.ಅಂಚನ್, ಬಾಹ್ಯ ಲೆಕ್ಕ ಪರಿಶೋಧಕ ಹೆಚ್.ಡಿ.ಪೂಜಾರಿ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್, ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ, ಸಾಮಾಜಿಕ-ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.

 




More News

 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಬ್ರಹ್ಮಕುಮಾರಿ ಸಂಸ್ಥೆಯ ಸಯನ್  ಸೆಂಟರ್‍ನಿಂದ ಮಹಿಳಾ ದಿನಾಚರಣೆ
ಬ್ರಹ್ಮಕುಮಾರಿ ಸಂಸ್ಥೆಯ ಸಯನ್ ಸೆಂಟರ್‍ನಿಂದ ಮಹಿಳಾ ದಿನಾಚರಣೆ
ಅನಿತಾ ಪಿ.ತಾಕೊಡೆ ಅವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತ್ತ್‍ನ ದತ್ತಿ ಪ್ರಶಸ್ತಿ
ಅನಿತಾ ಪಿ.ತಾಕೊಡೆ ಅವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತ್ತ್‍ನ ದತ್ತಿ ಪ್ರಶಸ್ತಿ

Comment Here