Wednesday 14th, May 2025
canara news

ಕನ್ನಡ ಸಂಘ ಸಾಂತಕ್ರೂಜ್ ಇದರ ವಜ್ರಮಹೋತ್ಸವದ ಮನವಿಪತ್ರ ಬಿಡುಗಡೆ

Published On : 20 Aug 2018   |  Reported By : Rons Bantwal


ಒಳ್ಳೆಯ ಕಾಯಕಕ್ಕೆ ಎಲ್ಲರೂ ಸಹಕರಿಸುತ್ತಾರೆ : ಡಾ| ಆರ್.ಕೆ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.20: ಒಳ್ಳೆಯ ಕಾಯಕಕ್ಕೆ ಎಲ್ಲರೂ ಸಹಕರಿಸುತ್ತಾರೆ. ಅಂತಹ ಕೆಲಸಗಳಿಗೆ ದೇವರ ಕೃಪೆಯೂ ಇದ್ದೇ ಇದೆ. ಇಂತಹ ಸಘಗಳಿಂದ ಪರಿಸರದ ಉನ್ನತಿ ಜೊತೆಗೆ ಸಮಾಜದ ಅಭಿವೃದ್ಧಿಯೂ ಸಾಧ್ಯ ಎಂದÀು ಬಂಟ್ಸ್ ಸಂಘ ಮುಂಬಯಿ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಣಕಾಸು ತಜ್ಞ ಡಾ| ಆರ್.ಕೆ ಶೆಟ್ಟಿ ನುಡಿದರು.

ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಘವು ಡಿ.2018ರÀಲ್ಲಿ ಸಂಭ್ರಮಿಸಲಿರುವ ವಜ್ರವಮೋತ್ಸವದ ಮನವಿಪತ್ರ ಬಿಡುಗಡೆ ಗೊಳಿಸಿ ಡಾ| ಆರ್‍ಕೆ ಮಾತನಾಡಿದರು.

ಗೌರವ ಅತಿಥಿüಗಳಾಗಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರಸಲಹಾ ಸಮಿತಿ ಸದಸ್ಯರುಗಳಾದ ಸಿಎ| ಐ.ಆರ್ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ಹರೀಶ್ ಜಿ.ಅಮೀನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ) ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ಹರೀಶ್ ಜಿ.ಅಮೀನ್, ಸಾಯಿಕೇರ್ ಸಮೂಹದ ಸುರೇಂದ್ರ ಎ.ಪೂಜಾರಿ, ಅವೆನ್ಯೂ ಹೊಟೇಲು ಸಮೂಹ ಮುಂಬಯಿ ಇದರ ನಿರ್ದೇಶಕ ರಘುರಾಮ ಕೆ.ಶೆಟ್ಟಿ, ಹಿರಿಯ ಉದ್ಯಮಿಗಳಾದ ಜಯಶಂಕರ್ ಶೆಟ್ಟಿ, ಭೋಜಾ ಎಂ.ಶೆಟ್ಟಿ, ಸಿಎ| ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದು ಶುಭಾರೈಸಿದರು. ಅಂತೆಯೇ ಸಂಘವು ದಾನಿಗಳ ಪ್ರಾಯೋಜಕತ್ವದಲ್ಲಿ ವಾರ್ಷಿಕವಾಗಿ ಕೊಡಮಾಡುವ 2018ನೇ ಸಾಲಿನ ದತ್ತು ಸ್ವೀಕೃತ ವಿದ್ಯಾಥಿರ್üಗಳ ವಿದ್ಯಾ ಸಹಾಯಧನವನ್ನು ಫಲಾನುಭವಿ ಮಕ್ಕಳಿಗೆ ಹಸ್ತಾಂತರಿಸಿ ಶುಭಾರೈಸಿದರು.

ವಜ್ರಮಹೋತ್ಸವ ಸಮಿತಿ ಗೌರವಾಧ್ಯಕ್ಷರುಗಳಾದ ನಾರಾಯಣ ಎಸ್.ಶೆಟ್ಟಿ ಮತ್ತು ಎನ್.ಎಂ ಸನೀಲ್, ವಜ್ರಮ ಹೋತ್ಸವ ಸಮಿತಿ ಕಾರ್ಯಧ್ಯಕ್ಷ ಬಿ.ಆರ್ ಪೂಂಜಾ, ಸ್ಮರಣ ಸಂಚಿಕೆ ಸಮಿತಿ ಕಾರ್ಯಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ (ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ), ಕಾರ್ಯಕ್ರಮ ಸಮಿತಿ ಕಾರ್ಯಧ್ಯಕ್ಷೆ ವನಿತಾ ವೈ.ನೋಂದ (ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ) ವೇದಿಕೆಯಲ್ಲಿ ಆಸೀನರಾಗಿದ್ದರು.

ಎಲ್.ವಿ ಅಮೀನ್ ಓರ್ವ ದಕ್ಷ ಸಂಘಟನಾಶೀಲ ಸಾಧಕರು. ಅವರ ಸಾರಥ್ಯದಲ್ಲಿ ಈ ಸಂಘ ಬಹಳಷ್ಟು ಬೆಳೆದಿದೆ. ಈ ಸಂಸ್ಥೆ ನೂರಾರು ಕಾಲ ಬಾಳಲಿ ಎಂದು ಹರೀಶ್ ಪೂಜಾರಿ ಆಶಯ ವ್ಯಕ್ತಪಡಿಸಿದರು.

ಎಲ್ವೀ ಅಧ್ಯಕ್ಷತೆಯಲ್ಲಿ ಈ ಕನ್ನಡ ಸಂಘ ಮುನ್ನಡೆದು ಭಾರೀ ಜನಮನ್ನಣೆ ಪಡೆದಿದೆ. ಇಂತಹ ಸಂಸ್ಥೆಯ ಅರ್ವತ್ತರ ನಡಿಗೆ ಸ್ತುತ್ಯರ್ಹ. ಇನ್ನೂ ನಿಷ್ಠ ಸೇವೆಯೊಂದಿಗೆ ಒಳ್ಳೆಯದಾಗಿ ಮುನ್ನಡೆಯಲಿ ಎಂದು ಎನ್.ಟಿ ಪೂಜಾರಿ ಹಾರೈಸಿದರು.

ದತ್ತು ಸ್ವೀಕೃತ ದಾನಿಗಳ ಆಶೀರ್ವಾದ ಪಡೆಯುತ್ತಿರುವ ನೀವು ಧನ್ಯರು. ಅವರ ವಿದ್ಯಾ ಸಹಾಯಸ್ಥ ಪಡೆದ ನೀವು ಸರ್ವೋಚ್ಛ ಶಿಕ್ಷಣ ಪಡೆದು ರಾಷ್ಟ್ರದ ಉತ್ತಮ ನಾಗರಿಕರಾಗಬೇಕು. ಮುಂದೆ ನೀವು ಕೂಡ ಶೈಕ್ಷಣಿಕ ನೆರವು ನೀಡುವ ದಾನಿಗಳಾಗಿ ಸಮಾಜದ ಋಣ ತೀರಿಸುತ್ತಾ ನಿಮ್ಮ ಕಾಲದ ಮಕ್ಕಳಿಗೆ ಆಶೀರ್ವಾದ ನೀಡುವಂತಾಗಬೇಕು. ನಮ್ಮ ಹಿರಿಯರ ಚಿಂತನ ಇದೇ ಆಗಿದ್ದು, ನಮ್ಮದು ಅದೇ ಚಿಂತನೆಯಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಪೆÇೀಷಕರು ಪಾಲ್ಗೊಂಡು ಪ್ರೇರಣೆ ನೀಡಬೇಕು. ಸಂಘವು ಇಂದು ಆರವತ್ತರ ಸಾಧನೆಯತ್ತ ಮುನ್ನಡೆಯುತ್ತಿದೆ. ಆ ಕಷ್ಟ ಕಾಲದಲ್ಲಿ ಹಿರಿಯರು ಭವಿಷ್ಯತ್ತಿನ ದೂರದೃಷ್ಟಿಯನ್ನಿರಿಸಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ರಜತೋತ್ಸವವನ್ನು 38 ವರ್ಷದಲ್ಲಿ ಸಂಭ್ರಮಿಸುವಷ್ಟು ಕಷ್ಟವಿತ್ತು. ಆದರೂ ಪ್ರಯತ್ನ ಬೀಡದೆ ಸಂಸ್ಥೆಯನ್ನು ಮುನ್ನಡೆಸಿದರೆ. ನಾನು ಸಂಘದ ಅಧ್ಯಕ್ಷ ಪದ ವಹಿಸಿದ ಬಳಿಕ ಬೆಳ್ಳಿಹಬ್ಬ, ಸ್ವರ್ಣಮಹೋತ್ಸವ ಸಂಭ್ರಮಿಸುವ ಭಾಗ್ಯ ದೊರೆಯಿತು. ಇದೀಗ ವಜ್ರಮಹೋತ್ಸವವನ್ನೂ ಆಚರಿಸುವುದು ಸಂತೋಷದಾಯಕ. ನನ್ನ ನಾಯಕತ್ವಕ್ಕೆ ಎಲ್ಲರೂ ಸಮರ್ಥನೆ ನೀಡಿ ಸಹಕರಿಸಿದ ಫಲವಾಗಿ ಸಂಸ್ಥೆಯನ್ನು ಈ ಮಟ್ಟಕ್ಕೆ ಬೆಳೆಸಲು ಸಾಧ್ಯವಾಗಿದೆ. ತಮ್ಮೆಲ್ಲರ ಸಹಕಾರದಿಂದ ವಜ್ರಮಹೋತ್ಸವನ್ನು ಅರ್ಥಪೂರ್ಣವಾಗಿ ಸಂಭ್ರಮಿಸೋಣ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಎಲ್.ವಿ ಅವಿೂನ್ ಕರೆಯಿತ್ತರು.

ಕಾರ್ಯಕ್ರಮದಲ್ಲಿ ಸಂಘದ ಸಂಘದ ಗೌ| ಪ್ರ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಜೊತೆ ಕೋಶಾಧಿಕಾರಿ ದಿನೇಶ್ ಬಿ. ಅವಿೂನ್, ವಿಶೇಷ ಆಮಂತ್ರಿತ ಸದಸ್ಯರಾದ ಶಿವರಾಮ ಎಂ. ಕೋಟ್ಯಾನ್, ಲಿಂಗಪ್ಪ ಬಿ.ಅವಿೂನ್, ಸುರೇಶ್ ಎನ್.ಶೆಟ್ಟಿ, ವಿಜಯಕುಮಾರ್ ಕೆ.ಕೋಟ್ಯಾನ್, ಉಷಾ ವಿ.ಶೆಟ್ಟಿ, ಹರೀಶ್ ಜೆ.ಪೂಜಾರಿ, ಸುಜತಾ ಸುಧಾಕರ್ ಉಚ್ಚಿಲ್, ಅಂತರಿಕ ಲೆಕ್ಕ ಪರಿಶೋಧಕ ರಾಜಶೇಖರ್ ಎ.ಅಂಚನ್, ಬಾಹ್ಯ ಲೆಕ್ಕ ಪರಿಶೋ ಧಕ ಹೆಚ್.ಡಿ ಪೂಜಾರಿ, ಶಿಕ್ಷಣ ಸಮಿತಿ ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ.ಆರ್ ಬಂಗೇರಾ, ಆರ್.ಪಿ ಹೆಗ್ಡೆ, ಶಾರದಾ ಎಸ್.ಪೂ ಜಾರಿ, ಸುಮಾ ಎಂ.ಪೂಜಾರಿ, ಶಾಲಿನಿ ಎಸ್.ಶೆಟ್ಟಿ, ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.

ವಜ್ರಮಹೋತ್ಸವ ಹಣಕಾಸು ಸಮಿತಿ ಕಾರ್ಯಧ್ಯಕ್ಷ ಗುಣಪಾಲ ಶೆಟ್ಟಿ ಐಕಳ (ಸಂಘದ ಉಪಾಧ್ಯಕ್ಷ) ಸುಖಾಗಮನ ಬಯಸಿದರು. ಸಾಮಾಜಿಕ-ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ಗಣಪತಿ ಸ್ತುತಿಗೈದರು. ಗೌರವ ಪ್ರಧಾನ ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here