Wednesday 14th, May 2025
canara news

ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆಯಿಂದ ನಡೆಸಲ್ಪಟ್ಟ ಸಾಹಿತ್ಯ ಸಂಭ್ರಮ

Published On : 21 Aug 2018   |  Reported By : Rons Bantwal


ನಾರಾಯಣ ಗುರುಗಳ ಚಿಂತನೆ ಸರ್ವ ಶ್ರೇಷ್ಠವಾದದು : ಯೋಗೀಶ್ ಕೈರೋಡಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.21: ಐವತ್ತರ ಚಾರಿತ್ರಿಕ ನೆಲೆಯ ವೇದಿಕೆಯಲ್ಲಿ ನಾರಾಯಣ ಗುರುಗಳ ಪರಿಚಯಿಕೆಯ ಕಾರ್ಯಕ್ರಮ ನೇರವೇರಿಸುವುದೇ ನನ್ನ ಅಭಿಮಾನ. ತುಳುನಾಡ ಇಡೀ ಪರಿವರ್ತನೆಗೆ ಮುಂಬಯಿಗರ ಶ್ರಮ ಅನುಪಮ ಆದುದು. ತುಳು ಸಂಸ್ಕೃತಿಯನ್ನು ಮೆಲುಕುವುದುದೆಂದರೆ ಅದೇ ಒಂದು ದೊಡ್ಡ ಹಿರಿಮೆಯಾಗಿದೆ. ತುಳು ಎನ್ನುವುದೇ ಒಂದು ಕುಟುಂಬ. ಕುಲಕಸುಬುಗಳಿಂದ ಕೊಡುಕೊಳ್ಳುವಿಕೆಯ ಬದುಕಿಗೆ ತುಳುವರು ಅಗ್ರರು. ಬೆಸೆದು ಬೆಳೆದ ಏಕತೆಯ ಸಂಸ್ಕೃತಿ ತುಳುವರಲ್ಲಿದ್ದು ಆ ಮೂಲಕ ಬಳಗವಾಗಿ ಬಾಳುವುದಕ್ಕೆ ತುಳುವರು ಮಾದರಿ. ಇದಕ್ಕೆಲ್ಲಾ ನಾರಾಯಣ ಗುರುಗಳ ಸಮಾಜ ಸುಧಾರಣಾ ಕ್ರಾಂತಿಯೂ ಪೂರಕ. ಅಜ್ಞಾನವನ್ನು ಜ್ಞಾನೋದಯ ಗೊಳಿಸಿದ ಸಂತರೇ ನಾರಾಯಣ ಗುರುಗಳು ವಿಶಾಲವಾದ ವಿಚಾರಧಾರೆವುಳ್ಳವರಾಗಿದ್ದರು. ಇಂತಹ ನಾರಾಯಣ ಗುರುಗಳ ಮಾನವೀಯ ಧರ್ಮದ ಕಲ್ಪನೆ ಆಧುನಿಕ ಯುಗಕ್ಕೆ ಮಾದರಿ ಆಗಿದೆ. ಅವರ ಚಿಂತನೆ ಸರ್ವ ಶ್ರೇಷ್ಠವಾದುದು ಎಂದು ಆಳ್ವಾಸ್ ಕಾಲೇಜು ಮೂಡಬಿದ್ರೆ ಇದರ ಪ್ರಾಧ್ಯಾಪಕ ಡಾ| ಯೋಗೀಶ್ ಕೈರೋಡಿ ತಿಳಿಸಿದರು

ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆಯು ತನ್ನ ಸುವರ್ಣ ಮಹೋತ್ಸವ ವರ್ಷಾಚರಣಾ ನಿಮಿತ್ತ ಮಂಗಳೂರು ವಿಶ್ವವಿದ್ಯಾಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಸಹಯೋಗದಲ್ಲಿ ಘಾಟ್‍ಕೋಪರ್ ಪಂತ್‍ನಗರದಲ್ಲಿನ ವೆಲ್ಫೇರ್ ಸೊಸೈಟಿಯ ಬಾಬಾ'ಸ್ ಮಹೇಶ್ ಎಸ್.ಶೆಟ್ಟಿ ಸಭಾಗೃಹದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಭ್ರಮದಲ್ಲಿ ತುಳು ಸಂಸ್ಕೃತಿಗೆ ಗುರು ನಾರಾಯಣರ ಪ್ರಭಾವ ವಿಚಾರವಾಗಿ ಡಾ| ಕೈರೋಡಿ ಉಪನ್ಯಾಸವನ್ನಿತ್ತರು.

ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾಬಾಳಿಕೆ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಸಾಹಿತ್ಯ ಸಂಭ್ರಮದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಮಂಗಳೂರು ವಿವಿ ಪೀಠಗಳ ಸಂಯೋಜಕ ಮತ್ತು ಉಪ ಕುಲಸಚಿವ ಪ್ರಭಾಕರ ನೀರುಮಾರ್ಗ, ಹೆಸರಾಂತ ವಿದ್ವಾಂಸ, ಸಂಶೋಧಕ ಬಾಬು ಶಿವ ಪೂಜಾರಿ, ಕನ್ನಡ ವೆಲ್ಫೇರ್‍ನ ಕಾರ್ಯದರ್ಶಿ ಸುಧಾಕರ ಎಲ್ಲೂರು, ಕೋಶಾಧಿಕಾರಿ ಹರೀಶ್ ಎಂ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಂಬಯಿ ಕನ್ನಡಿಗರ ಕೆಲಸಗಳೆಲ್ಲವು ಶುದ್ಧಮನಸ್ಸಿನಿಂದ ಕೂಡಿದ್ದು. ನಿಮ್ಮಿಂದ ಕನ್ನಡ ಕಟ್ಟುವ ಕೆಲಸ ಇನ್ನೂ ಹೆಚ್ಚಾಗಲಿ. ಕನ್ನಡಿಗರನ್ನು ಒಗ್ಗೂಡಿಸಿ ಕರುನಾಡನ್ನಾಗಿಸುವಂತಾಗಲಿ ಎಂದÀು ಪ್ರಭಾಕರ ನೀರುಮಾರ್ಗ ತಿಳಿಸಿದರು.


ಸಾಹಿತ್ಯ ಸಂಭ್ರಮದ ಅಂಗವಾಗಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಸಲ್ಪಟ್ಟಿದ್ದು ನಾಡಿನ ಹಿರಿಯ ಕವಯತ್ರಿ ಡಾ| ಸುನೀತಾ ಎಂ.ಶೆಟ್ಟಿ ಅವರು ಹಿಂಗಾರ ಅರಳಿಸಿ ಕವಿಗೋಷ್ಠಿ ಉದ್ಘಾಟಿಸಿದರು. ಡಾ| ಗಿರಿಜಾ ಶಾಸ್ತ್ರಿ, ಗೋಪಾಲ್ ತ್ರಾಸಿ, ಗಣೇಶ್ ಕುಮಾರ್ (ಕನ್ನಡ), ಡಾ| ಕರುಣಾಕರ್ ಶೆಟ್ಟಿ ಪಣಿಯೂರು, ಸಾ.ದಯಾ, ಡಾ| ಜಿ.ಪಿ ಕುಸುಮಾ, ಅಶೋಕ್ ವಳದೂರು, ಅಶೋಕ್ ಪಕ್ಕಳ, ಶಾರದಾ ಎ.ಅಂಚನ್ (ತುಳು), ರೋನ್ಸ್ ಬಂಟ್ವಾಳ್ (ಕೊಂಕಣಿ), ಶಾಂತಿ ಶಾಸ್ತ್ರಿ (ಹವ್ಯಾಕ), ಅಕ್ಷತಾ ದೇಶಪಾಂಡೆ (ಮರಾಠಿ), ಅರುಷಾ ಎನ್.ಶೆಟ್ಟಿ (ಗುಜರಾತಿ) ಭಾಷೆಗಳಲ್ಲಿ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ನಾರಾಯಣ ಶೆಟ್ಟಿ ನಂದಳಿಕೆ ತಮ್ಮ ಕವಿತೆ ವಾಚಿಸಿ ಕವಿಗೋಷ್ಠಿ ನಿರ್ವಾಹಿಸಿದರು.

ನಾರಾಯಣ ಗುರುಗಳ ಬಗ್ಗೆ ಮುಂಬಯಿಗರು ಹೆಚ್ಚು ತಿಳಿದವರು. 19ನೇ ಶತಮಾನದ ಸಂಧಿಗ್ದ ಕಾಲದಲ್ಲಿ ಮತಭೇದ ವಿಶೇಷವಾಗಿತ್ತು. ಆ ಕಾಲಕ್ಕೆ ಗುರುಗಳು ಹುಟ್ಟಿದ್ದರು. ಅಗಾಧ ಲೋಕಾನುಭವಿ ಗುರುಗಳು ಸಾಕ್ಷತ್‍ಕಾರ ಪಡೆದ ಸಂತರೆಣಿಸಿ ತಪಸ್ಸಿನ ಫಲವನ್ನು ಸಾಮಾಜಿಕವಾಗಿ ಪಡೆದ ಮಹಾನುಭವಿ. ಅಂತಹ ಪರಮ ಪುರುಷರ ಜೀವನ ಬಗ್ಗೆ ಪ್ರಸಕ್ತ ಜನತೆ ತಿಳಿಯಬೇಕು ಎನ್ನುವುದೇ ಈ ಕಾರ್ಯಕ್ರಮದ ಉದ್ದೇಶ. ತಮ್ಮೆಲ್ಲರ ಒಗ್ಗೂಡುವಿಕೆ ಮತ್ತು ಆತ್ಮೋನ್ನತಿಗೆ ಈ ಕಾರ್ಯಕ್ರಮ ಪೂರಕ ಪ್ರಸ್ತಾವಿಕ ನುಡಿಗಳನ್ನಾಡಿ ತಿಳಿಸಿದರು.

ಬಾಬು ಪೂಜಾರಿ ಮಾತನಾಡಿ ಇದೊಂದು ತುಳು ಕನ್ನಡ ಸಂಸ್ಕೃತಿಗಳ ಸಂಗಮವಾಗಿದೆ. ಮುಂಬಯಿಯಲ್ಲಿ ಕನ್ನಡದ ತೇರÀನ್ನು ಎಳೆದವರು ಬಹುಮುಖ್ಯರು ತುಳುವರೇ ಆಗಿದ್ದು ತುಳು ಕನ್ನಡಕ್ಕಿಂತ ಪುರಾತನ ಭಾಷೆಯಾಗಿದೆ. ಸತ್ತ ಮೇಲೂ ಶಾಂತಿ ಕರುಣಿಸುವ ಶಕ್ತಿ ತುಳು ಸಂಸ್ಕೃತಿಯಲ್ಲಿದೆ ಎಂದರು.

ಕನ್ನಡದ ಮಾತೃ ಸಂಸ್ಕೃತಿ ಜೊತೆಗೆ ತಾಯಿನುಡಿ ನಮಗೆಪ್ರಿಯವಾಗಬೇಕು ಜೊತೆಗೆ ಎಲ್ಲರನ್ನೂ ಒಗ್ಗೂಡಿಸುವಲ್ಲಿ ನಮ್ಮ ಹಿರಿಯರು ಕಟ್ಟಿಬೆಳೆಸಿದ ಸಂಸ್ಥೆಯು ಸದ್ಯ ಸ್ವರ್ಣಮಹೋತ್ಸವದ ತುತ್ತ ತುದಿಯಲ್ಲಿದೆ. ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಈ ಸಂಸ್ಥೆಯನ್ನು ಮುನ್ನಡೆಸುತ್ತಿದೆ. ಈ ಸೊಸೈಟಿಯು ಮುಂದೆಯೂ ಕನ್ನಡದ ಮುನ್ನಡಿಗೆ ಸಾಕ್ಷಿ ಆಗಿಸಲಿದ್ದೇವೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ನವೀನ್ ಇನ್ನಬಾಳಿಕೆ ತಿಳಿಸಿದರು.

ಕನ್ನಡ ವೆಲ್ಫೇರ್‍ನ ಉಪಾಧ್ಯಕ್ಷ ಜಯರಾಜ್ ಜೈನ್, ಕೋಶಾಧಿಕಾರಿ ಹರೀಶ್ ಎಂ.ಶೆಟ್ಟಿ, ಜೊತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಜೊತೆ ಕೋಶಾಧಿಕಾರಿ ಪೀಟರ್ ರೋಡ್ರಿಗಸ್, ಮಹಿಳಾ ವಿಭಾಗಧ್ಯಕ್ಷೆ ಶಾಂತÀ ಎನ್.ಶೆಟ್ಟಿ, ಮತ್ತಿತರ ಪದಾಧಿಕಾರಿಗಳು ಅತಿಥಿüUಳನ್ನು ಗೌರವಿಸಿದರು. ಕಾರ್ಯದರ್ಶಿ ಸುಧಾಕರ ಎಲ್ಲೂರು ಸ್ವಾಗತಿಸಿದರು. ವೀಣಾ ಎಂ.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಬಂಟರವಾಣಿ ಸಂಪಾದಕ ಅಶೋಕ್ ಪಕ್ಕಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here