Wednesday 14th, May 2025
canara news

ಕನ್ನಡ ವೆಲ್ಫೇರ್ ಸೊಸೈಟಿ ಘಾಟ್‍ಕೋಪರ್ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿ

Published On : 21 Aug 2018   |  Reported By : Rons Bantwal


ಕೆಟ್ಟ ಮನಸ್ಸು ಎಂದೂ ಕವಿತೆ ರಚಿಸಲಾರದು : ಡಾ| ಸುನೀತಾ ಎಂ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.21: ನಮ್ಮ ಬದುಕು ನಮಗೆ ಮುಖ್ಯ. ಆ ಬದುಕು ನಮ್ಮ ಕವಿತೆಗಳಲ್ಲಿ ಪಡಿಮೂಡಬೇಕು. ಕವಿತೆಗೆ ಭಾಷೆಯಿಲ್ಲ ಅದು ಇಂದ್ರೀಯಾತೀತವಾದುದು. ಯಾವೋತ್ತು ಒಂದು ಕೆಟ್ಟ ಮನಸ್ಸು ಕವಿತೆ ರಚಿಸಲಾರದು. ಕವಿತೆ ಕಟ್ಟಲು ಒಳ್ಳೆಯ ಸುಸಂಸ್ಕೃತ ಮನಸ್ಸು ಬೇಕು. ಯಾರಿಗೆ ಅರಿವು ಇಲ್ಲವೋ ಅವರಿಗೆ ಅರಿವನ್ನು ಕೊಡುವ ಕೆಲಸ ಕವಿಗಳಿಂದ ಆಗಬೇಕು. ಏಕೆಂದರೆ ಕವಿತೆ ಬದುಕನ್ನು ಪ್ರೀತಿಸಲು ಕಲಿಸುತ್ತದೆ ಎಂದು ನಾಡಿನ ಹಿರಿಯ ಕವಯತ್ರಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು

ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆ ತನ್ನ ಸ್ವರ್ಣಮಹೋತ್ಸವ ವರ್ಷಾಚರಣಾ ನಿಮಿತ್ತ ಘಾಟ್‍ಕೋಪರ್ ಪಂತ್‍ನಗರದಲ್ಲಿನ ವೆಲ್ಫೇರ್ ಸೊಸೈಟಿಯ ಬಾಬಾ'ಸ್ ಮಹೇಶ್ ಎಸ್.ಶೆಟ್ಟಿ ಸಭಾಗೃಹದಲ್ಲಿ ಕಳೆದ ಆದಿತ್ಯವಾರ ಸಂಜೆ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಸಲ್ಪಟ್ಟಿದ್ದು ಡಾ| ಸುನೀತಾ ಶೆಟ್ಟಿ ಹಿಂಗಾರ ಅರಳಿಸಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ಅಡ್ವಕೇಟ್ ಹೆಚ್.ಕೆ ಸುಧಾಕರ್ ಹಾಗೂ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾಬಾಳಿಕೆ ಉಪಸ್ಥಿತರಿದ್ದು ಕವಿವರ್ಯರಿಗೆ ಪುಷ್ಫಗುಪ್ಚ, ಕೃತಿ ಗೌರವವನ್ನಿತ್ತು ಅಭಿವಂದಿಸಿದರು.

ನೋಡುವಾಗ ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಇದು ಚಿಕ್ಕ ಸಂಸ್ಥೆಯಾಗಿ ಕಂಡರೂ ಅರ್ಥಪೂರ್ಣವಾದ ಮಹತ್ತರವಾದ ಕನ್ನಡದ ಕೆಲಸವನ್ನು ನಿಭಾಯಿಸಿದೆ. ಇದಕ್ಕೆ ಸಂಸ್ಥೆಯ ಸ್ವರ್ಣಸಂಭ್ರಮವೇ ಇದಕ್ಕೆ ಸಾಕ್ಷಿ. ಸಂಸ್ಥೆಯ ಅನನ್ಯ ಸೇವೆಯಿಂದ ಮುಂಬಯಿನಲ್ಲೂ ಕನ್ನಡನಾಡು ಉದಯಿಸÀಲಿಎಂದು ಹೆಚ್.ಕೆ ಸುಧಾಕರ್ ತಿಳಿಸಿದರು.

ಮುದ್ದು ಮೂಡುಬೆಳ್ಳೆ ಅಧ್ಯಕ್ಷೀಯ ನುಡಿಗಳನ್ನಾಡಿ ಇಂದಿನ ಬಹುಭಾಷಾ ಕವಿಗೋಷ್ಠಿ ಬಹಳ ಅರ್ಥಪೂರ್ಣವಾಗಿ ನಡೆದಿದೆ. ಭಾಗವಹಿಸಿದ ಬಹುಭಾಷೆಯ ಎಲ್ಲಾ ಕವಿಗಳು ತಮ್ಮ ಒಳ್ಳೆಯ ಕವಿತೆಗಳನ್ನು ಸಾದರ ಪಡಿಸಿದ್ದಾರೆ. ಮನುಷ್ಯತ್ವ ಇಂದು ಅರಳಬೇಕು. ಬದುಕನ್ನು ಸುಂದರವಾಗಿ ಹೇಗೆ ರೂಪಿಸಬೇಕೆಂಬ ಆಶಯವುಳ್ಳ ಕವಿತೆಗಳೇ ಇಂದು ಪ್ರಸ್ತುತಗೊಂಡಿರುವುದು ಸ್ತುತ್ಯರ್ಹ ಎಂದರು.

ಡಾ| ಗಿರಿಜಾ ಶಾಸ್ತ್ರಿ, ಗೋಪಾಲ್ ತ್ರಾಸಿ, ಗಣೇಶ್ ಕುಮಾರ್ (ಕನ್ನಡ), ಡಾ| ಕರುಣಾಕರ್ ಶೆಟ್ಟಿ ಪಣಿಯೂರು, ಸಾ.ದಯಾ, ಡಾ| ಜಿ.ಪಿ ಕುಸುಮಾ, ಅಶೋಕ್ ವಳದೂರು, ಅಶೋಕ್ ಪಕ್ಕಳ, ಶಾರದಾ ಎ.ಅಂಚನ್ (ತುಳು), ರೋನ್ಸ್ ಬಂಟ್ವಾಳ್ (ಕೊಂಕಣಿ), ಶಾಂತಿ ಶಾಸ್ತ್ರಿ (ಹವ್ಯಾಕ), ಅಕ್ಷತಾ ದೇಶಪಾಂಡೆ (ಮರಾಠಿ), ಅರುಷಾ ಎನ್.ಶೆಟ್ಟಿ (ಗುಜರಾತಿ) ಭಾಷೆಗಳಲ್ಲಿ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ನಾರಾಯಣ ಶೆಟ್ಟಿ ನಂದಳಿಕೆ ತಮ್ಮ ಕವಿತೆ ವಾಚಿಸಿ ಕವಿಗೋಷ್ಠಿ ನಿರ್ವಾಹಿಸಿದರು.

ಕಾರ್ಯಕ್ರಮದಲ್ಲಿ ಹೆಸರಾಂತ ವಿದ್ವಾಂಸ, ಸಂಶೋಧಕ ಬಾಬು ಶಿವ ಪೂಜಾರಿ, ಮಂಗಳೂರು ವಿವಿ ಪೀಠಗಳ ಸಂಯೋಜಕ ಮತ್ತು ಉಪ ಕುಲಸಚಿವ ಪ್ರಭಾಕರ ನೀರುಮಾರ್ಗ, ಮೂಡಬಿದ್ರೆ ಆಳ್ವಾಸ್ ಕಾಲೇಜ್‍ನ ಪ್ರಾಧ್ಯಾಪಕ ಡಾ| ಯೋಗೀಶ್ ಕೈರೋಡಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಬಂಟರವಾಣಿ ಸಂಪಾದಕ ಅಶೋಕ್ ಪಕ್ಕಳ, ಜಿ.ಟಿ ಆಚಾರ್ಯ, ಕರ್ನೂರು ಮೋಹನ್ ರೈ, ಸತೀಶ್ ಎನ್.ಬಂಗೇರ, ರಾಧಾಕೃಷ್ಣ ಶೆಟ್ಟಿ, ಶಂಕರ್ ಶೆಟ್ಟಿ, ದಿವಾಕರ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ವೆಲ್ಫೇರ್ ಸೊಸೈಟಿಯ ಕನ್ನಡ ವೆಲ್ಫೇರ್‍ನ ಉಪಾಧ್ಯಕ್ಷ ಜಯರಾಜ್ ಜೈನ್, ಕೋಶಾಧಿಕಾರಿ ಹರೀಶ್ ಎಂ.ಶೆಟ್ಟಿ, ಜೊತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಶಾಂತÀ ಎನ್.ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಸದಸ್ಯರನೇಕರು ಅತಿಥಿüಗಳನ್ನು ಗೌರವಿಸಿದರು. ಕಾರ್ಯದರ್ಶಿ ಸುಧಾಕರ ಎಲ್ಲೂರು ಧನ್ಯವದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here