Monday 7th, July 2025
canara news

ತುಳುನಾಟಕ ಕಲಾವಿದರ ಒಕ್ಕೂಟದ 15ನೇ ವಾರ್ಷಿಕ ಸಂಭ್ರಮ ಸಾಧಕರಿಗೆ ತೌಳವ ಪ್ರಶಸ್ತಿ ನೀಡಿ ಸನ್ಮಾನ

Published On : 22 Aug 2018   |  Reported By : Rons Bantwal


ಮಂಗಳೂರು : ತುಳುನಾಟಕ ಕಲಾವಿದರ ಒಕ್ಕೂಟದ 15ನೇ ವಾರ್ಷಿಕ ಸಂಭ್ರಮವು, ಮಂಗಳೂರು ಪರಭವನದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ.ಭಂಡಾರಿ ವಹಿಸಿದ್ದರು. ಸಮಾರಂಭವನ್ನು ಮೇಯರ್ ಭಾಸ್ಕರ್ ಕೆ. ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷರಾದ ಲ| ಕಿಶೋರ್ ಡಿ. ಶೆಟ್ಟಿಯವರು ಒಕ್ಕೂಟದ ಕಾರ್ಯ ವೈಖರಿಗಳ ಬಗ್ಗೆ ಪ್ರಸ್ತಾವನೆಯಲ್ಲಿ ವಿವರಿಸಿದರು. ಒಕ್ಕೂಟದ ಕ್ಷೇಮನಿಧಿ ಸಂಚಾಲಕರಾದ ಪ್ರದೀಪ್ ಆಳ್ವ ಕದ್ರಿ ಕ್ಷೇಮನಿಧಿಯ ಬಗ್ಗೆ ವಿವರಿಸಿದರು.

ತುಳುನಾಟಕರಂಗದ ಕೀರ್ತಿಶೇಷ ಕಲಾವಿದರ ‘ ನೆಂಪು’ ಕಾರ್ಯಕ್ರಮದಲ್ಲಿ ನಾಟಕ ರಚನೆಕಾರ ಮಾಧವ ತಿಂಗಳಾಯರು, ಪ್ರಸಾದನ ಕಲಾವಿದ ದಿ. ಕೃಷ್ಣ ನಾಯಕ್ ಪಾಂಡೇಶ್ವರ , ಸಂಗೀತ ನಿರ್ದೇಶಕ ದಿ. ಎಸ್ ವಿಶ್ವನಾಥ ಸೂಟರ್ ಪೇಟೆ, ನಾಟಕಕಾರ, ನಟ, ನಿರ್ದೇಶಕ ದಿ. ರಾಘವ ಎಸ್. ಉಚ್ಚಿಲ್, ನಟ, ಸಂಘಟಕ ದಿ. ಯಶವಂತ ಎನ್. ಸುವರ್ಣ ಬೊಕ್ಕಪಟ್ನ, ಸ್ತ್ರೀ ಪಾತ್ರಧಾರಿ ದಿ. ಯುವರಾಜ ಶೆಟ್ಟಿ- ಇವರನ್ನು ಕುಟುಂಬ ಸದಸ್ಯರಿಂದ ದೀಪ ಬೆಳಗಿಸಿ, ಪುಷ್ಪಾರ್ಚನೆಗೈದು, ಸ್ಮರಿಸಲಾಯಿತು.. 2017- 18ನೇ ಸಾಲಿನ ತೌಳವ ಪ್ರಶಸ್ತಿಯನ್ನು ಎಂ. ವಿಶ್ವನಾಥ ಹಿರಿಯನಟ, ನಾಟಕಕಾರ, ನಿರ್ದೇಶಕ ಇವರಿಗೆ ನೀಡಿ ಪುರಸ್ಕರಿಸಲಾಯಿತು.

ಕಲಾವಿದರಿಗೆ 2017- 18ನೇ ಸಾಲಿನ ಸನ್ಮಾನದಲ್ಲಿ- ನಾಟಕಕಾರ, ನಿರ್ದೇಶಕ ಕೃಷ್ಣಪ್ಪ ಉಪ್ಪೂರು, ನಟ, ನಿರ್ದೇಶಕ ಮಾಧವ ಜಪ್ಪುಪಟ್ನ , ನಟ ರಂಗಕರ್ಮಿ ಸುರೇಂದ್ರ ಬಾಬುಗುಡ್ಡೆ, ಸುಭಾಸ್ ಬಿ. ಧ್ವನಿ ಬೆಳಕು, ವೆಂಕಟೇಶ್ ಸಂಗೀತ ನಿರ್ದೇಶಕ, ಇಂದು ಎಸ್ ಮಂಗಳೂರು ಸ್ತ್ರೀ ಪಾತ್ರಧಾರಿ, ವಿನ್ನಿ ಫೆರ್ನಾಂಡೀಸ್ ರಂಗನಟಿ, ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ರಮಾನಾಥ ಹೆಗ್ಡೆ ಆಡಳಿತ ಮೋಕ್ತೇಸರರು ಮಂಗಳಾದೇವಿ ದೇವಸ್ಥಾನ, ದಿನೇಶ್ ದೇವಾಡಿಗ ಕದ್ರಿ, ಮೋಕ್ತೇಸರರು ಶ್ರೀ ಕ್ಷೇತ್ರ ಕದ್ರಿ, ಪುರುಷೋತ್ತಮ ಭಂಡಾರಿ ಪ್ರಧಾನ ಕಾರ್ಯದರ್ಶಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ರಿ., ಕಿರಣ್ ಜೋಗಿ, ಅಧ್ಯಕ್ಷರು ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ, ಲ| ದಿನಕರ ಸುವರ್ಣ, ಅಧ್ಯಕ್ಷರು, ಲಯನ್ಸ್ ಕ್ಲಬ್ ಮಂಗಳೂರು, ಕೊಡಿಯಾಲ್‍ಬೈಲ್ . ಅಶೋಕ್ ಕುಮಾರ್ ಡಿ. ಕೆ ಕಾರ್ಪೋರೇಟರ್ ಕದ್ರಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಗೋಕುಲ್ ಕದ್ರಿ , ಎ. ಶಿವಾನಂದ ಕರ್ಕೇರ, ವಸಂತ ಜೆ. ಪೂಜಾರಿ, ತಾರಾನಾಥ್ ಶೆಟ್ಟಿ ಬೋಳಾರ್ ಉಪಸ್ಥಿತರಿದ್ದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರ್‍ರವರು ಸ್ವಾಗತಿಸಿದರು. ಒಕ್ಕೂಟದ ಕೋಶಾಧಿಕಾರಿ ಮೋಹನ್ ಕೊಪ್ಪಲ್ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here