Wednesday 14th, May 2025
canara news

ಎಂ.ಎಸ್ ರಾವ್ ಅಹ್ಮದಾಬಾದ್ ಅವರ ಕೃತಿಗಳ ಬಿಡುಗಡೆ

Published On : 25 Aug 2018   |  Reported By : Rons Bantwal


ಸಾಹಿತ್ಯ ನಿರ್ಮಾಣದಿಂದ ಇತಿಹಾಸಗಳ ಉಳಿವು ಸಾಧ್ಯ : ಶಶಿಧರ ಬಿ.ಶೆಟ್ಟಿ

ಮುಂಬಯಿ, ಆ.25: ಗುಜರಾತ್ ರಾಜ್ಯದ ಪೂರ್ವ ರಾಜಧಾನಿ, ಭಾರತ ರಾಷ್ಟ್ರದ ಪ್ರಮುಖ ಕೈಗಾರಿಕಾ ನಗರಗಳಲ್ಲಿ ಒಂದಾದ ಅಹ್ಮದಾಬಾದ್‍ನಲ್ಲಿ ತುಳು-ಕನ್ನಡದ ಕಾಯಕದಲ್ಲಿ ತೊಡಗಿಸಿ ಕೊಂಡಿರುವ ಹಿರಿಯ ಲೇಖಕ, ಸಾಹಿತಿ, ಕಾದಂಬರಿಕಾರ, ಪತ್ರಕರ್ತ, ಗುಜರಾತ್ ವಿದ್ಯಪೀಠ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕ ಎಂ.ಎಸ್.ರಾವ್ ಅವರ ಹದಿಮೂರನೇ ಕೃತಿ `ಗುಜರಾತ್ ಚುನಾವಣೆ, ಲೈವ್ ಕಾಮೆಂಟರಿ'ಯನ್ನು ಗುಜರಾತ್‍ನ ಯುವೋದ್ಯಮಿ, ತುಳು ಸಂಘ ಬರೋಡದ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ (ಕುವೆಟ್ಟು ಗುರುವಾಯನಕೆರೆ) ಹಾಗೂ ಹದಿನಾಲ್ಕನೆ ಕೃತಿ ``Live Commentary Of Gujarat Election' ಯನ್ನು ಜನಪ್ರಿಯ ಸಮಾಜ ಸೇವಕಿ, ಶಶಿ ಕೇಟರಿಂಗ್ ಸರ್ವಿಸ್‍ನ ನಿರ್ದೇಶಕಿ ಪ್ರಮೀಳಾ ಎಸ್.ಶೆಟ್ಟಿ ಅನಾವರಣ ಗೊಳಿಸಿ ಶುಭಾರೈಸಿದರು.

ಇತ್ತೀಚೆಗೆ ಗುಜರಾತ್‍ನ ಬರೋಡಾ ಅಲ್ಕಾಪುರಾ ಇಲ್ಲಿನ ತುಳುಸಂಘ ಬರೋಡ ಇದರ `ತುಳುಚಾವಡಿ' ಸಭಾಂಗಣದಲ್ಲಿ ಆಯೋಜಿಸಿದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ವಾಸು ಪಿ.ಪೂಜಾರಿ, ಸತೀಶ್ ಶೆಟ್ಟಿ, ಡಾ| ಶರ್ಮಿಳಾ ಜೈನ್ ಮತ್ತು ಬರೋಡದ ಗಣ್ಯರು ಉಪಸ್ಥಿತರಿದ್ದು, ಏಕಕಾಲಕ್ಕೆ ಅವಳಿ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

`ಸಾಹಿತ್ಯ ನಿರ್ಮಾಣದಿಂದ ನಮ್ಮ ಇತಿಹಾಸಗಳು ಪ್ರಕಾಶಮಾನವಾಗಿ ಉಳಿಯುವುದು. ಕೃತಿಗಳು ಭವಿಷ್ಯತ್ತಿನ ಪೀಳಿಗೆಗೆ ವರದಾನ ಆಗಲಿವೆ. ಯಾವುದೇ ಕೃತಿಗಳು ಆಗುಹೋಗುಗಳ ಸಂದೇಶ ಸಾರುವ ಶಕ್ತಿಯಾಗಿವೆ. ಆದುದರಿಂದ ನಾವು ಬರಹಗಾರರಿಗೆ ಪೆÇ್ರೀತ್ಸಹಿಸಿ ಮುಂದಿನ ಪೀಳಿಗೆಗೆ ಇದನ್ನು ವಿಸ್ತಾರಿಸಬೇಕು. ಗುಜರಾತಿನಲ್ಲಿ ಮೊದಲ ಕನ್ನಡ ಕಾದಂಬರಿಯನ್ನು ಬರೆದು, ಮುದ್ರಿಸಿ, ಬಿಡುಗಡೆ ಮಾಡಿ ದಾಖಲೆ ಸೃಷ್ಟಿಸಿದ ಎಂ.ಎಸ್.ರಾವ್ ಈವರೆಗೆ 14 ಕೃತಿ ಹಗೂ 3000ಕ್ಕೂ ಮಿಕ್ಕಿ ಲೇಖನಗಳನ್ನು ಬರೆದ ಗುಜರಾತಿನ ಏಕೈಕ ಲೇಖಕ, ನರೇಂದ್ರ ಮೋದಿ ಅವರ ಬಗ್ಗೆ ಐದು ಪುಸ್ತಕ ಬರೆದ ಸಾರ್ಥಕತೆ ರಾವ್ ಅವರು ಮೋದಿ ಮುಖ್ಯಮಂತ್ರಿ ಆದ ಹೊಸದರಲ್ಲಿ ಪ್ರಥಮ ಕನ್ನಡ ಸಂದರ್ಶನ ನೀಡಿದ್ದು, ಪ್ರಧಾನ ಮಂತ್ರಿ ಬಳಿಕವೂ ಮೊದಲ ಸಂದರ್ಶನ ನೀಡಿದ್ದರು. ಎಂ.ಎಸ್.ರಾವ್ ಸಾಧನೆಗಳ ಪಟ್ಟಿ ದೊಡ್ಡದಿದೆ. ಅದು ಇನ್ನೂ ಬೆಳೆಯುತ್ತಾ ಹೋಗಲಿ. ಅವರ ಪ್ರತಿಭೆಯ ಲಾಭ ಕನ್ನಡಿಗರಿಗೆ ನಿರಂತರವಾಗಿ ಲಭಿಸಲಿ ಎಂದು ಆಶಿಸುತ್ತೇನೆ' ಎಂದು ಶಶಿಧರ್ ಶೆಟ್ಟಿ ನುಡಿದರು.

ಕೃತಿಕರ್ತ ಎಂ.ಎಸ್.ರಾವ್ ತಮ್ಮ ಸಾಹಿತಿಕ ಜೀವನವನ್ನು ಮೆಲುಕು ಹಾಕಿ ನನ್ನ ಎಲ್ಲಾ ಕೃತಿಗಳ ರಚನೆಗೆ ಬೆನ್ನೆಲುಬುವಾಗಿ ನಿಂತ ಸಾಹಿತ್ಯಾಭಿಮಾನಿಗಳಿಗೆ ಮತ್ತು ನನ್ನ ಸರಸ್ವತಿ ಸೇವಾ ಯಶಸ್ವಿಗೆ ಪ್ರೇರಣೆ ನೀಡಿದವರನ್ನು ಸ್ಮರಿಸಿದರು. ಹಾಗೂ ಸಾಹಿತ್ಯ ಲೋಕದ ಅನನ್ಯ ಸೇವೆಗೈಯಲು ಪ್ರೇರಕರಾದ ಎಲ್ಲರನ್ನೂ ಅಭಿವಂದಿಸಿ ತನ್ನ ಕೃತಿಗಳ ಬಗ್ಗೆ ಬಣ್ಣಿಸಿದರು. ದಯಾನಂದ್ ಸಾಲ್ಯಾನ್ ಕಾರ್ಯಕ್ರಮ ನಿರೋಪಿಸಿ, ಸರಿತಾ ಪೂಜಾರಿ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here