Wednesday 14th, May 2025
canara news

73ನೇ ವಾರ್ಷಿಕೋತ್ಸವ ಆಚರಿಸಿದ ಯಂಗ್‍ಮೆನ್ಸ್ ಎಜ್ಯುಕೇಶನ್ ಸೊಸೈಟಿ ಮುಂಬಯಿ

Published On : 27 Aug 2018   |  Reported By : Rons Bantwal


ಯಂಗ್‍ಮೆನ್ಸ್‍ನ ಕನ್ನಡಾಭಿಮಾನ ಐತಿಹಾಸಿಕವಾದುದು : ಜಯರಾಮ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.27: ಸ್ವಾತ್ರಂತ್ರ್ಯ ಪೂರ್ವದಲ್ಲೇ ಸ್ಥಾಪಿತ ಈ ಸೊಸೈಟಿಯ ಸ್ಥಾಪಕರ ದೂರದೃಷ್ಠಿಯನ್ನು ಮೊದಲಾಗಿ ಅಭಿವಂದಿಸಬೇಕು. ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದು ಈ ವರೇಗೆ ಮುನ್ನಡೆಸಿದ ಮಹಾನ್ ವ್ಯಕ್ತಿಗಳ ಸಾಧನೆ ಅನುಪಮ ಆದುದು. ಸಂಸ್ಥೆಯನ್ನು ಕ್ರಮಬದ್ಧವಾಗಿ ಮರ್ಯಾದೆ, ಶಿಸ್ತುಗಳಿಂದ ಮುನ್ನಡೆಸಿ ಸಾವಿರಾರು ಜನರ ಪಾಲಿನ ಆಶಾಕಿರಣವಾದ ಈ ಸಂಸ್ಥೆಯ ಸೇವೆ ಅಭಿನಂದನೀಯ. ಅಂದು ಏನೂ ಸೌಲಭ್ಯಗಳಿಲ್ಲದ ದಿನಗಳಲ್ಲಿ ಒಂದು ಸಂಸ್ಥೆಯನ್ನು ಕಟ್ಟಿ ಮುನ್ನಡೆಸಲು ಕಷ್ಟವಿತ್ತು ಅದರೂ ಕಲಿಸುವ ಮತ್ತು ಕಲಿಯುವ ಉಮೇದುವಿತ್ತು. ಇಂದು ಎಲ್ಲಾ ಸೌಲತ್ತುಗಳು ಇದ್ದರೂ ಕಲಿಕೆಯ ಬೇಧಭಾವ, ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಳ್ಳುವ ಧಾವಂತದಲ್ಲಿ ಎಲ್ಲವನ್ನೂ ಮರೆಯುತ್ತಿರುವುದು ಶೋಚನೀಯ. ಹೊರನಾಡ ಮುಂಬಯಿಯಲ್ಲಾದರೂ ಕನ್ನಡ ಉಳಿಯುತ್ತಿದ್ದರೂ ಕರುನಾಡಲ್ಲೇ ಕನ್ನಡ ಮಾಯವಾಗುತ್ತದೆ ಎಂದರೂ ತಪ್ಪಾಗಲಾರದು.ಆದರೆ ಹೊರನಾಡಿನಲ್ಲಿ ಕನ್ನಡತನ ಅರಳಿಸಿ, ಕನ್ನಡದ ಸುವಾಸನೆಯನ್ನು ಎಲ್ಲೆಡೆ ಪಸರಿಸಿದ ಈ ಸಂಸ್ಥೆಯ ಕನ್ನಡಾಭಿಮಾನ ನಿಜಕ್ಕೂ ಐತಿಹಾಸಿಕವಾದುದು ಎಂದು ಅಜಂತಾ ಕೇಟರರ್ಸ್, ಒರಿಯೆಂಟಲ್ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಜಯರಾಮ ಬಿ.ಶೆಟ್ಟಿ ಇನ್ನಾ (ಅಜಂತಾ) ನುಡಿದರು.

 

ಮಹಾನಗರದಲ್ಲಿ ಸುಮಾರು ಏಳುವರೆ ದಶಕಗಳಿಂದ ಸೇವಾನಿರತ ತುಳುಕನ್ನಡಿಗರ ಸಂಚಾಲಕತ್ವದ ಶಿಕ್ಷಣ ಸಂಸ್ಥೆ ಯಂಗ್‍ಮೆನ್ಸ್ ಎಜ್ಯುಕೇಶನ್ ಸೊಸೈಟಿ ತನ್ನ 73ನೇ ವಾರ್ಷಿಕೋತ್ಸವವನ್ನು ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಸಂಭ್ರಮಿಸಿದ್ದು ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ಕಾರ್ಯಕ್ರಮ ಉದ್ಘಾಟಿಸಿ ಜಯರಾಮ ಶೆಟ್ಟಿ ಮಾತನಾಡಿದರು.

ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಎನ್.ಪಿ ಸುವರ್ಣ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಗೌರವ ಅತಿಥಿüಗ ಳಾಗಿ ಕ್ಲಾಸಿಕ್ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಸುರೇಶ್ ಆರ್.ಕಾಂಚನ್ ಮತ್ತು ರಿಸರ್ವೇಶನ್ ಸಿನೆಮಾದ ನಿರ್ಮಾಪಕ ಯಾಕುಬ್ ಖಾದರ್ ಗುಲ್ವಾಡಿ ಉಪಸ್ಥಿತರಿದ್ದು ಕನ್ನಡ ಶಾಲಾ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಶುಭಾರೈಸಿದರು. ಜಯರಾಮ ಶೆಟ್ಟಿ ಅವರು ಕಾದಂಬರಿಕಾರ ಪ್ರದೀಪ್‍ಕುಮಾರ್ ಮಂಗಳೂರು ರಚಿತ, ಎನ್.ಪಿ ಸುವರ್ಣ ಸಂಪಾದಕೀಯದ ಧಾರ್ಮಿಕ ದರ್ಪಣ ಕೃತಿ ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದಲ್ಲಿ ರಷ್ಯಾದಲ್ಲಿ ಇತ್ತೀಚೆಗೆ `ಏಷಿಯಾ ಪೆಸಿಫಿಕ್ ಅಚೀವರ್ಸ್ ಅವಾರ್ಡ್' ಪುರಸ್ಕಾರಕ್ಕೆ ಪಾತ್ರರಾದ ಎನ್.ಪಿ ಸುವರ್ಣ ಮತ್ತು ಪ್ರಭಾ ಎನ್.ಸುವರ್ಣ ದಂಪತಿ, ಯಾಕುಬ್ ಖಾದರ್ ಗುಲ್ವಾಡಿ (ಪತ್ನಿ ಫರಾ, ಮಕ್ಕಳಾದ ಫರೀಮಾ ಮತ್ತು ಫಾತಿಮಾ ಅವರನ್ನೊಳಗೊಂಡು), ಪ್ರದೀಪ್‍ಕುಮಾರ್ ಮಂಗಳೂರು ಅವರನ್ನು ಯಂಗ್‍ಮೆನ್ಸ್ ಸಂಸ್ಥೆ ಪರವಾಗಿ, ಬಿ.ಕೆ ಮಾಧವ ರಾವ್ ಅವರನ್ನು ಕಥಾಬಿಂದು ಪ್ರಕಾಶನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮುಂಬಯಿ ಮಹಾನಗರದಲ್ಲಿನ ಅದೆಷ್ಟೋ ಶ್ರೀಮಂತರೆಣಿಸಿದ ಗಣ್ಯರು ಯಂಗ್‍ಮೆನ್ಸ್ ಸೊಸೈಟಿಯಲ್ಲೇ ಕಲಿತವ ರಾಗಿದ್ದಾರೆ. ಆದರೆ ಇಂದು ಅವರ್ಯಾರೂ ಈಗ ಕಾಣುತ್ತಿಲ್ಲ ಕಾರಣ ಕೋಟಿಗಟ್ಟಲೆ ಹಣ ಆಸ್ತಿ ಇರುತ್ತಿದ್ದರೆ ಎಲ್ಲರೂ ಹುದ್ದೆಯನ್ನಲಂಕರಿಸಲು ಬರುತ್ತಿದ್ದರು. ಆದರೂ ವಿದ್ಯಾರ್ಜನೆಯೊಂದಿಗೆÀ ಈ ಸಂಸ್ಥೆ ಮುನ್ನಡೆಸಿ ಉಳಿಸಬೇಕೆಂಬ ಪ್ರಸಕ್ತ ಪದಾಧಿಕಗಳ ಆಶಯವೇ ಅವರ ದೊಡ್ಡತನ ಆಗಿದೆ. ಗೌಜಿಗದ್ದಲ, ಸಂಭ್ರಮ, ಆಡಂಬರ ಇರುತ್ತಿದ್ದರೆ ಎಲ್ಲರೂ ಇರ್ತಾರೆÉ. ಸುಮಾರು 73 ವರ್ಷಗಳಿಂದ ಈ ಸಂಸ್ಥೆ ಸಾವಿರಾರು ಮಂದಿಗೆ ಶೈಕ್ಷಣಿಕ ನೆರಳು ಕೊಟ್ಟು ಹಣ್ಣು ಹಂಪಲು ನೀಡಿದೆ. ಆದರೆ ಇದನ್ನು ಫಲಾನುಭವಿಸಿದವರು ಮರೆತಿರುವುದು ವಿಪರ್ಯಾಸವೇ ಸರಿ. ಆದರೂ ಈ ಸಂಸ್ಥೆಯ ಹೆಸರಿನಂತೆ ಯಂಗ್‍ಮೆನ್ಸ್ ಎಂದೂ ಓಲ್ಡ್‍ಮೆನ್ಸ್ ಆಗದಿರಲಿ ಎಂದÀು ಸುರೇಶ್ ಕಾಂಚನ್ ಆಶಯ ವ್ಯಕ್ತ ಪಡಿಸಿದರು.

ನಿಷ್ಠಾವಂತ ಶಿಕ್ಷಣಪ್ರೇಮಿಗಳ ಸಹಯೋಗದೊಂದಿಗೆ ಈ ಸಂಸ್ಥೆಯನ್ನು ಈ ಮಟ್ಟಿಗೆ ಬೆಳೆಸಿ ಉಳಿಸಿದ್ದೇವೆ. ಆದರೆ ಜಾಗತೀಕರಣದ ಬದಲಾವಣೆಯಿಂದ ಕನ್ನಡದ ವ್ಯಾಮೋಹ ಮರೆಯಾಗುವ ಕಾಲಘಟ್ಟದಲ್ಲಿ ಬದಲಾವಣೆಗಳು ಸರ್ವೇ ಸಾಮಾನ್ಯ. ಅದಕ್ಕೆ ತಕ್ಕಂತೆ ಸಂಸ್ಥೆಗಳೂ ಬದಲಾಗುವುದು ಅನೀವಾರ್ಯ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಎನ್.ಪಿ ಸುವರ್ಣ ತಿಳಿಸಿದರು.

ಗಣೇಶ್ ಶ್ರೀಯಾನ್, ಎನ್.ಹೆಚ್ ಬಾಗ್ವಾಡಿ, ರಾಜು ಶ್ರೀಯಾನ್, ಡಾ| ರವಿರಾಜ್ ಸುವರ್ಣ ವಿೂರಾರೋಡ್, ಸದಾನಂದ್ ಅಂಚನ್ ಥಾಣೆ, ಓಂದಾಸ್ ಕಣ್ಣಂಗಾರ್, ಸುಧಾಕರ್ ಸಿ.ಪೂಜಾರಿ, ಕರುಣಾಕರ್ ಹೆಜ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಭಾ ಎನ್.ಸುವರ್ಣ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ಆನಂದ ಎ.ಶೆಟ್ಟಿ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಪಿ.ಎನ್ ಶೆಟ್ಟಿಗಾರ್ ಮತ್ತು ಚಿತ್ರಾಪು ಕೆ.ಎಂ ಕೋಟ್ಯಾನ್ ಸನ್ಮಾನಿತರು, ಅತಿಥಿüಗಳನ್ನು ಪರಿಚಯಿಸಿ ದರು. ಗೌರವ ಕೋಶಾಧಿಕಾರಿ ಶೇಖರ್ ಎನ್.ಸುವರ್ಣ ಪ್ರತಿಭಾ ಪುರಸ್ಕೃತರ ಯಾದಿ ವಾಚಿಸಿದರು. ವಸಂತ್ ಎನ್.ಸುವರ್ಣ ಡೊಂಬಿವಿಲಿ ಕಾರ್ಯಕ್ರಮ ನಿರೂಪಿಸಿ ಕೃತಜ್ಞತೆ ಸಮರ್ಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಿಖಿಲ್ ಮಂಜೂ ನಿರ್ದೇಶನ ಮತ್ತು ನಟನೆಯ, ಯಾಕುಬ್ ಖಾದರ್ ಗುಲ್ವಾಡಿ ನಿರ್ಮಾಪಕತ್ವದ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ `ರಿಸರ್ವೇಶನ್' ಸಿನೆಮಾ ಪ್ರದರ್ಶಿಸಲ್ಪಟ್ಟಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here