`ಇಂಟರ್‍ನೇಶನಲ್ ಮ್ಯಾನ್ ಆಫ್ ದ ಈಯರ್' ಪ್ರಶಸ್ತಿಗೆ ಶಂಕರ್ ಶೆಟ್ಟಿ ವಿರಾರ್-ಹರೀಶ್ ಎನ್.ಶೆಟ್ಟಿ-ಚಂದ್ರಶೇಖರ ಬೆಳ್ಚಡ ಆಯ್ಕೆ
ಮುಂಬಯಿ, ಆ.29: ಗ್ಲೋಬಲ್ ಪೀಸ್ ಫೌಂಡೇಶನ್ ಸಂಸ್ಥೆಯು ಇಂಟರ್‍ನೇಶನಲ್ ಕಲ್ಚರಲ್ ಫೆಸ್ಟ್ (ಐಸಿಎಫ್) ಜೊತೆಗೂಡಿ ಇದೇ ಸೆ.07ರ ಶುಕ್ರವಾರ ಸಂಜೆ ಅಮೇರಿಕಾ ಅಲ್ಲಿನ ವಾಷಿಂಟನ್ ಡಿಸಿ ಇಲ್ಲಿ ಆಯೋಜಿಸಿರುವ 18ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಮತ್ತು ವಾರ್ಷಿಕ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಾರತ ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿನ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಗಳ ಧುರೀರಾದ ವಿೂರಾ-ಡಹಾಣು ಬಂಟ್ಸ್ ಸಂಸ್ಥೆಯ ಗೌರವಾಧ್ಯಕ್ಷ, ರೈಲ್ವೇ ಯಾತ್ರಿ ಸಂಘ ಮುಂಬಯಿ ಅಧ್ಯಕ್ಷ ಶಂಕರ್ ಬಿ.ಶೆಟ್ಟಿ ವಿರಾರ್, ಮಲಾಡ್ ಕನ್ನಡ ಸಂಘ ಇದರ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ ಮತ್ತು ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ಆಯ್ಕೆ ಗಿದ್ದಾರೆ. ಈ ಮೂವರೂ ಗಣ್ಯರಿಗೂ `ಇಂಟರ್‍ನೇಶನಲ್ ಮ್ಯಾನ್ ಆಫ್ ದ ಈಯರ್' ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು ಎಂದು ಜಿಪಿಎಫ್ ಕಾರ್ಯದರ್ಶಿ ಸುಪ್ರಿಯಾ ಸವಲ್ಗ್ ತಂಝಾನಿಯಾ ತಿಳಿಸಿದ್ದಾರೆ.
ಶಂಕರ್ ಬಿ.ಶೆಟ್ಟಿ ವಿರಾರ್, ರತಿ ಶಂಕರ್ ಶೆಟ್ಟಿ, ಹರೀಶ್ ಎನ್.ಶೆಟ್ಟಿ, ವನಿತಾ ಹರೀಶ್ ಶೆಟ್ಟಿ, ಚಂದ್ರಶೇಖರ ಆರ್. ಬೆಳ್ಚಡ ಮತ್ತು ದಿವಿಜಾ ಚಂದ್ರಶೇಖರ್ ದಂಪತಿಗಳು ಅಕ್ಕ ಸಮ್ಮೇಳನದಲ್ಲೂ ಪಾಲ್ಗೊಳ್ಳಲಿದ್ದಾರೆ. ಅಸೋಸಿಯೇಶನ್ ಆಫ್ ಕನ್ನಡ ಕೂಟ'ಸ್ ಆಫ್ ಅಮೇರಿಕಾ ಸಂಸ್ಥೆಯು ಉತ್ತರ ಟೆಕ್ಸಾಸ್ ಮಲ್ಲಿಗೆ ಕನ್ನಡ ಕೂಟ ಇದರ ಆಶ್ರಯದಲ್ಲಿ ಅಕ್ಕ ಸಂಸ್ಥೆಯು ಇದೇ ಆಗಸ್ಟ್.31 ನಿಂದ ಸೆ.02ರ ಮೂರು ದಿನಗÀಳಲ್ಲಿ ಅಮೆರಿಕದ ಡಾಲಸ್ ನಗರದ ಶೆರಟಾನ್ ಸಮಾವೇಶ ಸಭಾಗೃಹದಲ್ಲಿ ಹತ್ತನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಿದ್ದು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅನೇಕ ಮಂತ್ರಿಗಳೂ ಸಮಾರಂಭದಲ್ಲಿ ಭಾಗವಹಿಸಲಿರುವ ಅಕ್ಕ ಕನ್ನಡ ಸಮ್ಮೇಳನದಲ್ಲೂ ಅತಿಥಿü ಆಹ್ವಾನಿರಾಗಿ ಭಾಗವಹಿಸಲಿದ್ದಾರೆ.
ಈ ಬಾರಿ ದಶವಾರ್ಷಿಕ ಅಕ್ಕ ವಿಶ್ವ ಕನ್ನಡ 2018 ನಡೆಯಲಿದ್ದು, ಈ ಹಿಂದೆ ನಡೆದ ಎಲ್ಲ ಸಮ್ಮೇಳನಗಳಿಗಿಂತಲೂ ಈ ಬಾರಿಯ ಅಕ್ಕ ಸಮ್ಮೇಳನ ಹಲವು ವಿಶೇಷತೆಯಿಂದ ಕೂಡಿದೆ. ಸಮ್ಮೇಳನದಲ್ಲಿ ವಿಶ್ವದಾದ್ಯಂತದ ಸಾವಿರಾರು ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಅಕ್ಕ ಸಮಿತಿ ಕಾರ್ಯಾಧ್ಯಕ್ಷ ಅಮರ್‍ನಾಥ್ ಗೌಡ ಮತ್ತು ಅಕ್ಕ ಸಂಸ್ಥೆಯ ಅಧ್ಯಕ್ಷ ಶಿವಮೂರ್ತಿ ಕೀಲರ ತಿಳಿಸಿದ್ದಾರೆ.
ಶಂಕರ್ ಬಿ.ಶೆಟ್ಟಿ ವಿರಾರ್
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಮೂಲ್ಕಿ ಸನಿಹದ ಬಳ್ಕುಂಜೆ ಗ್ರಾಮದ ಚೆನ್ನಯಬೆನ್ನಿ ಅಲ್ಲಿನ `ನೇತ್ರ ನಿವಾಸ'ದ ಭೋಜಾ ಶೆಟ್ಟಿ ಮತ್ತು ನೇತ್ರಾವತಿ ಬಿ.ಶೆಟ್ಟಿ ಸುಪುತ್ರರೇ ಶಂಕರ್ ಬಿ.ಶೆಟ್ಟಿ. ಎಲ್ಲರಂತೆ ತಾನೂ ಎಳೆಯ ವಯಸ್ಸಿನಲ್ಲೇ ಹೊಟ್ಟೆಪಾಡನ್ನು ಹರಸಿ ಮುಂಬಯಿಗೆ ಬಂದವರು. ಬಾಲಕಾರ್ಮಿಕನಾಗಿ ದುಡಿದು ಕ್ರಮೇಣ ಹೊಟೆÉೀಲು ಮಾಲಿಕರಾಗಿ ಬೆಳೆದವರು. ಓರ್ವ ಯಶಸ್ವೀ ಉದ್ಯಮಿ ಆಗಿ ಸಾಧಕರೆಣಿಸಿದವರು. ಎಳೆಯ ವಯಸ್ಸಿನಲ್ಲೇ ತ್ಯಾಗಮಯ ಸಾಹಸ, ಶ್ರದ್ಧಾ ಬದುಕÀು ರೂಪಿಸಿ ಸಾಧನೆಯ ಮಜಲುಗಳನ್ನು ದಾಟಿ ತವರೂರು ಮತ್ತು ಕರ್ಮಭೂಮಿ ಮಹಾರಾಷ್ಟ್ರದ ನೆಲೆಯಲ್ಲಿ ಯುವಶಕ್ತಿ ವರ್ಜಸ್ಸನ್ನು ಸಾಧನಾಶೀಲರಾಗಿ ವಿನಿಯೋಗಿಸಿದ ಓರ್ವ ಅಸಾಧಾರಣ ಸಾಧಕರು. ಸಾಮಾಜಿಕ ಕಳಕಳಿ, ಅನನ್ಯ ಶ್ರವ್ಮಜೀವಿಯಾಗಿದ್ದು ದಕ್ಷ ನಾಯಕತ್ವಕ್ಕೆ ಸದಾ ಎತ್ತಿದಕೈ ಇವರದ್ದಾಗಿದೆ. ತನ್ನ ಸೇವಾತ್ಮಕ ಮನೋಭಾವದಿಂದ ಕಾರ್ಯಪ್ರವೃತ್ತರಾಗಿ ಹಲವಾರು ಸಂಘ-ಸಂಸ್ಥೆಗಳ ಚುಕ್ಕಾಣಿ ಹಿಡಿದು ಸಂಸ್ಥೆಗಳನ್ನು ಮುನ್ನಡೆಸಿದ ಹಿರಿಮೆ ಇವರದ್ದು. ಸದಾ ಸೇವಾ ಬಾಂಧವ್ಯದ ಬೆಸುಗೆಯಲ್ಲಿ ತುಳು ಕನ್ನಡಿಗ, ಮರಾಠಿಗರನ್ನು ಒಗ್ಗೂಡಿಸಿ ಯುವ ಜನಾಂಗಕ್ಕೆ ಆದರನೀಯರೆಣಿಸಿದ ಇವರು ಜನಸಾಮಾನ್ಯರನ್ನೂ ಜನಮಾನ್ಯರಾಗಿಸಿ ಎಲ್ಲರನ್ನೂ ಬಂಧುಗಳಾಗಿಸಿ, ಸ್ವಪರಿವಾರ ಸದಸ್ಯರಂತೆ ಕಾಣುವ ಸದ್ಗುಣವಂತರು.
ಬೃಹನ್ಮುಂಬಯಿನ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಗಳಲ್ಲಿ ವಿವಿಧ ಪದಗಳನ್ನು ಅಲಂಕರಿಸಿ ದಕ್ಷತೆಯ ಸೇವೆಗೈದಿರುವರು. ಇವರು ವಸಾಯಿ ತಾಲೂಕು ಹೊಟೇಲ್ ಅಸೋಸಿಯೇಶನ್‍ನ ಅಧ್ಯಕ್ಷರಾಗಿ, ನಲ್ಲಸೋಫರಾ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಫೆಡರೇಶನ್ ಆಫ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್‍ಸ್ ಮಹಾರಾಷ್ಟ್ರ ಇದರ ಉಪಾಧ್ಯಕ್ಷರಾಗಿ, ಮಹಾರಾಷ್ಟ್ರ ರಾಜ್ಯ ಸರಕಾರದ ವಿಶೇಷ ಕಾರ್ಯನಿರ್ವಹಣಾ ಅಧಿಕಾರಿ (ಎಸ್‍ಸಿಒ), ವಿೂರಾ-ಡಹಾಣು ಬಂಟ್ಸ್ ಸಂಸ್ಥೆಯ ಗೌರವಾಧ್ಯಕ್ಷ, ರೈಲ್ವೇ ಯಾತ್ರಿ ಸಂಘ ಮುಂಬಯಿ ಅಧ್ಯಕ್ಷರಾಗಿ ತುಳುಕನ್ನಡಿಗರ ಸೇವೆಯಲ್ಲಿ ಅವಿರತವಾಗಿ ಶ್ರಮಿಸಿದ ಪ್ರಭಾವಿ, ಧೀಮಂತ ನಾಯಕರಿವರು.
ವಿೂರಾರೋಡ್ ಅಲ್ಲಿನ ಉಡುಪಿ ಶ್ರೀ ಪಲಿಮಾರು ಇದರ ಮುಂಬಯಿ ಶಾಖೆಯ ಬಾಲಾಜಿ ದೇವಸ್ಥಾನದ ಮುಂದಾಳುವಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಸೇವೆಯಲ್ಲೂ ಸದಾ ಮುಂಚೂಣಿಯಲ್ಲಿರುವ ಶಂಕರ್ ಶೆಟ್ಟಿ ಹತ್ತಾರು ದೈವ-ದೇವಸ್ಥಾನಗಳ ಜೀರ್ಣೋದ್ಧಾರಗಳಿಗೆ ಬೆನ್ನೆಲುಬುವಾಗಿ ನಿಂತವರು. ಅನನ್ಯ ಸಂಸ್ಕೃತಿ, ಶಿಕ್ಷಣಪ್ರೇಮಿ ಆಗಿರುವ ಶಂಕರ್ ಓರ್ವ ಹೃದಯಶೀಲ ಸದ್ಗುಣವಂತರು. ಅಸಮಾನ್ಯ ಸಮಾಜ ಸೇವಕರೆಂದೇ ಗುರುತಿಸಿ ಕೊಂಡ ಕೊಡುಗೈದಾನಿ ಆಗಿರುವ ಇವರು ಸಾಮಾಜಿಕ ಕಳಕಳಿಯುಳ್ಳವರಾಗಿದ್ದು ಜಾತಿ, ಮತ ಧರ್ಮವನ್ನು ಪರಿಗಣಿಸದೆ ತನ್ನೂರ ಸುಮಾರು ನೂರಾರು ಬಡವರಿಗೆ (ವಿದ್ಯಾಥಿರ್ü ವೇತನ, ವಿಧವಾ ವಿದ್ಯಾಥಿರ್ü ವೇತನ, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಪಿಂಚಣಿ) ಪ್ರತೀ ತಿಂಗಳಿಗೂ ಸಹಾಯಧನ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ವಿರಾರ್ ಶಂಕರಣ್ಣ ಎಂದೇ ಜನಜನಿತರಾಗಿರುವ ಇವರಿಗೆ ನೂರಾರು ಸನ್ಮಾನ, ಗೌರವಗಳು ಸಂದಿವೆ. ಕಲ್ವಾ ಫ್ರೆಂಡ್ಸ್ ಮುಂಬಯಿ ಏರ್ಪಡಿಸಿದ್ದ ಎಸ್‍ಎಂಎಸ್ ಮೂಲಕ `ಮುಂಬಯಿನ ಜನಪ್ರಿಯ ತುಳು ಕನ್ನಡಿಗ ವ್ಯಕ್ತಿ' ಎಂಬ ಕೀರ್ತಿಗೆ ಪಾತ್ರರಾಗಿ ಸನ್ಮಾನಿಸಲ್ಪಟ್ಟವರು. ದ ಪೀಪಲ್'ಸ್ ಆರ್ಟ್ ಸೆಂಟರ್ (ರಿ.) ಮುಂಬಯಿ ಇದರ ಆರನೇ `ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ-2018' ಕ್ಕೆ ಭಾಜನರಾದವರು.
ಪತ್ನಿ ರತಿ ಶಂಕರ್ ಶೆಟ್ಟಿ, ಮಕ್ಕಳಾದ ಚೇತನ್, ಚರಣ್ ಮತ್ತು ದೇವಿಕಾ (ಮೂವರೂ ವಿವಾಹಿತರು) ಅವರ ಚೊಕ್ಕ ಸಂಸಾರರೊಂದಿಗೆ ಬೊರಿವಿಲಿ ಪಶ್ಚಿಮದ ಗೋರಾಯಿನಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ವಾಸವಾಗಿದ್ದಾರೆ. ಹೊರನಾಡ ಅಪ್ರತಿಮ ಸಮಾಜಸೇವಕ ಆಗಿದ್ದು, ತಮ್ಮ ಗುರುತರ ಸೇವೆಯನ್ನು ಮನಗಂಡು ತಮ್ಮ ದುಡಿಮೆಯ ಸಾಹಸಗಾಥೆಂಯೊಂದಿಗೆ ಜನಮಾನಸದಲ್ಲಿ ನೆಲೆಯಾಗಿದ್ದಾರೆ.
ಹರೀಶ್ ಎನ್.ಶೆಟ್ಟಿ (ಅಧ್ಯಕ್ಷರು: ಮಲಾಡ್ ಕನ್ನಡ ಸಂಘ (ರಿ.)
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪ್ರತಿಷ್ಠಿತ ಮನೆತನ ಎಕ್ಕಾರು ಬೆಳ್ಳಿಮಾರು ಗುಪ್ತ ಶ್ರೀ ನಾರಾಯಣ ಮಲ್ಲಿ ಹಾಗೂ ಕಡಂದಲೆ ತುಲಮೊಗರು ಮನೆ ಶ್ರೀಮತಿ ದೇಜಮ್ಮ ಶೆಟ್ತಿ ಅವರ ದ್ವಿತೀಯ ಪುತ್ರನಾಗಿ 06.05.1955 ರಂದು ಜನಿಸಿದವರೇ ಹರೀಶ್ ಎನ್.ಶೆಟ್ಟಿ.
ಕಡಂದಲೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು ನಂತರ ಮುಂಡ್ಕೂರು ಅಲ್ಲಿನ ವಿದ್ಯಾವರ್ಧಕ ಹೈಸ್ಕೂಲ್ ಎಸ್‍ಎಸ್‍ಎಲ್‍ಸಿ ವಿದ್ಯಾಭ್ಯಾಸ ಗಳಿಸಿಕೊಂಡು ಸೈಂಟ್ ಜೋಸೆಫ್ ಜೂನಿಯರ್ ಕಾಲೇಜ್ ಬಜ್ಪೆ ಇಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಣ ಪಡೆದರು. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಬಿ.ಎ ಪದವಿ ಪೂರೈಸಿ ತದನಂತರ ಇಲ್ಲೇ ಕಾನೂನು ಪದವಿಧರರಾದರು. ವಿದ್ಯಾಭ್ಯಾಸದಲ್ಲಿ ಸದಾ ಮುಂದಿದ್ದ ಇವರು ಶಾಲಾ ಕಾಲೇಜು ವ್ಯಾಸಂಗದ ಸಮಯದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಯಕ್ಷಗಾನ, ನಾಟಕ್ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಹರೀಶ್ ಅಂತರ್ ಕಾಲೇಜು ಬಾಸ್ಕೇಟ್‍ಬಾಲ್ ಟೂರ್ನಮೆಂಟ್‍ನಲ್ಲಿ ಎಂಜಿಎಂ ಕಾಲೇಜ್‍ನ್ನು ಪ್ರತಿನಿಧಿಸಿ ಅತ್ತ್ಯುತ್ತಮ ಕ್ರೀಡಾಪಟು. ಇಂಟರ್ ಯೂನಿವರ್ಸಿಟಿ ನಾಟಕ ಸ್ಪರ್ದೆಯಲ್ಲೂ ಉಡುಪಿ ಲಾ ಕಾಲೇಜನ್ನು ಪ್ರತಿನಿಧಿಸಿ ಡಾ| ಕೊಪ್ಪಿಕಾರ್ ಫಲಕ ಗೆದ್ದುಕೊಂಡು ಕಾಲೇಜಿಗೆ ಕೀರ್ತಿ ತಂದೊದಗಿಸಿದ್ದ ಅಪ್ರತಿಮ ಕಲಾವಿದ.
ತಮ್ಮ ಹುಟ್ಟೂರು ಕಡಂದಲೆಯಲ್ಲಿ ಸಾರ್ವಜನಿಕ ಗನೇಶೋತ್ಸವ ಸಮಿತಿಯನ್ನು ಸಂಘಟಿಸಿ ಅಸರ ಪ್ರಥಮ ಅಧ್ಯಕ್ಷರಾಗಿ ತಮ್ಮ ಸಂಘಟನಾ ಸಾಮಥ್ರ್ಯವನ್ನು ಮರೆದವರು. ಕಳೆದ ಮೂವತ್ತೇಳು ವರ್ಷಗಳಿಂದ ಈ ಗಣೇಶೋತ್ಸವ ಸಮಿತಿಯು ಅತಿ ಸಂಭ್ರಮದಿಂದ ಗಣೇಶೋತ್ಸವವನ್ನು ಅನೇಕ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಾ ಬಂದಿರುವುದಕ್ಕೆ ಹೆಮ್ಮೆ ಪಡುತ್ತಾರೆ.
ಜೀವನೋಪಾಯಕ್ಕಾಗಿ ಮುಂಬಯ್ ಮಹಾನಗರವನ್ನು ಆರಿಸಿದ ಇವರು ತಮ್ಮ ಅಗ್ರಜ ಜಯರಾಂ ಎನ್ ಶೆಟ್ಟಿಯವರ ಹೋಟೆಲ್ ಉದ್ಯಮದೊಂದಿಗೆ ವ್ಯವಹಾರವನ್ನು ನಡೆಸಿಕೊಂಡು ದಣಿವರಿಯದೆ ದುಡಿದು ಉದ್ಯಮದ ಒಳ ಹೊರಗನ್ನು ಚೆನ್ನಾಗಿ ಆರಿತುಕೊಂಡು ಕ್ರಮೇಣ ತಮ್ಮದೇ ಆದ ಹೊಟೇಲನ್ನು ಸ್ಥಾಪಿಸಿ ಓರ್ವ ಯಶಸ್ವಿ ಉದ್ಯಮಿ ಎನಿಸಿಕೊಂಡರೂ ಉದ್ಯಮದೊಂದಿಗೆ ಸಾಮಾಜಿಕ ಹಾಗೂ ಕಲಾರಂಗದಲ್ಲಿ ಶ್ರೇಷ್ಟ ಸಾಧನೆ ಗೈದು ಕೊಂಡು, ಮಲಾಡ್ ಪರಿಸರದ ತುಳು ಕನ್ನಡಿಗರನ್ನು ಒಗ್ಗೂಡಿಸಿಕೊಂಡು ಪರಿಸರದ ತುಳು ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು 1990ರಲ್ಲಿ ಮಲಾಡ್ ಕನ್ನಡ ಸಂಘ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷರಾಗಿ ಆಯ್ಕೆಯಾದರು. ಸಂಘದ ಆಶ್ರಯದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಜನಾಕರ್ಷಣೆಯನ್ನು ಪಡೆಯುತ್ತಾ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಉನ್ನತ ರೀತಿಯಲ್ಲಿ ಬೆಳೆಯುತ್ತಾ, ಬಂದ ಸಂಸೈಯು ತನ್ನ ದಶಮಾನೋತ್ಸವ ಸಂದರ್ಭದಲ್ಲಿ ತನ್ನದೇ ಆದ ಕಚೇರಿಯನ್ನು ಹೊಂದುವಲ್ಲಿ ಸಂಘ ಅಧ್ಯಕ್ಷರಾದ ಇವರ ಮುತುವರ್ಜಿ ಶ್ರಮ ಹಾಗೂ ಸಂಘಟನಾ ಚತುರತೆ ಪೂರಕಲಾಯಿತು. ತಾವು ಹಾಕಿ ಕೊಂಡ ಯೋಜನೆ ಯಶಸ್ವಿಯಾಯಿತು. ದಶಮಾನೋತ್ಸವ ಸಂದರ್ಭದಲ್ಲಿ ಸಂಘಕ್ಕೆ ಇವರು ನೀಡಿದ ವಿಶೇಷ ಕೊಡುಗೆಗಾಗಿ `ಸಂಸ್ಕøತಿ ಸೇನಾಸಿ' ಎಂಬ ಬಿರುದು ನೀಡಿ ಸನ್ಮಾನ ಗೊಂಡರು.
ಮುಂಬಯಿ ಮಹಾಬಗರದ ಅನೇಕ ಸಂಘಸಂಸ್ಥೆಗಳಲ್ಲಿ ಜರಗುವ ಕಾರ್ಯಕ್ರಮಗಳಲ್ಲಿ ಅತಿಥಿüಗಳಾಗಿ ಪಾಲ್ಗೊಂಡು ಹಲವಾರು ಸನ್ಮಾನ, ಗೌರವಗಳಿಗೆ ಪಾತ್ರರಾಗಿದ್ದಾರೆ. ಜನಸಾಮಾನ್ಯರೊಂದಿಗೆ ಬೆರೆಯುವ ಸದ್ಗುಣ ಸಂಪನ್ನರೂ, ಸಜ್ಜನರೂ, ಪರೋಪಕಾರಿ, ಕೊಡುಗೈದಾನಿಯೂ ಆಗಿರುವ ಹರೀಶ್ ಅವರ ಪತ್ನಿ ವನಿತಾ ಹಾಗೂ ಮಕ್ಕಳು ಜೀತೇಶ, ಶೋಭಿತ್ ಹಾಗೂ ಸೊಸೆ ಕೃತಿ ಅವರೊಂದಿಗೆ ಚೊಕ್ಕ ಸಂಸಾರ ನಡೆಸುತ್ತಿದ್ದಾರೆ.
ಶ್ರೀ ಚಂದ್ರಶೇಖರ್ ಬೆಳ್ಚಡ:
ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಆಗಿರುವ ಶ್ರೀ ಚಂದ್ರಶೇಖರ್ ಬೆಳ್ಚಡ ಇವರು ಕಳೆದ ಜುಲಾಯಿನಲ್ಲಿ ರಷ್ಯಾ ರಾಷ್ಟ್ರದ ಟಶ್ಖೆಂಟ್‍ನಲ್ಲಿ ಗ್ಲೋಬಲ್ ಫೌಂಡೇಶನ್ ಅಚೀವರ್ (ಜಿಎಫ್‍ಎ) ಸಂಸ್ಥೆಯಿಂದ `ಏಷಿಯಾ ಪೆಸಿಫಿಕ್ ಅಚೀವರ್ಸ್ ಅವಾರ್ಡ್ '(Asia Pacific Achievers Award) ಪುರಸ್ಕಾರಕ್ಕೆ ಪಾತ್ರರಾಗಿದ್ದರು.
ಮಂಗಳೂರು ತಾಲೂಕಿನ ವಿಶ್ವಪ್ರಸಿದ್ಧ ಕಟೀಲು ಅಲ್ಲಿನ ನಂದಿನಿ ನದಿಯ ಮೇಲ್ದಂಡೆಯ ನಿವಾಸಿಗಳೇ ರಾಮ ತಿಮ್ಮಪ್ಪ ಮತ್ತು ಸೀತು ರಾಮ ದಂಪತಿ. ಅವರ ಸುಪುತ್ರರೇ ಚಂದ್ರಶೇಖರ್ ಬೆಳ್ಚಡ. ವಾಣಿಜ್ಯ ಪದವಿಧರರಾಗಿ ರಿಫ್ರ್ಯಾಕ್ಚರ್ ಮಟೀರಿಯಲ್ ಕಂಪೆನಿಯಲ್ಲಿ ಕೆಲಸ ಆರಂಭಿಸಿದ್ದರು. ಸದ್ಯ ಥಾಣೆಯಲ್ಲಿ ತನ್ನದೇ ಆದ ಸ್ವಂತದ ಪಿ.ಪಿ ರೆಫ್ರಕ್ಟೊರೀಸ್ ಕಾಪೆರ್Çೀರೇಶನ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ದೇಶದ ಅನೇಕ ಭಾಗಗಳಲ್ಲಿ ಹಾಗೂ ಲಾಗೊಸ್, ಸಿಂಗಾಪುರ, ಥೈಲ್ಯಾಂಡ್ ಮತ್ತು ದುಬಾಯಿ (ಯುಎಇ) ದೇಶಗಳಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿದ ನಿಸ್ಸೀಮಾ ಯುವ ಉದಯೋನ್ಮುಖ ಉದ್ಯಮಿಯಾಗಿ ಗುರುತಿಸಿ ಕೊಂಡ ಇವರ ಪತ್ನಿ ದಿವಿಜಾ ಚಂದ್ರಶೇಖರ್ ಇವರು ಓರ್ವ ಅಪ್ರತಿಮ ಪ್ರತಿಭೆಯಾಗಿದ್ದು ಮುಂಬಯಿ ಅಲ್ಲಿನ ಕೆ.ಜೆ ಸೊಮಯ್ಯ ಕಾಲೇಜು ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜ್ ವಿದ್ಯಾವಿಹಾರ್ ಇದರ ಉಪ ಪ್ರಾಂಶುಪಾಲೆ ಆಗಿ ಶೈಕ್ಷಣಿಕ ಸೇವೆಗೈದಿದ್ದಾರೆ. ಸುಪುತ್ರ ಮೆಹೂಲ್ ಸಿ.ಬೆಳ್ಚಡ ಮತ್ತು ಸೊಸೆ ಅಸ್ಮಿತಾ ಎಂ.ಬೆಳ್ಚಡ ಅವರೊಂದಿಗೆ ಮುಲುಂಡ್ ಪೂರ್ವದಲ್ಲಿ ಸುಖಸಂಸಾರ ನಡೆಸುತ್ತಿದ್ದಾರೆ.