Wednesday 14th, May 2025
canara news

ಸೆ.01: ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ

Published On : 31 Aug 2018   |  Reported By : Rons Bantwal


ಬಂಟರ ಸಂಘದ ಅಂಧೇರಿ ಬಾಂದ್ರಾ ಸಮಿತಿಯ `ದಿಶಾ' ದತ್ತುಸ್ವೀಕಾರ ಕಾರ್ಯಕ್ರಮ

ಮುಂಬಯಿ, ಆ.31: ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕನಸಿನ ಕೂಸು `ದಿಶಾ' ವಿದ್ಯಾಥಿರ್üಗಳ ದತ್ತು ಸ್ವೀಕಾರ ಕಾರ್ಯಕ್ರಮ ಇದೇ ಸೆ.01ರ ಮಧ್ಯಾಹ್ನ 2.30ರಿಂದ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ನಡೆಯಲಿದೆ.

    

Padmanabh S Payyade               Karunakar M.Shetty               Dr. R. K Shetty

ಈ ವರ್ಷ ಶೈಕ್ಷಣಿಕ ಸೇವೆಯಾಗಿಸಿ ವಿದ್ಯಾಥಿರ್üಗಳ ದತ್ತು ಸ್ವೀಕಾರದೊಂದಿಗೆ ಸಮಾಜಸೇವೆ ಮಾಡುವ ಧ್ಯೇಯೋದ್ದೇಶದ ಪಥದಲ್ಲಿ ಒಂದು ಹೆಜ್ಜೆ ಮುಂದಿರಿಸಿರುವ ಸಮಿತಿಯು ಅಂಧೇರಿ ಬಾಂದ್ರಾ ಪ್ರದೇಶದ ಸುತ್ತಮುತ್ತಲಿನ ಪರಿಸರದಲ್ಲಿ ಆಥಿರ್üಕವಾಗಿ ಹಿಂದುಳಿದ ಕುಟುಂಬಗಳನ್ನು ದತ್ತು ಸ್ವೀಕರಿಸಿ ಬದುಕು ಕಟ್ಟಿಕೊಳ್ಳಲು ಆಸರೆಯಾಗುವ ಸದುದ್ದೇಶ ಹೊಂದಿ ಆ ಕುಟುಂಬಕ್ಕೆ ಬೇಕಾದ ಅಗತ್ಯ ಸೌಲಭ್ಯವನ್ನು ಒದಗಿಸಿ ಸಹಾಯ ಹಸ್ತ ನೀಡುವ ಯೋಜನೆ ಹಮ್ಮಿಕೊಂಡಿದ್ದೇವೆ.

ಬಂಟ್ಸ್ ಸಂಘದ ವಿಶ್ವಸ್ಥರು, ಪದಾಧಿಕಾರಿಗಳ ಉಪಸ್ಥಿತಿ ಮತ್ತು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮವನ್ನು ವಿಕೇ ಸಮೂಹದ ಕಾರ್ಯಾಧ್ಯಕ್ಷ ಕರುಣಾಕರ ಎಂ.ಶೆಟ್ಟಿ ಉದ್ಘಾಟಿಸಲಿದ್ದಾರೆ.

ಸಹೃದಯತೆಯ ಈ ಕಾರ್ಯದಲ್ಲಿ ಅಂಧೇರಿ ಬಾಂದ್ರಾ ಪ್ರದೇಶದ ಜನತೆಯ ಉಪಸ್ಥಿತಿ ನಮ್ಮ ಉತ್ಸಾಹಕ್ಕೆ ಪ್ರೇರಣೆ ನೀಡಲಿದೆ. ಪರಹಿತ ಚಿಂತನೆ ನಮ್ಮ ನೈತಿಕ ಜವಾಬ್ದಾರಿ ಅದು ನಮ್ಮ ಕರ್ತವ್ಯ ಎಂದು ತಿಳಿದು ನಿಷ್ಠೆಯಿಂದ ಮುಂದಡಿಯಿಡುವ ಈ ಸತ್ಕಾರ್ಯಕ್ಕೆ ಪೆÇ್ರೀತ್ಸಾಹಿಸ ಬೇಕಾಗಿ ಬಂಟರ ಸಂಘಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ.ಶೆಟ್ಟಿ, ಗೌರವ ಕಾರ್ಯದರ್ಶಿ ರವಿ ಆರ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ, ಯುವ ವಿಭಾಗದ ಕಾರ್ಯಾಧ್ಯಕ್ಷ ರಕ್ಷಿತ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಪದಾಧಿಕಾರಿಗಳು ಈ ಮೂಲಕ ತಿಳಿಸಿದ್ದಾರೆ.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here