Wednesday 14th, May 2025
canara news

ಪೇಜಾವರ ಮಠದಲ್ಲಿ ಸಂಪ್ರದಾಯಬದ್ಧವಾಗಿ ಆಚರಿಸಲ್ಪಟ್ಟ ಶ್ರೀಕೃಷ್ಣ ಜನ್ಮಾಷ್ಟಮಿ

Published On : 04 Sep 2018   |  Reported By : Rons Bantwal


ಧಾರ್ಮಿಕ-ಸಾಂಸ್ಕೃತಿಕ ಸಂಭ್ರಮ ಸಡಗರದೊಂದಿಗೆ ನೆರವೇರಿದ ವಿಟ್ಲ ಪಿಂಡಿ ಉತ್ಸವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.03: ಉಡುಪಿ ಶ್ರೀ ಪೇಜಾವರ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಕಿರಿಯ ಯತಿಶ್ರೀ ವಿಶ್ವಪ್ರಸನ್ನ ತೀರ್ಥರ ಮಾರ್ಗದರ್ಶನ ಮತ್ತು ಅನುಗ್ರಹದಿಂದ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಾದ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳೊಂದಿಗೆ ಧಾರ್ಮಿಕ-ಸಾಂಸ್ಕೃತಿಕ ಸಂಭ್ರಮ ಸಡಗರದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಸಂಪ್ರದಾಯಬದ್ಧÀ ವಿಟ್ಲ ಪಿಂಡಿ ಉತ್ಸವ ವಿಜೃಂಭನೆಯಿಂದ ಆಚರಿಸಲ್ಪಟ್ಟಿತು.

ಕಳೆದ ಆದಿತ್ಯವಾರ ಸಂಜೆ ಶ್ರೀಕೃಷ್ಣ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಹರಿಕಥೆ ಸಾದರ ಪಡಿಸಿ ಜನ್ಮಾಷ್ಟಮಿ ಸಂಭ್ರಮಕ್ಕೆ ನಾಂದಿಯಾಡಿದರು. ರಾತ್ರಿ ಶ್ರೀ ಪೇಜಾವರ ಮಠದಲ್ಲಿ ಪ್ರತಿಷ್ಠಾಪಿತ ಶ್ರೀಕೃಷ್ಣ ದೇವರಿಗೆ ತುಳಸೀ ಅರ್ಚನೆ, ಕೃಷ್ಣಾರ್ಘ್ಯ ಪ್ರದಾನ, ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಲಾಯಿತು. ವಿಷ್ಣುತೀರ್ಥ ಸಾಲಿ ಶ್ರೀ ದೇವರನ್ನು ಅತ್ಯಾಕರ್ಷಕವಾಗಿ ಪುಷ್ಪಾಲಂಕÀರಿಸಿದ್ದು, ಉಂಡಾರು ರಾಘವೇಂದ್ರ ಭಟ್ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.

ಇಂದಿಲ್ಲಿ ಸೋಮವಾರ ಮುಂಜಾನೆಯಿಂಂದಲೇ ಮಠದಲ್ಲಿ ನೆರೆದ ಅಪಾರ ಸಂಖ್ಯೆಯ ಭಕ್ತಾಭಿಮಾನಿಗಳು ಶ್ರೀಕೃಷ್ಣ ದೇವರಿಗೆ ಪೂಜೆ ನೆರವೇರಿಸಿ ಆರಾಧಿಸಿದರು. ರಂಗಪೂಜೆ, ಚೆಂಡೆÉಸುತ್ತು, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ ನಡೆಸಲ್ಪಟ್ಟಿತು. ಪೇಜಾವರ ಮಠದ ಮಧೈೀಶ ಭಜನಾ ಮಂಡಳಿಯಿಂದ ಭಜನೆ ನೇರವೇರಿತು. ಸಂಜೆ ಮಠದ ವಠಾರದಿಂದ ಪ್ರಭಾತ್ ಕಾಲೋನಿಯಾದ್ಯಂತ ದಿನೇಶ್ ಕೋಟ್ಯಾನ್ ಜೆgಮೆರಿ ಬಳಗದ ಸಾಕ್ಸೋಫೆÇೀನ್, ವಾದ್ಯ, ಬ್ಯಾಂಡು ಚೆಂಡೆಗಳ ನೀನಾದದಲ್ಲಿ ಗೊಂಬೆಯಾಟ, ವಿವಿಧ ವೇಷಭೂಷಣ, ವೈವಿಧ್ಯಗಳೊಂದಿಗೆ ಶ್ರೀಕೃಷ್ಣ ವಿಟ್ಲ ಪಿಂಡಿ ಉತ್ಸವ ಆಚರಿಸಲ್ಪಟ್ಟಿತು. ಕೆರ್ವಾಶೆ ಶ್ರೀಹರಿ ಭಟ್ ಉತ್ಸವಬಲಿಯೊಂದಿಗೆ ಕೃಷ್ಣರಥೋತ್ಸವ ನಡೆಸಿದರು.

ನಂತರ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಸಲಾಗಿದ್ದು ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ| ಎ.ಎಸ್ ರಾವ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ ನಡೆಸಲಾಯಿತು. ನಂತರ ಐಐಟಿಸಿ ಮತ್ತು ಬಿ.ಆರ್ ಹೊಟೇಲು ಸಮೂಹದ ಸಹಯೋಗದಲ್ಲಿ ಸಂಗೀತ ವಿದ್ಯಾನಿಧಿ ಡಾ| ವಿದ್ಯಾಭೂಷಣ ಬಳಗದಿಂದ ದಾಸವಾಣಿ ಭಕ್ತಿಸಂಗೀತ ಕಾರ್ಯಕ್ರಮ ನಡೆಸಲ್ಪಟ್ಟಿತು.

ಈ ಸಂದರ್ಭದಲ್ಲಿ ಎಸ್.ಎನ್ ಉಡುಪ, ಐಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಲ್, ಮುರಳೀ ಭಟ್ ಡೊಂಬಿವಲಿ, ರವಿ ಸುವರ್ಣ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ನಿರಂಜನ್ ಗೋಗ್ಟೆ, ಮುಕುಂದ ಬೈತ್ತಮಂಗಳ್ಕರ್, ಶ್ರೀನಿವಾಸ ಭಟ್ ಪರೇಲ್, ವಿದ್ವಾನ್ ಅರವಿಂದ ಬನ್ನಿಂತ್ತಾಯ, ಸುಧೀರ್ ಆರ್.ಎಲ್ ಭಟ್, ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here